Wednesday 24 March 2021

ತುಳುನಾಡ್ ಗ್ ಸುರುತ ಸ್ವಾತಂತ್ರ್ಯ

           ತುಳುನಾಡ್ ಗ್ ಸುರುತ ಸ್ವಾತಂತ್ರ್ಯ 


ತುಳುನಾಡ ಸ್ವಾತಂತ್ರ್ಯ ಭಾರತ ದೇಶದ ಸುರುತ ಸ್ವಾತಂತ್ರ್ಯ ಪನ್ಪುನೆನ್ ನಮ ಮದಪೆರೆ ಬಲ್ಲಿ.ಅಂಚನೆ ಪೋರ್ಚುಗೀಸೆರ್ನೊಟ್ಟುಗು ಸ್ವಾತಂತ್ರ್ಯೊಗಾದ್ ಸುರುಕು  ಪೊರ್ಂಬಾಟ ಮಲ್ತಿ ಉಲ್ಲಾಲದ ರಾಣಿ ಅಬ್ಬಕ್ಕನ್ಲಾ ನಮ ಮದಪೆರೆ ಬಲ್ಲಿ.

1837.ಎಪ್ರಿಲ್ 5 ತುಳುನಾಡ್ ಸ್ವಾತಂತ್ರ್ಯ ಪಡೆಯಿನ ದಿನ.ಕೇವಲ 13 ದಿನ ಮಾತ್ರ ಆ ಸ್ವಾತಂತ್ರ್ಯ ಒರಿದಿತ್ತ್ಂಡ್.ಸುಳ್ಯ ಕೆದಂಬಾಡಿ ರಾಮೇಗೌಡೆರೆ ಮುತಾಲಿಕೆಡ್ ಪೊರ್ಂಬಾಟ ನಡತ್ ದ್ ಪರೆಂಗಿಲೆರ್ದ್ ತುಳುನಾಡ್ ನ್ ಗೆಲ್ತ್ ದ್ ಎಪ್ರಿಲ್ 5_1837ಕ್ ಕುಡ್ಲದ ಬಾವುಟ ಗುಡ್ಡೆಡ್ ಪರೆಂಗಿಲೆ ಯೂನಿ ಯನ್ ಜಾಕ್ ನ್ ತಿರ್ತ್ ಜಪುಡಾದ್ ತುಳುನಾಡ ಕ್ರಾಂತಿಕಾರಿ ಕೊಡಿ ಏರಾದಿತ್ತೆರ್.ಸುಳ್ಯ ಕೆದಂಬಾಡಿ ರಾಮೆ ಗೌಡೆರೆಗ್ ಸುಬ್ರಮಣ್ಯದ ಅಪ್ಪಯ್ಯ ಪಟೇಲೆರ್ ಸಕಾಯೊಗುಂತ್ಯೆರ್.ನಂದಾರ್ ದ ಲಕ್ಷ್ಮಪ್ಪ ಬಂಗಾರಪ್ಪ,ಇಟ್ಟೇಲ್ದ ಅರಸು ಡೊಂಬ ಎಗ್ಡೆರ್,ಕುಡುಮ ಕುಮಾರಯ್ಯ ಎಗ್ಡೆರ್ ಒಟ್ಟು ಕೂಡೊಂಡೆರ್.ಸನಿವಾರ ಸಂತೆದ ಪುಟ್ಟ ಬಸಪ್ಪ ,ಕಲ್ಯಾಣ ಸ್ವಾಮಿನ ಮುತಾಲಿಕೆಡ್ ಪೊರ್ಂಬಾಟದ ದಂಡ್ ಕುಡ್ಲಗೆತ್ತ್ ನಗ 10,000ಜನ ಇತ್ತೆರ್.1837_ಎಪ್ರಿಲ್ 5ನೆನಾನಿ ತುಳುನಾಡ ಕೊಡಿ ಏರ್ದ್ ಕೊಡಗುದ ಅರಸು ಕಲ್ಯಾಣ ಸ್ವಾಮಿ ತುಳುನಾಡ್ ನ್ 13 ದಿನ ಅರಸೊಳಿಗೆ ಮಲ್ತೆ.ಈ ಪೊರ್ತುಗು ಬ್ರಿಗೇಡಿಯರ್ ಅಲೆನ್ ನೊಟ್ಟುಗು ಸೇರ್ದ್ ಕ್ಯಾಪ್ಟನ್ ಲೆವಿನ್ ದಂಡ್ ಕನತ್ ದ್ ಎಪ್ರಿಲ್ 19ಗು ಪುಂಡು(ಮುತ್ತಿಗೆ)ಬೂರ್ಯೆರ್.ಈ ಪೊರ್ತುಗು ಪರೆಂಗಿಲೆ ಕೈಕ್ ತಿಕ್ಕಿ ಲಕ್ಷ್ಮಪ್ಪ ಬಂಗಾರಪ್ಪ,ಮಂಜ ವೈದ್ಯ,ಗುಡ್ಡೆಮನೆ ಅಪ್ಪಯ್ಯ ಮೊಕ್ಲೆನ್ವಕುಡ್ಲ ಬೊಕ್ಕ ಮಡಿಕೇರಿಡ್ ನಾಲಿಗುರ್ಲು ಪಾಡ್ದ್ ನೇಲ್ಪಾದ್ ಪರೆಂಗಿಲು ಕೆರ್ಯೆರ್.ಬಾರತದ ಸುರುತ ಸ್ವಾತಂತ್ರ್ಯ ಸಂಗ್ರಾಮ 1857 ಆಂಡ ಅವೆರ್ದ್ 20 ವರ್ಸ ದುಂಬೇ ಎಪ್ರಿಲ್5_1837ಕ್ ತುಳುನಾಡ್ ಸ್ವತಂತ್ರ ಒಂತೆ ದಿನತ ಮಟ್ಟ್ ಗಾಂಡಲ ಆದಿತ್ತ್ಂಡ್.ಆಂಡ ಭಾರತದ ಸ್ವಾತಂತ್ರ್ಯ ಪೊರ್ಂಬಾಟದ ಪಿರಾಕ್ಡ್ ತುಳುನಾಡ್ ಸ್ವಾತಂತ್ರ್ಯ ಪಡೆಯಿನ ಇಚಾರ ಸೇರಾವಂದೆ ಪೋಯಿನವು ಬೇಜಾರ್ದ ಸಂಗತಿ.

_ತುಳು ಒರಿಪುಗ

            1837 ಎಪ್ರಿಲ್ 5 ನೆತಾನಿ ಸುರುತ ಸ್ವಾತಂತ್ರ್ಯ ಬಾವುಟ ಕುಡಲದ ಬಾವುಟಗುಡ್ಡೆಡ್ ಏರ್ಂಡ್



ಮಂಗಳೂರು.  ದಿನಾಂಕ 5-04-2021 ಬಾವುಟ ಗುಡ್ಡೆ ಯಲ್ಲಿ ತುಳುನಾಡ ರಕ್ಷಣಾ ವೇದಿಕೆ ನೇತೃತ್ವದಲ್ಲಿ   ತುಳುನಾಡ ಸ್ವಾತಂತ್ರ್ಯ ನೆನಪು ಕಾರ್ಯಕ್ರಮ ಮಾತನಾಡಿದ ಯೋಗೀಶ್ ಶೆಟ್ಟಿ ಜಪ್ಪುರವರು  ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಹಿಂಸೆಯ, ಹಿಂಸೆಯ, ತೀವ್ರಗಾಮಿತ್ವದ ಕಲ್ಪನೆಯಡಿಯಲ್ಲಿ ದೇಶಕ್ಕೋಸ್ಕರ  ಸ್ವತಂತ್ರ ಭಾರತಕ್ಕೋಸ್ಕರ ಅದೆಷ್ಟೋ ಜನ ತನ್ನ ಆತ್ಮ ಬಲಿದಾನಗೈದು ನಮ್ಮ ದೇಶಕ್ಕೆ ೧೯೪೭ ಆಗಸ್ಟ್ ೧೫ರಂದು ಸ್ವಾತಂತ್ರ್ಯ |ಲಭಿಸಿರುವುದು ನಮಗೆಲ್ಲರಿಗೂ ತಿಳಿದ ವಿಷಯ. ಆದರೆ ಅದಕ್ಕಿಂತ ಹಿಂದೆಯೇ ಸ್ವಾತಂತ್ರ್ಯದ ಬಗೆಗೆ ಕೆಚ್ಚೆದೆಯಿಂದ ಹೋರಾಡಿ ಪೋರ್ಚುಗೀಸರನ್ನು ಓಡಿಸಿದ ವೀರರಾಣಿ ಅಬ್ಬಕ್ಕರನ್ನು ಇಲ್ಲಿ ನೆನಪಿಸಬೇಕಾಗಿದೆ. ಸ್ವಾತಂತ್ರ್ಯ ಚರಿತ್ರೆಯ ಪುಟಗಳಲ್ಲಿ ಚೌಟ ರಾಣಿ ಉಳ್ಳಾಲದ ಅಬ್ಬಕ್ಕನ ಹೆಸರು ಎಲ್ಲೂ ಕಾಣಸಿಗದಿರುವುದು ಬೇಸರದ ಸಂಗತಿ.
ಅಂತೆಯೇ ಭಾರತಕ್ಕೆ ಸ್ವಾತಂತ್ರ್ಯ ಲಭಿಸುವ ಮೊದಲೇ ನಮ್ಮ ತುಳುನಾಡಿನಲ್ಲಿ ಅಂದರೆ, ಸ್ವಾತಂತ್ರ್ಯ ಲಭಿಸುವ ಸುಮಾರು ೧೧೦ ವರ್ಷಗಳ ಹಿಂದೆ ಸ್ವಾತಂತ್ರ್ಯ ಧ್ವಜವನ್ನು ಎಪ್ರಿಲ್ ೫, ೧೮೩೭ಕ್ಕೆ ಮಂಗಳೂರಿನ ಬಾವುಟಗುಡ್ಡದಲ್ಲಿ ಹಾರಿಸಿದವರು ತುಳು - ಕನ್ನಡಿಗರು. ಈ ವಿಚಾರ ಸ್ವಾತಂತ್ರ್ಯದ ಚರಿತ್ರೆಯ ಪುಟಗಳಲ್ಲಿ ಕಾಣಸಿಗುವುದೇ ಇಲ್ಲ.
ಕ್ರಿ.ಶ. ೧೮೩೭ರಲ್ಲಿ ಕಲ್ಯಾಣ ಸ್ವಾಮಿಯ ಮತ್ತು ಕೆದಂಬಾಡಿ ರಾಮೇಗೌಡರ ನೇತೃತ್ವದಲ್ಲಿ ಬ್ರಿಟಿಷರ ವಿರುದ್ಧ ದಂಗೆಯೊಂದು ಮಂಗಳೂರಿನಲ್ಲಿ ನಡೆದಿದ್ದು ತುಳುನಾಡಿನ ಪ್ರಥಮ ಸ್ವಾತಂತ್ರ್ಯ ಹೋರಾಟ ಎಂದೇ ಗುರುತಿಸಿಕೊಂಡಿದೆ. ೧೮೩೭ರ ಮಾರ್ಚ್ ೨೯ರಂದು ಸುಳ್ಯದಿಂದ ಹೊರಟ ಈ ಸೇನೆ ಎಪ್ರಿಲ್ 5 ರಂದು ಮಂಗಳೂರು ತಲುಪಿ ಬ್ರಿಟಿಷರನ್ನು ಓಡಿಸಿ ಠಾಗೋರ್ ಪಾರ್ಕ್‌ನಲ್ಲಿ ತುಳುನಾಡಿನ ಸ್ವಾತಂತ್ರ ಧ್ವಜವನ್ನು ಸ್ಥಾಪಿಸಿದರು. ಕಲ್ಯಾಣಸ್ವಾಮಿ, ಕೆದಂಬಾಡಿ ದಾಮೋದರ ಲಕ್ಷ್ಮಪ್ಪ ಬಂಗರಸ, ಹುಲಿಕುಂಡ ನಂಜಯ್ಯ, ಉಪ್ಪಿನಂಗಡಿ ಮಂಜ ಇವರೆಲ್ಲರೂ ಒಗ್ಗೂಡಿ  ಮಾರ್ಚ್ 29 ರಂದು ಸುಳ್ಯದಿಂದ ಹೊರಟು ಮಂಗಳೂರಿಗೆ ಬರುವ ದಾರಿಯಲ್ಲಿ ಅದೆಷ್ಟೋ ತುಳುವರ ಆತಿಥ್ಯವನ್ನು ಪಡೆದು ಅಲ್ಲಿನ ಯುವಕರನ್ನು ಒಗ್ಗೂಡಿಸಿಕೊಂಡು, ಬ್ರಿಟಿಷರನ್ನು ಸೋಲಿಸಲು ಬೇಕಾದ ತಂತ್ರವನ್ನು ರೂಪಿಸಿಕೊಂಡು, ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಬೇಕಾದ ಆರ್ಥಿಕ ಸಹಾಯ, ಆಹಾರ ಪದಾರ್ಥ, ಆಯುಧಗಳನ್ನು ಪಡೆದುಕೊಂಡು ಮಂಗಳೂರು ತಲುಪಿ ಬ್ರಿಟಿಷ್ ಸೇನಾ ತುಕಡಿಯೊಂದಿಗೆ ಹೋರಾಟ ನಡೆಸಿ, ಬ್ರಿಟಿಷರು ಹಡಗಿನ ಮೂಲಕ ಪಲಾಯನ ಮಾಡುವಂತೆ ಮಾಡುತ್ತಾರೆ. ಆ ದಿನವೇ ತುಳುನಾಡಿನ ಪಾಲಿಗೆ ಸ್ವಾತಂತ್ರ್ಯ ಲಭಿಸಿದ ದಿನ. ಎಪ್ರಿಲ್ 5,  1837 ಅಂದು ಬ್ರಿಟಿಷರ ಪತಾಕೆಯನ್ನು ಕಿತ್ತೆಸೆದು ತುಳುನಾಡಿನ  ಬಾವುಟವನ್ನು ಹಾರಿಸಿದ ಸ್ವಾತಂತ್ರ್ಯ ಯೋಧರನ್ನು ನಾವಿಂದು ಸ್ಮರಿಸಬೇಕಾಗಿದೆ. ಇದು ತುಳುವರ ಸ್ವಾತಂತ್ರ್ಯ ಹೋರಾಟದ ವಿಜಯದ ಧ್ವಜವೂ ಹೌದು. ಆದರೆ ತುಳುನಾಡಿನ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಪಠ್ಯಪುಸ್ತಕಗಳಲ್ಲಿ ಎಲ್ಲಿಯೂ ಉಲ್ಲೇಖವಿಲ್ಲದಿರುವುದು ಬಹಳ ಬೇಸರದ ವಿಚಾರ.ಆದರೆ
ಸ್ವತಂತ್ರ ತುಳುನಾಡಿನ ಸಂತೋಷದ ದಿನಗಳು ಬಹಳಷ್ಟು ಸಮಯ ಮುಂದುವರಿಯುವುದಿಲ್ಲ. ಭಾರೀ ಸೇನೆ, ಮದ್ದುಗುಂಡುಗಳನ್ನು ಹಿಡಿದು ಮರಳಿ ಬಂದ ಬ್ರಿಟಿಷ್ ಸೇನೆ ತುಳುನಾಡಿನ ಈ ಸ್ವಾತಂತ್ರ್ಯ ಹೋರಾಟಗಾರರನ್ನು ಬಗ್ಗುಬಡಿಯುತ್ತಾರೆ. ಇವರಲ್ಲಿ ರೂವಾರಿಗಳಾದ ಐವರನ್ನು ಮಂಗಳೂರಿನ ಈಗಿನ ಬಿಕರ್ನಕಟ್ಟೆ ಎಂಬಲ್ಲಿರುವ ವಿಶಾಲವಾದ ಆಲದ ಮರಕ್ಕೆ ನೇಣಿಗೆ ಸಿಲುಕಿಸಿ  ಕೊಲ್ಲುವುದರಲಿ ಬ್ರಿಟಿಷ್ ಸೇನೆ ಯಶಸ್ಸನ್ನು ಪಡೆಯುತ್ತದೆ. ಅಮಾನುಷವಾಗಿ ಹತ್ಯೆಯಾದ ಈ ಐವರ ದೇಹಗಳೂ ಕೆಲ ದಿನಗಳ ಕಾಲ ಆ ಮರದಲ್ಲೇ ನೇತಾಡುತ್ತಿದ್ದುದು, ಆ ವಾತಾವರಣದಲ್ಲಿದ್ದವರಿಗೆ ಭಯವನ್ನುಂಟು ಮಾಡಿಸುತ್ತದೆ.
ಈ ಮೃತದೇಹಗಳು ಭಯವನ್ನು ಹುಟ್ಟಿಸುವಂತಿದ್ದು ರಣಹದ್ದುಗಳು ಅವುಗಳನ್ನು ಕುಕ್ಕಿ ತಿನ್ನುತ್ತಿದ್ದು, ಭೀಕರ ರಣಕಟ್ಟೆಯಾಗಿ ಎಲ್ಲರನ್ನೂ ಭಯಬೀಳಿಸುತ್ತದೆ. ಮುಂದೆ ಭೀಕರ ರಣಕಟ್ಟೆಯೇ ಬಿಕರ್ಣಕಟ್ಟೆಯಾಗಿ ಚಾಲ್ತಿಗೆ ಬಂದಿದೆ.
ತುಳುನಾಡಿನಲ್ಲಿ 1837 ರಲ್ಲಿ ನಡೆದ ಮೊದಲ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿ ಬಲಿದಾನಗೈದವರ ನೆನಪಿಗಾಗಿ ನಮ್ಮ ತುಳುನಾಡ ರಕ್ಷಣಾ ವೇದಿಕೆ ಸರ್ವ ತುಳು ಸಂಘಟನೆಗಳ ಒಕ್ಕೂಟದ ಜೊತೆಜೊತೆಗೆನೇ ೨೦೧೪ರಿಂದಲೇ ತುಳುನಾಡಿನಾದ್ಯಂತ `ತುಳುನಾಡ ಸ್ವಾತಂತ್ರ್ಯದ ಪೊರುಂಬಾಟದ ನೆಂಪು' ದಿನವನ್ನು ಪ್ರತಿ ವರ್ಷ ಎಪ್ರಿಲ್ ೫ರಂದು ನಡೆಸುತ್ತಾ ಬಂದಿದೆ. ತುಳುನಾಡಿನ ರಕ್ಷಣೆಗಾಗಿ ಅಂದು ಪ್ರಾಣತೆತ್ತವರ ಸ್ಮರಣಾರ್ಥ ಬಾವುಟಗುಡ್ಡೆಯಲ್ಲಿ ಸ್ಮಾರಕವೊಂದನ್ನು ನಿರ್ಮಾಣ ಮಾಡಬೇಕಾಗಿದೆ ಎಂದು ಯೋಗೀಶ್ ಶೆಟ್ಟಿ ಜಪ್ಪು ಒತ್ತಾಯಿಸಿದರು. ಅರೆಭಾಷೆ ಸಂಸ್ಕೃತಿ ಅಕಾಡೆಮಿ ಮಾಜಿ ಅಧ್ಯಕ್ಷರಾದ ಎನ್.ಎಸ್. ದೇವಿಪ್ರಸಾದ್ ಸಂಪಾಜೆ. ಕುದ್ಕಾಡಿ ವಿಶ್ವನಾಥ ರೈ, ಹರಿಕೃಷ್ಣ ಪುನರೂರು ಸೇರಿದಂತೆ ಹಲವಾರು ಮುಖಂಡರ ಮಾರ್ಗದರ್ಶನದಲ್ಲಿ ಬಹಳಷ್ಟು ವರ್ಷಗಳಿಂದ ನಮ್ಮ ಸಂಘಟನೆಯ ಮೂಲಕ ತುಳುನಾಡಿನ ಬೇರೆ ಬೇರೆ ಪ್ರದೇಶಗಳಲ್ಲಿ ತುಳುನಾಡಿನ ಸ್ವಾತಂತ್ರ್ಯದ ಹೋರಾಟದ ಬಗೆಗೆ ಜನರಿಗೆ ವಿಚಾರವನ್ನು ತಲುಪಿಸುವ  ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ, ಮಾಡುತ್ತಿದ್ದೇವೆ. ತುಳುನಾಡಿನ ಎಲ್ಲ ಸಾಂಸ್ಕೃತಿಕ, ಆಡಳಿತಾತ್ಮಕ ಕ್ಷೇತ್ರದ ತುಳುವರನ್ನು ಒಗ್ಗೂಡಿಸಿಕೊಂಡು ತುಳುನಾಡಿನ ಸ್ವಾತಂತ್ರ್ಯದ ಹೋರಾಟ
ತುಳುನಾಡಿನ ಜನರ ಬದುಕಿನೊಂದಿಗೆ ಹಾಸುಹೊಕ್ಕಾಗಿರುವ ತುಳುನಾಡ ರಕ್ಷಣಾ ವೇದಿಕೆ ಸರ್ವ ತುಳು-ಕನ್ನಡಿಗರು ಒಪ್ಪಿ ಮುನ್ನಡೆಸಿದ ಸಂಘಟನೆ. ನಿಸ್ವಾರ್ಥ ಸೇವೆ, ಜಾತೀಯತೆಯನ್ನು ಮೀರಿದ ಮಾನವೀಯ ನೆಲೆಗಟ್ಟಿನಲ್ಲಿ ಬೆಳೆದ ನಮ್ಮ ಸಂಘಟನೆ ಸಾಹಿತ್ತಿಕವಾಗಿ ಜನರನ್ನು ತಲುಪಬೇಕೆಂಬ ಇರಾದೆಯಿಂದ ಸಾಮಾಜಿಕ ಕೆಡುಕು, ಹುಳುಕುಗಳನ್ನು ನಿವಾರಿಸಿ ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು ಎಂಬ ಧ್ಯೇಯೋದ್ದೇಶಗಳನ್ನಿರಿಸಿ ಜಗತ್ತಿನೆಲ್ಲೆಡೆ  ತುಳುನಾಡ ಬದುಕನ್ನು ಕಟ್ಟಿಕೊಡುವ ಕೆಲಸವನ್ನು ಆರಂಭಿಸಿ ಹೆಜ್ಜೆ ಇಡುತ್ತಿದ್ದೇವೆ. ಸರ್ವ ಮತ ಧರ್ಮಗಳ ತುಳು-ಕನ್ನಡಿಗರು ನಮ್ಮ ಈ ಸೇವೆಯನ್ನು ಗುರುತಿಸಿ ಮುಕ್ತಕಂಠದಿಂದ ಶ್ಲಾಘಿಸುವುದರ ಜೊತೆಜೊತೆಗೆ ಸರ್ವ ರೀತಿಯ ಸಹಕಾರಗಳನ್ನು ನೀಡುತ್ತಿದ್ದಾರೆ. ತುಳುನಾಡು, ತುಳು ಸಂಸ್ಕೃತಿ, ತುಳು ಭಾಷೆಯನ್ನು ಇನ್ನಷ್ಟು ಔನ್ನತ್ಯಕ್ಕೇರಿಸಲು ತುಳು ಭಾಷೆಯನ್ನು ೮ನೇ ಪರಿಚ್ಛೇದಕ್ಕೆ ಸೇರಿಸಲು ನಮ್ಮಿಂದ ಎಷ್ಟು ಸಾಧ್ಯವೋ ಅದನ್ನೂ ಮೀರಿ ಪ್ರಯತ್ನಿಸುತ್ತಿದ್ದೇವೆ. ನಮ್ಮ ಒಕ್ಕೊರಲ ದನಿಗೆ ಸನ್ಮಾನ್ಯ ಶಾಸಕರು, ಸಚಿವರುಗಳು, ಸಚೇತರರು ದನಿಗೂಡಿಸುವ ಮೂಲಕ ತುಳು ನಮ್ಮ ಉಳಿಸಿ ಬೆಳೆಸುವಲ್ಲಿ ನಾವೆಲ್ಲಾ ಶತಪ್ರಯತ್ನ ಮಾಡಬೇಕು. ಆಶಯವೂ ಇದೇ ಆಗಿದೆ.  ಸರ್ವ ತುಳುವರ ದನಿಯಾಗಿದೆ ಎಂದು ಹೇಳಲು ನಮಗೆ ಹೆಮ್ಮೆಯೆನಿಸುತ್ತದೆ.
-ಯೋಗೀಶ್  ಶೆಟ್ಟಿ ಜಪ್ಪು

     
5-4-2021.ತುಳುನಾಡ ರಕ್ಷಣಾ ವೇದಿಕೆದ ವತಿರ್ದ್ ತುಳುನಾಡ ಸ್ವಾತಂತ್ರ್ಯದ ಪೊರ್ಂಬಾಟದ ನೆಂಪುಡು ಕುಡ್ಲದ ಬಾವುಟ ಗುಡ್ಡೆಡ್ ಬೊಲ್ಪುಗು ನಡತಿ ದ್ವಜಾರೋಹಣ






ತುಳುನಾಡ ರಕ್ಷಣಾ ವೇದಿಕೆ ಮುತಾಲಿಕೆಡ್ ತುಳುನಾಡ ಸ್ವಾತಂತ್ರ್ಯ ದಿನೊತ ನೆಂಪು


ಕೃಪೆ

ಯೋಗೀಶ್ ಶೆಟ್ಟಿ ಗುರ್ಕಾರ್ರ್,ತುಳುನಾಡ ರಕ್ಷಣಾ ವೇದಿಕೆ







ಮಾಯಿತಿ-ಪನಿಶ್ ಅಮ್ಟಾಡಿ


No comments:

Post a Comment