Friday 14 October 2011

ನಾಥ ಪಂಥದ ಜೋಗಿಗಳು /natha panthada jogigalu

  ನಾಥ ಪಂಥದ  ಜೋಗಿಗಳು /natha panthada jogigalu
       
                                     ನವನಾಥರು
        "ಆತ್ಮ ಯಾವ ಕುಲ ?,ಜೀವ ಯಾವ ಕುಲ?"; ಎಂದು ಪ್ರಶ್ನಿಸಿದ ಕನಕದಾಸರು ಸಮಾಜದ ಕ್ರಾಂತಿಗೆ ಕಾರಣರಾದರೆ ಅದನ್ನು ಪ್ರಶ್ನಿಸುವ ಅನಿವಾರ್ಯತೆ ಬಂದದ್ದು ಅವರು ಸಮಾಜದ ಕೆಳಸ್ತರ ಕುಲದಲ್ಲಿ ಜನಿಸಿದ್ದರಿಂದ .ಅಂತೆಯೇ ಸಮಾಜದಲ್ಲಿ ಬ್ರಾಹ್ಮಣ ,ಕ್ಷತ್ರಿಯ ,ವೈಶ್ಯ ಮತ್ತು ಶೂದ್ರ ಎಂದು ವೇದ ಕಾಲದಿಂದಲೂ ವರ್ಣಾಶ್ರಮ ವಿಂಗಡಣೆಯಿತ್ತು . ಪ್ರತಿಯೊಬ್ಬನೂ ಆಯಾ ಕುಲದ ,ಆಯಾ ವರ್ಣಾಶ್ರಮ ಧರ್ಮವನ್ನು ಪಾಲಿಸಬೇಕಿತ್ತು.ಒಂದು ವರ್ಣದವರ ಕೆಲಸವನ್ನು ಇನ್ನೊಂದು ವರ್ಣದವರು ಮಾಡುವಂತಿರಲಿಲ್ಲ . ಬಹಳ ಹಿಂದಿನಿಂದಲೂ ಶೈವರು ,ವೈಷ್ಣವರು ಎಂಬ ಎರಡು ಪಂಥಗಳು ಅಸ್ತಿತ್ವದಲ್ಲಿತ್ತು.
                  ಕಾನ್ ಫಟ್-ಕೆಬಿಟ್  ಕರ್ಣ ಕುಂಡಲ
                              ನಿವೃತ್ತಿ ನಾಥ್ ಹಾವೇರಿ

 .ವೈಷ್ಣವರು ವಿಷ್ಣುವಿನ ಆರಾಧಕರಾದರೆ ಶೈವರು ಶಿವನ ಆರಾಧಕರು . ಬ್ರಾಹ್ಮಣರು ವಿಷ್ಣುವನ್ನು ಪೂಜಿಸಿದರೆ ಶೈವರು ಶಿವನನ್ನೇ ದೇವರೆಂದು ನಂಬಿದವರು .ಪ್ರಪಂಚ,ಪಂಚಬೂತಾತ್ಮಕ ಪರಪಂಚ,ಪರಮಾತ್ಮ,ಪರಮ ಆತ್ಮ,ಪರಮೇಶ್ವರ,ಪರಮ ಈಶ್ವರ,ಪರ ದೈವ ಇಲ್ಲಿ ಇಹದಲ್ಲಿದ್ದುಕೊಂಡು ಪರದಲ್ಲಿರುವ ಆತ್ಮವನ್ನು ಆರಾದನೆ ಮಾಡುವುದು.ಶಿವ ಪಾರ್ವತಿಯರು ನೇರ ಸೃಷ್ಠಿ ಯ ನಿರಂತರ ಹರಿವಾದರೆ ಜ್ಞಾನದ ನಿರಂತರ ಚಲನೆಯ ರೂಪವೇ ಶಿವ,ಸೃಷ್ಟಿಸುವ,ಲಯವಾದುದನ್ನು ಮರು ಸೃಷ್ಟಿಸುವ ಸಾಮರ್ಥ್ಯವಿರುವುದು ಶಿವನಿಗೆ.ಎಲ್ಲವನ್ನೂ ಸುಡಬಹುದು.ಭಸ್ಮವನ್ನು ಸುಟ್ಟರೆ ಸಿಗುವುದು ಅದೇ ಭಸ್ಮ.ಯಾವುದನ್ನು ಸುಡಲಾಗುವುದಿಲ್ಲವೊ,ಸುಟ್ಟುದು ಅಂತಿಮವೋ ಅದೇ ಶಿವ. ಉತ್ತರ ಕರ್ನಾಟಕದಲ್ಲಿ ಶಿವಶರಣರು ಶಿವನ ಆರಾಧಕರದರೆ ,ಲಿಂಗಾಯತರು ಕೂಡ ಶಿವನನ್ನೇ ನಂಬಿದವರು .ಅವರವರ ನಂಬಿಕೆ ,ಆಚರಣೆಗಳು ಬೇರೆ ಬೇರೆಯಾದರೂ ಮೂಲ ಸೆಲೆಯೊಂದೆ,ಭಕ್ತಿ -ಪಾರಮಾರ್ಥ .ಭಾರತದಲ್ಲೂ ಶೈವರು ಅಧಿಕವಾಗಿದ್ದಾರೆ ಎಂಬುದಕ್ಕೆ ಜೋಗಿ -ಯೋಗಿ -ನಾಥ ಪಂಥದ ಸಂಪ್ರದಾಯದವರೇ ಸಾಕ್ಷಿ .ಉತ್ತರ ಭಾರತದಲ್ಲಿ ಅಧಿಕವಾಗಿರುವ ಶೈವರು ಮೂಲದಲ್ಲಿ ಹಿಂದಿ ಭಾಷಿಗರು .ನಿಜವಾಗಿ ಜೋಗಿ ಸಮಾಜದ ನಮ್ಮ ಮೂಲ ಭಾಷೆ ಹಿಂದಿ .ಮತ್ಸ್ಯೇನ್ದ್ರ  ನಾಥರ ಅನುಯಾಯಿಗಳಾದ ನಾವು ಸಸ್ಯಾಹಾರಿಗಳಾಗಬೇಕಿತ್ತು.ಆದರೆ ಸಮಾಜ ,ಬದಲಾವಣೆ ,ಪ್ರಾದೆಶಿಕತೆಗಳನ್ನೊಳಗೊಂಡು ಅಲ್ಲಿನ ಬದುಕಿಗೆನಾವು ಹೊಂದಿಕೊಳ್ಳಬೇಕಾಯಿತು .    
          

ಕುದುರೆ ಮೇಲೆ ಕುಳಿತ ಜೋಗಿ ಅರಸರು,ಕದಿರೆ ಜೋಗಿ ಮಠ.ಚಿತ್ರ-ಧರ್ಮದೈವ

 ನಮಗೂ ಉಣ್ಣೆಯ ಪವಿತ್ರ ಜನಿವಾರವಿದೆ .ಶಿವನ ಆರಾಧಕರಲ್ಲಿ ಲಿಂಗಾಯತರು ಆಯತ ಲಿಂಗವನ್ನು ಧರಿಸಿದ್ದರೆ ಜೋಗಿ ಸಮಾಜದವರು ಸಿಂಗ್ನಾತವನ್ನು ಧರಿಸುತ್ತಾರೆ .ನಮ್ಮಲ್ಲಿ ಹುಟ್ಟಿನಿಂದ ಹಿಡಿದು ಸಾವಿನವರೆಗಿನ ಆಚರಣೆಗಳು ಕೂಡಾ ವೈಷ್ಣವ ಸಂಪ್ರದಾಯಕ್ಕಿಂತ ಭಿನ್ನವಾಗಿರುತ್ತವೆ .ಪ್ರಾದೇಶಿಕ ಅನಿವಾರ್ಯತೆಯನ್ನು ಅರಿತುಕೊಂಡ ಜೋಗಿ ಜನಾಂಗ ತಮ್ಮ ವೃತ್ತಿಯನ್ನು ಅಲ್ಲಿಗನುಗುಣವಾಗಿ ಆರಿಸಿಕೊಂಡಿತು .ಜೋಗಿ -ಯೋಗಿ ಅಂದರೆ ಅಲೆಮಾರಿ ,ಜೋಳಿಗೆ ಹಾಕಿ ಸುತ್ತುವವ ,ಮುಂದೆ ಭಕ್ತಿಯ ಪಾರಮ್ಯತೆಯಿಂದ ಜೋಗಿ ತ್ಯಾಗಿಯಾಗಿ ಯೋಗಿಯಾಗಿ ಜೀವನವನ್ನು ಸವೆಸುವವ.       

                                ಮತ್ಸ್ಯೇಂದ್ರ ನಾಥೆರ್          

            ವೃತ್ತಿಧರ್ಮಕ್ಕನುಗುಣವಾಗಿ ನೋಡುವುದಾದರೆ ಮೂಲದಲ್ಲಿ ಜೋಗಿ ಜನಾಂಗ ಬಡವರಾಗಿದ್ದರು  .ಅವರ ಐಡೆಂಟಿಟಿ ಕಾಣಸಿಗುವುದು [ಅನನ್ಯತೆ ] ಹೆಚ್ಚಾಗಿ ದೈವಾರಾಧನೆಗಳಲ್ಲಿ .ವೈಷ್ಣವ ಪರಂಪರೆಯಿಂದ ದೈವಾರಾಧನೆ ಸಂಪೂರ್ಣ ನೆಲ ಕಚ್ಚುವ ಹಂತದಲ್ಲಿರುವಾಗ ತಂತ್ರ ಮಂತ್ರ ಪ್ರವೀಣರಾದ ಶೈವ ಜೋಗಿಗಳು ದೈವಾರಾಧನೆಯನ್ನು ಪುನರುಜ್ಜೀವನಗೊಳಿಸಿದರು . ಆ ಗೌರವದಿಂದ ಮೂಲ ದೈವ ನರ್ತಕರು ಸೋಣಂದ ಜೋಗಿ ,ಕಾವೇರಿ ಪುರುಷೆ ,ಮಾಯಿದ ಪುರುಷೆರ್ ,ಪುರುಷ ವೇಷ ,ಜೋಗಿ ಪುರುಸೆರ್ ಎಂದು ಆಷಾಢ ಮಾಸದಲ್ಲಿ ನೆನಪಿಸಿಕೊಳ್ಳುತ್ತಾರೆ . ಪುರುಷರು ಅಜಲು ಪದ್ಧತಿ ಪ್ರಕಾರ ತುಳುನಾಡಿನಲ್ಲಿ ದೈವದ ಉಂಬಳಿ ಭೂಮಿ ಪಡೆದು ಕೊಂಬು ವಾದ್ಯಗಳ ಮೂಲಕ ದೈವದ ಚಾಕಿರಿ ಮಾಡುತ್ತಾರೆ . ಅದು ಅವರ ಮೂಲ ವೃತ್ತಿಯಲ್ಲದ ಕಾರಣ ವರ್ಷಕ್ಕೊಮ್ಮೆ ಮಠಕ್ಕೆ ಹೋಗಿ ತಪ್ಪು ಕಾಣಿಕೆಯನ್ನು ಹಾಕುತ್ತಾರೆ ಜೋಗಿಯವರನ್ನು ಅವರ ವೃತ್ತಿಗನುಗುಣವಾಗಿ ವಾದ್ಯದವರು ,ಪುರುಷರು ,ಜೋಗಿಲು ,ಪುರ್ಸೆರ್ ಎಂದೆಲ್ಲ ಕರೆಯುತ್ತಾರೆ.  .ಇನ್ನು ಮುಂದೆ ಉಡುಪಿ ತಾಲೂಕಿನತ್ತ ತೆರಳಿದರೆ ಬಳೆಗಾರ ವೃತ್ತಿ ಮಾಡುವವರನ್ನು ಬಳೆಗಾರ ಜೋಗಿ ಎಂದು ಕರೆಯುತ್ತಾರೆ .ವೃತ್ತಿಗನುಗುಣವಾಗಿ ಹೆಸರುಗಳು ಬೇರೆ ಬೇರೆಯಾದಾರೂ ಅವರೆಲ್ಲರೂ ಜೋಗಿಗಳೇ. ಅಧುನಿಕ ಯುಗದಲ್ಲಿ ಜೋಗಿಗಳ ವೃತ್ತಿಧರ್ಮ ಅತ್ಯಂತ ಕಡಿಮೆಯಾಗತೊಡಗಿದೆ .ಸರಕಾರದಿಂದ ಹಿಂದುಳಿದ ವರ್ಗ ಎಂದು ಗುರುತಿಸಲ್ಪಟ್ಟ ಜೋಗಿ ಸಮಾಜ ಈಗ ಮುಂದುವರಿದ ಜನಾಂಗ ಎಂದು ಗುರುತಿಸಲ್ಪಟ್ಟಿದೆ .ಮುಂದುವರಿಯುತ್ತಿರುವ ಆಧುನಿಕತೆಗೆ ತಕ್ಕಂತೆ ಉನ್ನತ ಉದ್ಯೋಗದಲ್ಲಿ ನಮ್ಮ ಸಮಾಜ ಬಾಂಧವರಿದ್ದಾರೆ .ಎಲ್ಲ ಕ್ಷೇತ್ರಗಳಲ್ಲೂ ಕೈಯಾಡಿಸುತ್ತಿರುವ ನಮ್ಮ  ಜೋಗಿ ಸಮಾಜದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥರಂಥಹ ಅನೇಕ ರಾಜಕೀಯ ನೇತಾರರಿದ್ದಾರೆ,ಕದ್ರಿ ಗೋಪಾಲ ನಾಥರಂತಹ ಆಸ್ಥಾನ ವಿದ್ವಾಂಸರಿದ್ದಾರೆ,ಯಶು ವಿಟ್ಲ ರಂತಹ ಹಿರಿಯ ಪತ್ರಕರ್ತರಿದ್ದಾರೆ ,ಕಿರಣ್ ಜೋಗಿ ,ಪುರುಷೋತ್ತಮ್ ಜೋಗಿಯವರಂಥಹ ಸಂಘಟನಾ ಚತುರರಿದ್ದಾರೆ .          

          
17ನೇ ಶತಮಾನದ ನಾಥ ಪಂಥದ ಯೋಗಿಗಳ  ತೈಲ ಚಿತ್ರ                                                                                                                       ಪುರುಷ -ಅಂದರೆ ವ್ಯಕ್ತಿ ,ಪುರುಷ ಎಂದರೆ ಅಭಿವ್ಯಕ್ತಿ .ಆತನೇ ಜೋಗಿ ಸಮಾಜದ ಅನನ್ಯತೆಯ ನೇತಾರ .ಪುರುಷರು ಎಂದಾಗ ಕೀಳರಿಮೆ ಇಟ್ಟುಕೊಳ್ಳಬಾರದು .ಏಕೆಂದರೆ ಶೈವಾರಾಧನೆಯಲ್ಲಿ  ಜೋಗಿ ಎಂದರೆ ಅಲೆಮಾರಿ ಎಂದರ್ಥ .ಬ್ರಹ್ಮ ಕಪಾಲ ಹಿಡಿದ ಶಿವ ಜೋಗಿಯಲ್ಲವೇ ?.ಭಸಿತ ಲೇಪಿತ ,ಭಸ್ಮಾಂಗ ಶಿವ ಜೋಗಿಯೋಪಾದಿಯಲ್ಲಿ "ಯೋಗಿ "ಯಾದವನಲ್ಲವೇ ?.ಅರ್ಜುನನನ್ನು ಜೋಗಿ ಎನ್ನುವವರಿದ್ದಾರೆ . ಇದನ್ನೆಲ್ಲಾ ನಾವು ಅರಿತುಕೊಳ್ಳಬೇಕು ."ನಾಥ "ಎಂದರೆ ಒಡೆಯ .ನವನಾಥರು  ನಾಥ ಸಂಪ್ರದಾಯದ  ಪ್ರಮುಖರು. ಬಾರಹ್ಪಂತ (೧೨ ಜಾತಿ )ದವರು ನಾಥ ಪಂಥದಲ್ಲಿದ್ದಾರೆ.ಈಗ ನಮ್ಮ ಜೋಗಿ ಮಠದಲ್ಲಿ ಆಡಳಿತ  ನಡೆಸುವ ಹೆಚ್ಚಿನ ಯೋಗಿಗಳು ನಾಥ ಸಂಪ್ರದಾಯದವರೇ .ಅವರು ಸಹ ಜೋಗಿಗಳೇ .ಅವರೇನು ಬೇರೆಯವರಲ್ಲ .        
   
                                 ಗೋರಕ್ಷ ನಾಥರು     
     ನಮ್ಮಲ್ಲಿ ಗೊರಕ್ಷನಾಥರು ನಮ್ಮ ಗುರುಗಳು .ಗೋರಕ್ಷ ಅಂದರೆ ಗೋವುಗಳ ರಕ್ಷಕ ಅಂದರೆ ಕಾಮಧೆನುವಿನಂಶ ಎಂದರ್ಥ .ನಮ್ಮಲ್ಲಿ ಗೋವುಗಳಿಗೆ ಅತ್ಯಂತ ಪ್ರಾಧಾನ್ಯತೆ ಇದೆ .ಗೋವುಗಳೆಂದರೆ ೩೩ ಕೋಟಿ ದೇವರುಗಳ ಜೀವಂತ ದೇವಾಲಯ ಎನ್ನಬಹುದು .ಗೊರಕ್ಷನಾಥರನ್ನು ಶಿವನಂಶ ಎಂದು ಕರೆಯುವುದುಂಟು .ಬದರಿ ನಾಥರಂಥಹ ಮೌನಿ ಜಟಾಧಾರಿ,ಮತ್ಸ್ಯೆಂದ್ರ ನಾಥರಂತಹ ಯೋಗ ರೂವಾರಿ ನಮ್ಮಲ್ಲಿರುವಾಗ ಶೈವಾರಾಧನೆಯ ಮಹತ್ವ ನಮಗೆ ತಿಳಿಯುತ್ತದೆ .ಜೋಗಿ ಮಠದಲ್ಲಿ ೧೨ ವರ್ಷಗಳಿಗೊಮ್ಮೆ ಆಯ್ಕೆಯಾಗುವ ಗುರುಗಳು ಹೆಚ್ಚಾಗಿ ಶಿವನಂತೆ ಜಟಾಧಾರಿಗಳು.ಅವರು ಮೃಗ ಚರ್ಮದ ಮೇಲೆ ಕುಳಿತು ರುದ್ರಾಕ್ಷಿ ಹಿಡಿದು ಶಿವನನ್ನು ಧ್ಯಾನಿಸುತ್ತಿರುತ್ತಾರೆ.ಮೈಯೆಲ್ಲಾ ಭಸಿತ ಲೇಪಿಸಿ ಶಿವನ ಧ್ಯಾನದಲ್ಲಿರುತ್ತಾರೆ .ಪ್ರತಿಯೊಂದು ಮಠದಲ್ಲೂ ಕಾಶಿ ಕಾಲಭೈರವನ ಆರಾಧನೆ ನಡೆಯುತ್ತದೆ .ಮಠಗಳಲ್ಲಿ ಯುಗಾದಿ ಪೂಜೆ ಹೆಚ್ಹು ಪ್ರಸ್ತುತವಾಗಿರುತ್ತದೆ .ಗುರುವಿನ ಬಳಿ ಧೀಕ್ಷೆ ತೆಗೆದುಕೊಳ್ಳಬೇಕಾದರೆ ಕರ್ಣವೇದ ಸಂಸ್ಕಾರ  ಪಠಣ ಗುರುಗಳಿಂದಾಗುತ್ತದೆ.ಅಂತೆಯೇ ಕರ್ಣ ಭೇದ ಸಂಸ್ಕಾರವಾಗಿ ಕುಂಡಲಗಳನ್ನು ಕಿವಿಗೆ ಧರಿಸಬೇಕಾಗುತ್ತದೆ .      
        
                               ಸುಂದರ ನಾಥರು
                               ಹುಟ್ಟಿನಿಂದ ಹಿಡಿದು ಮದುವೆಯಿಂದ  ,ಸೀಮಂತದಿಂದ   ,ನಾಮಕರಣದಿಂದ ಎಲ್ಲವೂ ಲೋಕರೂಡಿಯಂತೆ ನಡೆದರೆ ಸಾವಿನಲ್ಲಿ ಶೈವಾರಾಧಕರಾದ ನಮ್ಮಲ್ಲಿ ವಿಶೇಷತೆಯಿದೆ .ಸಾವಿನ ಮನೆಗೆ ಹೋಗುವ ಶರೀರಕ್ಕೆ ಚಿನ್ನದ ನೀರು ಬಾಯಿಗೆ ನೀಡಿದರೆ ಶಿವಲಿಂಗವನ್ನು ಜೋಳಿಗೆಗೆ ಹಾಕುತ್ತಾರೆ .ಹೂಳುವಾಗ ದ್ಯಾನಕ್ಕೆ ಕೂತಂತೆ ಅಟ್ಟೆ ಹಾಕಿ ಕೂತುಕೊಲ್ಳಿಸಿ ಹಣೆಗೆ ನಾಮ ಹಾಕಿರುತ್ತಾರೆ .ಇದು ನಮ್ಮ ಸಂಪ್ರದಾಯ .ಜೋಗಿ -ಯೋಗಿಯಾಗಲಿ ,ಪುರುಷ -ಪುರುಷ ನಾಥನಾಗಲಿ ,ನಾಥ -ಸನ್ನಾಥ-ಜಗನ್ನಾಥನಾಗಲಿ ನಾವೆಲ್ಲರೂ ಒಂದೇ ,ಜೋಗಿ ಸಮಾಜ ಬಾಂದವರೆಂದೆ ಭಾವಿಸಬೇಕು .         
     
  12ವರ್ಷಗಳಿಗೊಮ್ಮೆ ಬರುವ ಜುಂಡಿ
            ನಾವು ಹಿರಿಯರಾಗಿದ್ದರೂ  ಕಿರಿಯತೆಯ ಭಾವನೆ ನಮ್ಮಲ್ಲಿದ್ದಾಗ ಮಾತ್ರ ಸರ್ವಜ್ಞ ಸಾಮಾನ್ಯನಾಗುತ್ತಾನೆ .ನಮ್ಮ ಸಮಾಜ ಬಾಂದವರನ್ನು ಒಗ್ಗೂಡಿಸುತ್ತಿರುವ ನಮ್ಮ ಭ್ರಾತೃತ್ವ ಪ್ರೇಮ ಸಮಾಜಕ್ಕೆ ಮಾದರಿಯಾಗಬೇಕು .ಯೋಗ್ಯ ಗುರುವಿನ ಗರಡಿಯಲ್ಲಿ ಪಳಗಿರುವ ನಮ್ಮ ಜೋಗಿ ಸಮಾಜ ಮದ್ಯಪಾನ ಮುಕ್ತ ಸಮಾಜವಾಗಬೇಕು .ಬಡತನ ಇರಬಹುದು .ಆದರೆ ಹೃದಯದಲ್ಲಿ ಬಡತನ ಇರಬಾರದು .ನಾವು ಹಣದಿಂದ ನಮ್ಮ ಜೋಗಿ ಸಮಾಜವನ್ನು ಅಳೆಯಬಾರದು .ಗುಣದಿಂದ ಅಳೆಯಬೇಕು  ".ಹಣ ಹೆಣದ ತನಕ -ಗುಣ ನೆನಪಿನ ತನಕ "-ಕಾವ್ಯಸುತರ ವಾಣಿಯಂತೆ ಗುಣವಂತರಾದ ಯೋಗ್ಯ ಜೋಗಿ ಸಮಾಜದ ನಿರ್ಮಾಣದಲ್ಲಿ ನಾವು ಭಾಗಿಗಲಾಗೋಣ ಎಂಬುದೇ ನನ್ನ ಆಶಯ 
ವೀಡಿಯೋ ಲಿಂಕ್-

1 comment:

  1. ನಾನು ಕಿಂದರಿ ಜೋಗಿ ಸಾಗರ ನಮ್ಮೂರು ನಾವು ನಿಮ್ಮ ಮತ್ತು ನಿಮ್ಮ ಮದ್ಯ ಹೆಣ್ಣು ಮತ್ತು ಗಂಡು ಕೊಡು ವುದು ತರುವುದು ಮಾಡಬಹುದಾ, ಅಥವಾ ನಾವು ನೀವು ಬೇರೆ ಬೇರೆ ಸಂಪ್ರದಾಯ ದವರ (ಸಬ್ cast ಶಿವ ಜೋಗಿ )ನಾವು ಜೋಗಿ ಮರಾಠಿ ಮಾತನಾಡುತ್ತೇವೆ, ಕದ್ರಿ ಮಠಕ್ಕೆ ನಮ್ಮಜಾತಿಗೆ ಎಂಟ್ರಿ ಉಂಟಾ u

    ReplyDelete