*ವನಮಹೋತ್ಸವ*
ಬನ್ನಿರೆಲ್ಲ ಒಂದಾಗಿ ವನಮಹೋತ್ಸವಾಚರಿಸೋಣ,
ಮನೆಗೆ ಒಂದು ಗಿಡ, ಊರಿಗೆ ಒಂದು ವನ.
ವನಮಹೋತ್ಸವಾಚರಿಸೋಣ ವನಮಹೋತ್ಸವಾಚರಿಸೋಣ-೨-
ಸಾವಿರ ಕೈಗಳು ಲಕ್ಷಗಳಾಗಿ,
ನೆಟ್ಟರೆ ಸಾಕು ನೀರುಣಿಸುತಲಿ,
ಕರಿಮೋಡಗಳು ಮಳೆ ಸುರಿಸುವುದು,
ಹಸಿರಲಿ ಉಸಿರು ನೆಲೆಯಾಗುವುದು.
ವನಮಹೋತ್ಸವಾಚರಿಸೋಣ ವನಮಹೋತ್ಸವಾಚರಿಸೋಣ-೨-
ಗಿಡಗಳು ಬೆಳೆಯೆ ಹರಡಿ ಬೇರುಗಳು,
ಮಣ್ಣಿನ ಸವಕಳಿ ನಿಲ್ಲುವುದಾಗಲು,
ನೀರನು ಬೇರು ಹಿಡಿದು ಇಡುವುದು,
ಸಸ್ಯ ಶ್ಯಾಮಲೆ ಬುವಿಯಾಗುವುದು.
ವನಮಹೋತ್ಸವಾಚರಿಸೋಣ ವನಮಹೋತ್ಸವಾಚರಿಸೋಣ
ಮರಗಿಡ ಬಳ್ಳಿಯು ತುಂಬಿ ವನಗಳು,
ಖಗಮೃಗ ಉರಗಾದಿಗಳಿಗೆ ನೆರಳು,
ವನ ಹಸಿರಾಗಲು ಶುದ್ಧ ಗಾಳಿಯು,
ಕೆರೆ ಬಾವಿಗಳಲಿ ತುಂಬಲು ಜಲವು.
ವನಮಹೋತ್ಸವಾಚರಿಸೋಣ ವನಮಹೋತ್ಸವಾಚರಿಸೋಣ
ಕವಿ-ಕೆ.ಮಹೇಂದ್ರ ನಾಥ್.ಎಂ.ಎ
-ಕಾವ್ಯಸುತ-
ವೀಡಿಯೊ ಲಿಂಕ್ -
No comments:
Post a Comment