Friday, 15 July 2022

                      ‌‌‌  ಕನ್ನಡ ಭಾವಗೀತೆ

                        *ಮರಳಿ ಮಣ್ಣಿಗೆ*



ಮಣ್ಣಿಂದ ಕಾಯ ಕಾಯದೊಳಜೀವ

ಜೀವದಲಿ ಭಾವ  ಭಾವಾನುಭಾವ

ಮರಳಿ ಮಣ್ಣಿಗೆ   ಮರಳಿ ಮಣ್ಣಿಗೆ


ಮಣ್ಣಿಂದ ಬೀಜ ಬೀಜದೊಳ ಸಸಿಯು

ಸಸಿಯಿಂದ ತೆನೆಯು ತೆನೆ ಆಹಾರ

ಮರಳಿ ಮಣ್ಣಿಗೆ ಮರಳಿ ಮಣ್ಣಿಗೆ


ಮಣ್ಣಿಂದ ಕೆಸರು ಕೆಸರಿಂದ ಹಸಿರು

ಹಸಿರಿಂದ ಉಸಿರು ಉಸಿರಿಂದ ಹೆಸರು

ಮರಳಿ ಮಣ್ಣಿಗೆ ಮರಳಿ ಮಣ್ಣಿಗೆ


ಉರಿಯ ಮೇಲ್ ನೀರೋ ನೀರ ಮೆಲ್ ಮಣ್ಣೊ

ಮಣ್ಣ ಮೇಲ್ ಗಾಳಿ, ಗಾಳಿ ಮೇಲ್ ಮುಗಿಲೊ

ಮರಳಿ ಮಣ್ಣಿಗೆ ಮರಳಿ ಮಣ್ಣಿಗೆ


ಕಣ್ಣೆಟಕೊವರೆಗೆ ಎಲ್ಲವು ನಿನದೆ

ಕಣ್ಣಾಚೆಗೆಲ್ಲೋ ಒಳಕಣ್ಣು ತೆರೆದೇ....

ಮರಳಿ ಮಣ್ಣಿಗೆ ಮರಳಿ ಮಣ್ಣಿಗೆ


ಕವಿ-ಕೆ.ಮಹೇಂದ್ರನಾಥ್ ಸಾಲೆತ್ತೂರು.ಎಂ.ಎ

-ಕಾವ್ಯಸುತ-

No comments:

Post a Comment