ಎಲ್ಲೆಂದರಲ್ಲಿ ಲಂಚ ತನ್ನ ಹರಹನ್ನು ಚಾಚಿಕೊಂಡಿದೆ .ಎಷ್ಟೇ ಲಂಚ ಕೊಟ್ಟರೂ ಮುಗಿಯದ ದಾಹ .ಎಷ್ಟೇ ಲಂಚವನ್ನು ತಡೆಗಟ್ಟಲು ಪ್ರಯತ್ನಿಸಿದರೂ ಕ್ಯಾನ್ಸರ್ನಂತೆ ಅದು ನಮಗರಿವಾಗದಂತೆ ಬೆಳೆಯುತ್ತಿದೆ .ಲಂಚ ಯಾವ ಕ್ಷೇತ್ರವನ್ನು ಬಿಟ್ಟಿದೆ ಹೇಳಿ? ಎಲ್ಲ ಕ್ಷೇತ್ರಗಳಂತೆ ನ್ಯಾಯ ,ಕಾನೂನು ಕ್ಷೇತ್ರದಲ್ಲೂ ಲಂಚ ಮೂಗು ತೋರಿಸಿರುವುದು ವಿಪರ್ಯಾಸ . ಎಲ್ಲ ಕ್ಷೇತ್ರಗಳಂತೆ ಶಿಕ್ಷಣ ಕ್ಷೇತ್ರವನ್ನೂ ಲಂಚ ಬಿಟ್ಟಿಲ್ಲ .ಪರೀಕ್ಷೆಯ ಪ್ರಷ್ಣಪತ್ರಿಕೆಯ ಮೂಲ ತಿಳಿಯಲು ಲಂಚ ,ತರಗತಿಯಲ್ಲಿ ಮೊದಲ ಸ್ಥಾನ ಗಿಟ್ಟಿಸಲು ಲಂಚ ಶಾಲಾ ನಾಯಕತ್ವದ ಬಗ್ಗೆ ಲಂಚ,ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಮೊದಲೇ ತಿಳಿಯಲು ಲಂಚ ಪರೀಕ್ಷೆಯಲ್ಲಿ ಒಬ್ಬನ ಪರವಾಗಿ ಇನ್ನೊಬ್ಬ ಪ್ರಶ್ನೆ ಪತ್ರಿಕೆ ಬರೆಯಲು ಲಂಚ -ಹೀಗೆ ಲಂಚ ಶಿಕ್ಷಣ ಕ್ಷೇತ್ರವನ್ನೂ ಬಿಟ್ಟಿಲ್ಲ.ಮಕ್ಕಳ ರೀತಿ ಹೀಗಾದರೆ ,ವರ್ಗಾವಣೆಗೆ ಬೇಕಾಗಿ ಲಂಚ,ಬಿ .ಓ. ಗಳನ್ನು ಒಲಿಸಿಕೊಳ್ಳಲು ಲಂಚ -ಇದೊಂದು ರೀತಿ. ಯೋಗ್ಯ ಶಿಕ್ಷಕರು ಶಾಲೆಯಲ್ಲಿ ಇದ್ದರೆ ಇದಕ್ಕೆ ಅವಕಾಶವನ್ನು ನೀಡಲಾರರು .ತನಗೆ ಬಂದ ಸಂಬಳದಲ್ಲಿ ತ್ರಿಪ್ತರಾಗಿ ಆರಕ್ಕೇರದೆ ಮೂರಕ್ಕಿಳಿಯದೆ ಲಂಚದಿಂದ ದೂರವಿರುತ್ತಾರೆ .ವಿಧ್ಯಾರ್ಥಿಗಳು ಯಾವುದೇ ಭಯ ಪಡದೆ ಲಂಚದ ಬಗ್ಗೆ ಗುರುಗಳಲ್ಲಿ ಕೇಳಿ ತಿಳಿದುಕೊಳ್ಳಬೇಕು .ಶಿಕ್ಷಕರು ಕೂಡಾ ತರಗತಿಗಳಲ್ಲಿ ಲಂಚದ ದುಷ್ಪರಿನಮದ ಬಗ್ಗೆ ವಿಧ್ಯಾರ್ಥಿಗಳಿಗೆ ವಿವರಿಸಿ ಹೇಳಬೇಕು.ಒಬ್ಬ ಲಂಚ ಕೊಟ್ಟವ ಇನ್ನೊಬ್ಬನಿಂದ ಲಂಚ ಪಡೆಯುವುದು ಶತಸ್ಸಿದ್ದ .ಲಂಚ ಕೊಟ್ಟು ಪಾಸಾದ ವಿಧ್ಯಾರ್ಥಿಗಳು ಸಮಾಜದಲ್ಲಿ ಅನಾಹುತವನ್ನೇ ಮಾಡುತ್ತಾರೆ .ಅವರಿಂದ ಅಭಿವ್ರಿದ್ದಿ ಸಾಧ್ಯವಿಲ್ಲ .ಲಂಚದಿಂದ ಪಾಸಾದ ಒಬ್ಬ ಇನ್ಜಿನಿಅರ್ ,ಒಬ್ಬ ಡಾಕ್ಟರ್ ,ಒಬ್ಬ ವಕೀಲ ಯಾವ ರೀತಿಯ ಸಮಾಜ ಸೃಷ್ಟಿ ಮಾಡಬಲ್ಲರು ನೀವೇ ಊಹಿಸಿ .ಅಂಥವರು ಪಾಸಾಗಲು ಕೊಟ್ಟ ಲಂಚವನ್ನು ಸಮಾಜದ ಬಡ ವರ್ಗದಿಂದ ಕಸಿಯುತ್ತಾರೆ .ಇದರ ಬಗ್ಗೆ ವಿಧ್ಯಾರ್ಥಿಗಳಿಗೆ ಯೆಚರವಿದ್ದರೆ ಒಳಿತು . ಶಾಲೆಯಲ್ಲಿ ನಡೆಯುವ ಲಂಚದ,ಅವ್ಯವಹಾರದ ಬಗ್ಗೆ ವಿಧ್ಯಾರ್ಥಿಗಳಿಗೆ ಅರಿವಾದರೆ ಅವರು ಉನ್ನತ ಅಧಿಕಾರಿಗಳಿಗೆ ದೂರನ್ನು ನೀಡಬಹುದು .ಅವರು ನಿಮ್ಮ ಹೆಸರನ್ನು ಗೌಪ್ಯವಾಗಿಡುತ್ತಾರೆ.ಲಂಚ ಪಡೆದವರನ್ನು ಅಮಾನತುಗೊಲಿಸುತ್ತಾರೆ .ವೈಯಕ್ತಿಕವಾಗಿ ಲಂಚಕೋರರನ್ನು ಸದೆಬಡಿಯುವುದು ಕಷ್ಟ .ಸಾಮೂಹಿಕವಾಗಿ ಲಂಚಕೋರರನ್ನು ಎದುರಿಸಬೇಕು .ಆಗ ಸ್ವಲ್ಪವಾದರೂ ಲಂಚದ ಮಾರಿ ದೂರ ಸರಿದೀತು .ಯಾವುದೇ ಶಿಕ್ಷಣ ಸಂಸ್ಥೆ ಲಂಚ ತೆಗೆದುಕೊಳ್ಳುತ್ತಿದ್ದಾರೆ ಆಯಾ ಕ್ಷೇತ್ರದ ಸಂಪನ್ಮೂಲ ಅಧಿಕಾರಿಗಳಿಗೆ ತಿಳಿಸಬಹುದು .ಶಾಲೆಯಲ್ಲಿ ಲಂಚ ಸ್ವೀಕರಿಸುತ್ತಿದ್ದಾರೆ ಅದನ್ನು ಪ್ರಶ್ನಿಸುವ ನೈತಿಕ ಹಕ್ಕು ವಿಧ್ಯಾರ್ಥಿಗಲಿಗಿದೆ .ಒಬ್ಬ ವಿದ್ಯಾರ್ಥಿ ಇಂಥ ಗುಣವನ್ನು ಮಿಗೂಡಿಸಿದರೆ ಇತರ ವಿಧ್ಯಾರ್ಥಿಗಳು ನಿಮ್ಮನ್ನು ಹಿಂಬಾಲಿಸುತ್ತಾರೆ . ವರದಕ್ಷಿನೆಯೂ ಒಂದು ರೀತಿಯ ಲಂಚದ ಮೂಲ ಸೆಲೆ .ಮೈಗಳ್ಳತನ ಹುಡುಗರಲ್ಲಿ ಇದರಿಂದಾಗಿಯೇ ಮೈಗೂಡಿಕೊಳ್ಳುತ್ತದೆ.ಇದನ್ನು ಪ್ರಶ್ನಿಸುವ ಹಕ್ಕು ವಿಧ್ಯಾರ್ಥಿಗಲಿಗಿದೆ .ಒಬ್ಬ ಪಂಚಾಯತ್ ಉಗ್ರಾಣಿ ,ಪೇದೆಯಿಂದ ಹಿಡಿದು ಎಲ್ಲ ಸರಕಾರೀ,ಸರಕಾರೇತರ ಅಭ್ಯರ್ಥಿಗಳಿಂದ ಹಿಡಿದು ಯಾರು ಲಂಚ ಪಡೆದರೂ ಅವರಿಂದ ಉನ್ನತ ಅಧಿಕಾರಿಗಳಿಗೆ ದೂರನ್ನು ನೀಡಬಹುದು .ಇದರಿಂದ ನೀವು ಒಳ್ಳೆಯ ಸಮಾಜದ ನಿರಮಾತ್ರ್ಗಲಾಗುತ್ತೀರಿ. ಒಬ್ಬ ಲಂಚ ತೆಗೆದುಕೊಲ್ಲುವವನಿಗೆ ಎಷ್ಟು ಪಾಪವಿದೆಯೋ ಕೊತ್ತವನಿಗೂ ಅಷ್ಟೇ ಪಾಪವಿದೆ .ಅಂತೆಯೇ ಲಂಚಕೊಡುವ ,ಪದೆಯುವವರನ್ನು ನೋಡಿ ವಿಧ್ಯಾರ್ಥಿಗಳು ಸುಮ್ಮನಿದ್ದರೂ ಅದರ ಪಾಪದ ಫಲ ನಿಮ್ಮ ಮೈಗೂ ಅಂಟಿಕೊಳ್ಳುತ್ತದೆ .ಭವ್ಯ ಭಾರತದ ಕನಸ ಹೋತ ವಿಧ್ಯಾರ್ಥಿಗಳು ಲಂಚದ ಬಗ್ಗೆ ಜಾಗ್ರಿತರಾಗಬೇಕು .ಪ್ರಾಥಮಿಕ ಶಿಕ್ಷನದಿಂದಲೇ ವಿಧ್ಯಾರ್ಥಿಗಳಿಗೆ ಲಂಚದ ಬಗ್ಗೆ ,ಅದರ ಅನಾಹುತದ ಬಗ್ಗೆ ಗುರುಗಳು,ತಂದೆ ತಾಯಂದಿರು ಮನವರಿಕೆ ಮಾಡಬೇಕು .ಶಾಲೆಗಳಲ್ಲಿ ಮಧ್ಯಪಾನ ಮಾಡಿ ಬರುವ ,ಬೀದಿ ಸಿಗರೇಟ್ ಸೇದುವ ,ಪಾನ್ಪರಾಗ್ ತಿನ್ನುವ ಗುರುಗಳನ್ನು ಹೇಗೆ ನೀವು ವಿರೋಧಿಸುತ್ತೀರೋ ಅಂತೆಯೇ ಲಂಚ ತೆಗೆಯುವ ಶಿಕ್ಷಕರನ್ನು ,ಸಂಸ್ಥೆಗಳನ್ನು ವಿರೋಧಿಸಬೇಕು .ಮಾನಸಿಕ ,ದೈಹಿಕ ,ಲೈಂಗಿಕ ಹಿಂಸೆ ಕೊಡುವ ಗುರುಗಳನ್ನು ಹೆದರದೆ ,ನಾಚಿಕೆ ಪಡದೆ ಹಿರಿಯ ಅಧಿಕಾರಿಗಳಿಗೆ ಒಪ್ಪಿಸಿ .ಲಂಚದಿಂದಾಗಿ ಯೋಗ್ಯರಿಗೆ ಬೆಲೆಸಿಗದೆ ಅಪಾತ್ರರು ಮೆರೆಯುವಂತಾಗಿದೆ ,ಇದು ನಮ್ಮ ದೇಶದ ದುರಂತ.ಲಂಚನಿವರನೆಯಲ್ಲಿ,ಭಾರತದ ಏಳ್ಗೆಯಲ್ಲಿ ವಿಧ್ಯಾರ್ಥಿಗಳೇ ಸಿಂಹಪಾಲು ಪಡೆಯಿರಿ .
TULUORIPUGA SEVELU:- mahendranath salethoor upanyasolu https://www.youtube.com/results… https://www.youtube.com/user/THULUORIPUGA?feature=guide https://www.facebook.com/groups/THULUORIPUGA/ http://kmahendranath.blogspot.in/ https://www.facebook.com/pages/Thuluoripuga/132047243631531 https://www.facebook.com/groups/184121268378848/ https://plus.google.com/+kmahendranathsalethoor mahendranath salethoor nadath bathi pajjelu:- https://www.facebook.com/mahendranath.salethoor/media_set…
Friday, 30 December 2011
ಲಂಚ ನಿವಾರಣೆಯಲ್ಲಿ ವಿಧ್ಯಾರ್ಥಿಗಳ ಪತ್ರ -ಲೇಖನ
ಎಲ್ಲೆಂದರಲ್ಲಿ ಲಂಚ ತನ್ನ ಹರಹನ್ನು ಚಾಚಿಕೊಂಡಿದೆ .ಎಷ್ಟೇ ಲಂಚ ಕೊಟ್ಟರೂ ಮುಗಿಯದ ದಾಹ .ಎಷ್ಟೇ ಲಂಚವನ್ನು ತಡೆಗಟ್ಟಲು ಪ್ರಯತ್ನಿಸಿದರೂ ಕ್ಯಾನ್ಸರ್ನಂತೆ ಅದು ನಮಗರಿವಾಗದಂತೆ ಬೆಳೆಯುತ್ತಿದೆ .ಲಂಚ ಯಾವ ಕ್ಷೇತ್ರವನ್ನು ಬಿಟ್ಟಿದೆ ಹೇಳಿ? ಎಲ್ಲ ಕ್ಷೇತ್ರಗಳಂತೆ ನ್ಯಾಯ ,ಕಾನೂನು ಕ್ಷೇತ್ರದಲ್ಲೂ ಲಂಚ ಮೂಗು ತೋರಿಸಿರುವುದು ವಿಪರ್ಯಾಸ . ಎಲ್ಲ ಕ್ಷೇತ್ರಗಳಂತೆ ಶಿಕ್ಷಣ ಕ್ಷೇತ್ರವನ್ನೂ ಲಂಚ ಬಿಟ್ಟಿಲ್ಲ .ಪರೀಕ್ಷೆಯ ಪ್ರಷ್ಣಪತ್ರಿಕೆಯ ಮೂಲ ತಿಳಿಯಲು ಲಂಚ ,ತರಗತಿಯಲ್ಲಿ ಮೊದಲ ಸ್ಥಾನ ಗಿಟ್ಟಿಸಲು ಲಂಚ ಶಾಲಾ ನಾಯಕತ್ವದ ಬಗ್ಗೆ ಲಂಚ,ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಮೊದಲೇ ತಿಳಿಯಲು ಲಂಚ ಪರೀಕ್ಷೆಯಲ್ಲಿ ಒಬ್ಬನ ಪರವಾಗಿ ಇನ್ನೊಬ್ಬ ಪ್ರಶ್ನೆ ಪತ್ರಿಕೆ ಬರೆಯಲು ಲಂಚ -ಹೀಗೆ ಲಂಚ ಶಿಕ್ಷಣ ಕ್ಷೇತ್ರವನ್ನೂ ಬಿಟ್ಟಿಲ್ಲ.ಮಕ್ಕಳ ರೀತಿ ಹೀಗಾದರೆ ,ವರ್ಗಾವಣೆಗೆ ಬೇಕಾಗಿ ಲಂಚ,ಬಿ .ಓ. ಗಳನ್ನು ಒಲಿಸಿಕೊಳ್ಳಲು ಲಂಚ -ಇದೊಂದು ರೀತಿ. ಯೋಗ್ಯ ಶಿಕ್ಷಕರು ಶಾಲೆಯಲ್ಲಿ ಇದ್ದರೆ ಇದಕ್ಕೆ ಅವಕಾಶವನ್ನು ನೀಡಲಾರರು .ತನಗೆ ಬಂದ ಸಂಬಳದಲ್ಲಿ ತ್ರಿಪ್ತರಾಗಿ ಆರಕ್ಕೇರದೆ ಮೂರಕ್ಕಿಳಿಯದೆ ಲಂಚದಿಂದ ದೂರವಿರುತ್ತಾರೆ .ವಿಧ್ಯಾರ್ಥಿಗಳು ಯಾವುದೇ ಭಯ ಪಡದೆ ಲಂಚದ ಬಗ್ಗೆ ಗುರುಗಳಲ್ಲಿ ಕೇಳಿ ತಿಳಿದುಕೊಳ್ಳಬೇಕು .ಶಿಕ್ಷಕರು ಕೂಡಾ ತರಗತಿಗಳಲ್ಲಿ ಲಂಚದ ದುಷ್ಪರಿನಮದ ಬಗ್ಗೆ ವಿಧ್ಯಾರ್ಥಿಗಳಿಗೆ ವಿವರಿಸಿ ಹೇಳಬೇಕು.ಒಬ್ಬ ಲಂಚ ಕೊಟ್ಟವ ಇನ್ನೊಬ್ಬನಿಂದ ಲಂಚ ಪಡೆಯುವುದು ಶತಸ್ಸಿದ್ದ .ಲಂಚ ಕೊಟ್ಟು ಪಾಸಾದ ವಿಧ್ಯಾರ್ಥಿಗಳು ಸಮಾಜದಲ್ಲಿ ಅನಾಹುತವನ್ನೇ ಮಾಡುತ್ತಾರೆ .ಅವರಿಂದ ಅಭಿವ್ರಿದ್ದಿ ಸಾಧ್ಯವಿಲ್ಲ .ಲಂಚದಿಂದ ಪಾಸಾದ ಒಬ್ಬ ಇನ್ಜಿನಿಅರ್ ,ಒಬ್ಬ ಡಾಕ್ಟರ್ ,ಒಬ್ಬ ವಕೀಲ ಯಾವ ರೀತಿಯ ಸಮಾಜ ಸೃಷ್ಟಿ ಮಾಡಬಲ್ಲರು ನೀವೇ ಊಹಿಸಿ .ಅಂಥವರು ಪಾಸಾಗಲು ಕೊಟ್ಟ ಲಂಚವನ್ನು ಸಮಾಜದ ಬಡ ವರ್ಗದಿಂದ ಕಸಿಯುತ್ತಾರೆ .ಇದರ ಬಗ್ಗೆ ವಿಧ್ಯಾರ್ಥಿಗಳಿಗೆ ಯೆಚರವಿದ್ದರೆ ಒಳಿತು . ಶಾಲೆಯಲ್ಲಿ ನಡೆಯುವ ಲಂಚದ,ಅವ್ಯವಹಾರದ ಬಗ್ಗೆ ವಿಧ್ಯಾರ್ಥಿಗಳಿಗೆ ಅರಿವಾದರೆ ಅವರು ಉನ್ನತ ಅಧಿಕಾರಿಗಳಿಗೆ ದೂರನ್ನು ನೀಡಬಹುದು .ಅವರು ನಿಮ್ಮ ಹೆಸರನ್ನು ಗೌಪ್ಯವಾಗಿಡುತ್ತಾರೆ.ಲಂಚ ಪಡೆದವರನ್ನು ಅಮಾನತುಗೊಲಿಸುತ್ತಾರೆ .ವೈಯಕ್ತಿಕವಾಗಿ ಲಂಚಕೋರರನ್ನು ಸದೆಬಡಿಯುವುದು ಕಷ್ಟ .ಸಾಮೂಹಿಕವಾಗಿ ಲಂಚಕೋರರನ್ನು ಎದುರಿಸಬೇಕು .ಆಗ ಸ್ವಲ್ಪವಾದರೂ ಲಂಚದ ಮಾರಿ ದೂರ ಸರಿದೀತು .ಯಾವುದೇ ಶಿಕ್ಷಣ ಸಂಸ್ಥೆ ಲಂಚ ತೆಗೆದುಕೊಳ್ಳುತ್ತಿದ್ದಾರೆ ಆಯಾ ಕ್ಷೇತ್ರದ ಸಂಪನ್ಮೂಲ ಅಧಿಕಾರಿಗಳಿಗೆ ತಿಳಿಸಬಹುದು .ಶಾಲೆಯಲ್ಲಿ ಲಂಚ ಸ್ವೀಕರಿಸುತ್ತಿದ್ದಾರೆ ಅದನ್ನು ಪ್ರಶ್ನಿಸುವ ನೈತಿಕ ಹಕ್ಕು ವಿಧ್ಯಾರ್ಥಿಗಲಿಗಿದೆ .ಒಬ್ಬ ವಿದ್ಯಾರ್ಥಿ ಇಂಥ ಗುಣವನ್ನು ಮಿಗೂಡಿಸಿದರೆ ಇತರ ವಿಧ್ಯಾರ್ಥಿಗಳು ನಿಮ್ಮನ್ನು ಹಿಂಬಾಲಿಸುತ್ತಾರೆ . ವರದಕ್ಷಿನೆಯೂ ಒಂದು ರೀತಿಯ ಲಂಚದ ಮೂಲ ಸೆಲೆ .ಮೈಗಳ್ಳತನ ಹುಡುಗರಲ್ಲಿ ಇದರಿಂದಾಗಿಯೇ ಮೈಗೂಡಿಕೊಳ್ಳುತ್ತದೆ.ಇದನ್ನು ಪ್ರಶ್ನಿಸುವ ಹಕ್ಕು ವಿಧ್ಯಾರ್ಥಿಗಲಿಗಿದೆ .ಒಬ್ಬ ಪಂಚಾಯತ್ ಉಗ್ರಾಣಿ ,ಪೇದೆಯಿಂದ ಹಿಡಿದು ಎಲ್ಲ ಸರಕಾರೀ,ಸರಕಾರೇತರ ಅಭ್ಯರ್ಥಿಗಳಿಂದ ಹಿಡಿದು ಯಾರು ಲಂಚ ಪಡೆದರೂ ಅವರಿಂದ ಉನ್ನತ ಅಧಿಕಾರಿಗಳಿಗೆ ದೂರನ್ನು ನೀಡಬಹುದು .ಇದರಿಂದ ನೀವು ಒಳ್ಳೆಯ ಸಮಾಜದ ನಿರಮಾತ್ರ್ಗಲಾಗುತ್ತೀರಿ. ಒಬ್ಬ ಲಂಚ ತೆಗೆದುಕೊಲ್ಲುವವನಿಗೆ ಎಷ್ಟು ಪಾಪವಿದೆಯೋ ಕೊತ್ತವನಿಗೂ ಅಷ್ಟೇ ಪಾಪವಿದೆ .ಅಂತೆಯೇ ಲಂಚಕೊಡುವ ,ಪದೆಯುವವರನ್ನು ನೋಡಿ ವಿಧ್ಯಾರ್ಥಿಗಳು ಸುಮ್ಮನಿದ್ದರೂ ಅದರ ಪಾಪದ ಫಲ ನಿಮ್ಮ ಮೈಗೂ ಅಂಟಿಕೊಳ್ಳುತ್ತದೆ .ಭವ್ಯ ಭಾರತದ ಕನಸ ಹೋತ ವಿಧ್ಯಾರ್ಥಿಗಳು ಲಂಚದ ಬಗ್ಗೆ ಜಾಗ್ರಿತರಾಗಬೇಕು .ಪ್ರಾಥಮಿಕ ಶಿಕ್ಷನದಿಂದಲೇ ವಿಧ್ಯಾರ್ಥಿಗಳಿಗೆ ಲಂಚದ ಬಗ್ಗೆ ,ಅದರ ಅನಾಹುತದ ಬಗ್ಗೆ ಗುರುಗಳು,ತಂದೆ ತಾಯಂದಿರು ಮನವರಿಕೆ ಮಾಡಬೇಕು .ಶಾಲೆಗಳಲ್ಲಿ ಮಧ್ಯಪಾನ ಮಾಡಿ ಬರುವ ,ಬೀದಿ ಸಿಗರೇಟ್ ಸೇದುವ ,ಪಾನ್ಪರಾಗ್ ತಿನ್ನುವ ಗುರುಗಳನ್ನು ಹೇಗೆ ನೀವು ವಿರೋಧಿಸುತ್ತೀರೋ ಅಂತೆಯೇ ಲಂಚ ತೆಗೆಯುವ ಶಿಕ್ಷಕರನ್ನು ,ಸಂಸ್ಥೆಗಳನ್ನು ವಿರೋಧಿಸಬೇಕು .ಮಾನಸಿಕ ,ದೈಹಿಕ ,ಲೈಂಗಿಕ ಹಿಂಸೆ ಕೊಡುವ ಗುರುಗಳನ್ನು ಹೆದರದೆ ,ನಾಚಿಕೆ ಪಡದೆ ಹಿರಿಯ ಅಧಿಕಾರಿಗಳಿಗೆ ಒಪ್ಪಿಸಿ .ಲಂಚದಿಂದಾಗಿ ಯೋಗ್ಯರಿಗೆ ಬೆಲೆಸಿಗದೆ ಅಪಾತ್ರರು ಮೆರೆಯುವಂತಾಗಿದೆ ,ಇದು ನಮ್ಮ ದೇಶದ ದುರಂತ.ಲಂಚನಿವರನೆಯಲ್ಲಿ,ಭಾರತದ ಏಳ್ಗೆಯಲ್ಲಿ ವಿಧ್ಯಾರ್ಥಿಗಳೇ ಸಿಂಹಪಾಲು ಪಡೆಯಿರಿ .
Tuesday, 8 November 2011
Monday, 7 November 2011
ಕಂಬೆರ್ಲು -kamberlu
ಕಾನದ ಕಟದೆರೆನ್ ಸತ್ಯಸಾರಮಾನಿಲು, ಕಂಬೆರ್ಲುಂದು ಪನ್ಪೆರ್ . ಮನ್ಸ ಜನಾಂಗದಕ್ಲೆಗ್ ಕುಲ ದೇವೆರಾದ್,ಕುಲ ದೈವಲ ಆದ್ ಒಲಿದ್ ಬೈದ್ ನ ಸತ್ಯ. ಪದಿನಾಜಿ ಬರಿತ ಕುಲ ದೈವ ಆದ್ ಮೆರೆಯಿನ ಅಪ್ಪೆ ಬೊಲ್ಲೆನ ಜೋಕುಲು ತುಳುನಾಡ ಸಾರಮಾನಿ ಸತ್ಯೊಲಾಯಿನ ಕಾನದ ಕಟದೆರ್. ಸಮಾಜದ ಶೋಷಣೆದ ವಿರುದ್ಧ ಸುರುಕು ಸೊರ ಲಕ್ಕಯಿನ ವೀರೆರ್ ಕಾನದ ಕಟದೆರ್.
ಬೆಮ್ಮೆರೆನ್ಲಾ ಬೇತೆ ಬೇತೆ ಪುದರ್ಡ್ ಆರಾಧನೆ ಮಲ್ಪುವೆರ್ . ಕೆಲವು ಗರಡಿಲೆಡ್ ಉರಿ ಬೆಮ್ಮೆರ್ ಇತ್ತ್ಂಡ ಕೆಲವು ತಿಕ್ ಡ್ ಉದಿಪನ ಜಲ ಬೆಮ್ಮೆರ್ಂದ್ ,ಕೆಲವು ಕಡೆಟ್ ಜಯವುಳ್ಳ ಲಕ್ಕಣ್ಣ ಬೆಮ್ಮೆರ್ಂದ್ ,ಕೆಲವು ತಿಕ್ಡ್ ಕೆಮ್ಮಲೆತ ಬೆಮ್ಮೆರ್ಂದ್ ಪನ್ಪೆರ್.
video link:-https://www.youtube.com/watch?v=IL-pQ44DOy4
Saturday, 15 October 2011
ಹೆಣ್ಣನ್ನು ಮನೋದೌರ್ಬಲ್ಯದಿಂದ ದೂರವಿರಿಸಿ
Friday, 14 October 2011
ನಾಥ ಪಂಥದ ಜೋಗಿಗಳು /natha panthada jogigalu
"ಆತ್ಮ ಯಾವ ಕುಲ ?,ಜೀವ ಯಾವ ಕುಲ?"; ಎಂದು ಪ್ರಶ್ನಿಸಿದ ಕನಕದಾಸರು ಸಮಾಜದ ಕ್ರಾಂತಿಗೆ ಕಾರಣರಾದರೆ ಅದನ್ನು ಪ್ರಶ್ನಿಸುವ ಅನಿವಾರ್ಯತೆ ಬಂದದ್ದು ಅವರು ಸಮಾಜದ ಕೆಳಸ್ತರ ಕುಲದಲ್ಲಿ ಜನಿಸಿದ್ದರಿಂದ .ಅಂತೆಯೇ ಸಮಾಜದಲ್ಲಿ ಬ್ರಾಹ್ಮಣ ,ಕ್ಷತ್ರಿಯ ,ವೈಶ್ಯ ಮತ್ತು ಶೂದ್ರ ಎಂದು ವೇದ ಕಾಲದಿಂದಲೂ ವರ್ಣಾಶ್ರಮ ವಿಂಗಡಣೆಯಿತ್ತು . ಪ್ರತಿಯೊಬ್ಬನೂ ಆಯಾ ಕುಲದ ,ಆಯಾ ವರ್ಣಾಶ್ರಮ ಧರ್ಮವನ್ನು ಪಾಲಿಸಬೇಕಿತ್ತು.ಒಂದು ವರ್ಣದವರ ಕೆಲಸವನ್ನು ಇನ್ನೊಂದು ವರ್ಣದವರು ಮಾಡುವಂತಿರಲಿಲ್ಲ . ಬಹಳ ಹಿಂದಿನಿಂದಲೂ ಶೈವರು ,ವೈಷ್ಣವರು ಎಂಬ ಎರಡು ಪಂಥಗಳು ಅಸ್ತಿತ್ವದಲ್ಲಿತ್ತು.
ನಮಗೂ ಉಣ್ಣೆಯ ಪವಿತ್ರ ಜನಿವಾರವಿದೆ .ಶಿವನ ಆರಾಧಕರಲ್ಲಿ ಲಿಂಗಾಯತರು ಆಯತ ಲಿಂಗವನ್ನು ಧರಿಸಿದ್ದರೆ ಜೋಗಿ ಸಮಾಜದವರು ಸಿಂಗ್ನಾತವನ್ನು ಧರಿಸುತ್ತಾರೆ .ನಮ್ಮಲ್ಲಿ ಹುಟ್ಟಿನಿಂದ ಹಿಡಿದು ಸಾವಿನವರೆಗಿನ ಆಚರಣೆಗಳು ಕೂಡಾ ವೈಷ್ಣವ ಸಂಪ್ರದಾಯಕ್ಕಿಂತ ಭಿನ್ನವಾಗಿರುತ್ತವೆ .ಪ್ರಾದೇಶಿಕ ಅನಿವಾರ್ಯತೆಯನ್ನು ಅರಿತುಕೊಂಡ ಜೋಗಿ ಜನಾಂಗ ತಮ್ಮ ವೃತ್ತಿಯನ್ನು ಅಲ್ಲಿಗನುಗುಣವಾಗಿ ಆರಿಸಿಕೊಂಡಿತು .ಜೋಗಿ -ಯೋಗಿ ಅಂದರೆ ಅಲೆಮಾರಿ ,ಜೋಳಿಗೆ ಹಾಕಿ ಸುತ್ತುವವ ,ಮುಂದೆ ಭಕ್ತಿಯ ಪಾರಮ್ಯತೆಯಿಂದ ಜೋಗಿ ತ್ಯಾಗಿಯಾಗಿ ಯೋಗಿಯಾಗಿ ಜೀವನವನ್ನು ಸವೆಸುವವ.
ಮತ್ಸ್ಯೇಂದ್ರ ನಾಥೆರ್ವೃತ್ತಿಧರ್ಮಕ್ಕನುಗುಣವಾಗಿ ನೋಡುವುದಾದರೆ ಮೂಲದಲ್ಲಿ ಜೋಗಿ ಜನಾಂಗ ಬಡವರಾಗಿದ್ದರು .ಅವರ ಐಡೆಂಟಿಟಿ ಕಾಣಸಿಗುವುದು [ಅನನ್ಯತೆ ] ಹೆಚ್ಚಾಗಿ ದೈವಾರಾಧನೆಗಳಲ್ಲಿ .ವೈಷ್ಣವ ಪರಂಪರೆಯಿಂದ ದೈವಾರಾಧನೆ ಸಂಪೂರ್ಣ ನೆಲ ಕಚ್ಚುವ ಹಂತದಲ್ಲಿರುವಾಗ ತಂತ್ರ ಮಂತ್ರ ಪ್ರವೀಣರಾದ ಶೈವ ಜೋಗಿಗಳು ದೈವಾರಾಧನೆಯನ್ನು ಪುನರುಜ್ಜೀವನಗೊಳಿಸಿದರು . ಆ ಗೌರವದಿಂದ ಮೂಲ ದೈವ ನರ್ತಕರು ಸೋಣಂದ ಜೋಗಿ ,ಕಾವೇರಿ ಪುರುಷೆ ,ಮಾಯಿದ ಪುರುಷೆರ್ ,ಪುರುಷ ವೇಷ ,ಜೋಗಿ ಪುರುಸೆರ್ ಎಂದು ಆಷಾಢ ಮಾಸದಲ್ಲಿ ನೆನಪಿಸಿಕೊಳ್ಳುತ್ತಾರೆ . ಪುರುಷರು ಅಜಲು ಪದ್ಧತಿ ಪ್ರಕಾರ ತುಳುನಾಡಿನಲ್ಲಿ ದೈವದ ಉಂಬಳಿ ಭೂಮಿ ಪಡೆದು ಕೊಂಬು ವಾದ್ಯಗಳ ಮೂಲಕ ದೈವದ ಚಾಕಿರಿ ಮಾಡುತ್ತಾರೆ . ಅದು ಅವರ ಮೂಲ ವೃತ್ತಿಯಲ್ಲದ ಕಾರಣ ವರ್ಷಕ್ಕೊಮ್ಮೆ ಮಠಕ್ಕೆ ಹೋಗಿ ತಪ್ಪು ಕಾಣಿಕೆಯನ್ನು ಹಾಕುತ್ತಾರೆ ಜೋಗಿಯವರನ್ನು ಅವರ ವೃತ್ತಿಗನುಗುಣವಾಗಿ ವಾದ್ಯದವರು ,ಪುರುಷರು ,ಜೋಗಿಲು ,ಪುರ್ಸೆರ್ ಎಂದೆಲ್ಲ ಕರೆಯುತ್ತಾರೆ. .ಇನ್ನು ಮುಂದೆ ಉಡುಪಿ ತಾಲೂಕಿನತ್ತ ತೆರಳಿದರೆ ಬಳೆಗಾರ ವೃತ್ತಿ ಮಾಡುವವರನ್ನು ಬಳೆಗಾರ ಜೋಗಿ ಎಂದು ಕರೆಯುತ್ತಾರೆ .ವೃತ್ತಿಗನುಗುಣವಾಗಿ ಹೆಸರುಗಳು ಬೇರೆ ಬೇರೆಯಾದಾರೂ ಅವರೆಲ್ಲರೂ ಜೋಗಿಗಳೇ. ಅಧುನಿಕ ಯುಗದಲ್ಲಿ ಜೋಗಿಗಳ ವೃತ್ತಿಧರ್ಮ ಅತ್ಯಂತ ಕಡಿಮೆಯಾಗತೊಡಗಿದೆ .ಸರಕಾರದಿಂದ ಹಿಂದುಳಿದ ವರ್ಗ ಎಂದು ಗುರುತಿಸಲ್ಪಟ್ಟ ಜೋಗಿ ಸಮಾಜ ಈಗ ಮುಂದುವರಿದ ಜನಾಂಗ ಎಂದು ಗುರುತಿಸಲ್ಪಟ್ಟಿದೆ .ಮುಂದುವರಿಯುತ್ತಿರುವ ಆಧುನಿಕತೆಗೆ ತಕ್ಕಂತೆ ಉನ್ನತ ಉದ್ಯೋಗದಲ್ಲಿ ನಮ್ಮ ಸಮಾಜ ಬಾಂಧವರಿದ್ದಾರೆ .ಎಲ್ಲ ಕ್ಷೇತ್ರಗಳಲ್ಲೂ ಕೈಯಾಡಿಸುತ್ತಿರುವ ನಮ್ಮ ಜೋಗಿ ಸಮಾಜದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥರಂಥಹ ಅನೇಕ ರಾಜಕೀಯ ನೇತಾರರಿದ್ದಾರೆ,ಕದ್ರಿ ಗೋಪಾಲ ನಾಥರಂತಹ ಆಸ್ಥಾನ ವಿದ್ವಾಂಸರಿದ್ದಾರೆ,ಯಶು ವಿಟ್ಲ ರಂತಹ ಹಿರಿಯ ಪತ್ರಕರ್ತರಿದ್ದಾರೆ ,ಕಿರಣ್ ಜೋಗಿ ,ಪುರುಷೋತ್ತಮ್ ಜೋಗಿಯವರಂಥಹ ಸಂಘಟನಾ ಚತುರರಿದ್ದಾರೆ .