Friday, 16 September 2011

ಕಾಣೆಯಾಗುತ್ತಿರುವ ಹೆಣ್ಣುಮಕ್ಕಳ್ಯಾಕೆ ಸಿಗುವುದಿಲ್ಲ

ವೃತ್ತ ಪತ್ರಿಕೆಗಳನ್ನು ತೆಗೆದು ಓದುವಾಗ ಪ್ರತಿ ದಿನವೂ ಮೂರು ನಾಲ್ಕು ಹೆಣ್ಣು ಮಕ್ಕಳು ಕಾಣೆಯಾಗಿದ್ದಾರೆ ಎಂಬ ಫೋಟೋ ಬರುತ್ತದೆ .ಆದರೆ ಆ ಹೆಣ್ಣು ಮಕ್ಕಳು ಎಲ್ಲಿ ಹೋದರು ,ಏನಾದರೂ ಎಂಬ ಬಗ್ಗೆ ಸುಳಿವೇ ಸಿಗುವುದಿಲ್ಲ .ಪೊಲೀಸರು ಕೂಡ ಕೈಕಟ್ಟಿ ಕುಳಿತಿರುವಂತೆ ಕಾಣುತಿದೆ .ಕೆಲವರು ಆತ್ಮಹತ್ಯೆ ಮಾಡಿದ್ದಾರೆ ಎಂದು ಸ್ವಲ್ಪ ಸಮಯದ ನಂತರ ವರದಿ ಬರುತದೆ .ನಿಜವಾಗಿ ಆ ಹುಡುಗಿ ಆತ್ಮಹತ್ಯೆ ಮಾಡಿದೆಯಾ ಅಥವಾ ಅಂತ ಪ್ರಸಂಗವನ್ನು ಪುರುಷ ಪ್ರಧಾನ ವ್ಯವಸ್ಥೆ ಆಕೆಯ ಮೇಲೆ ಹೇರಿದೆಯ ಎಂಬುದು ತಿಳಿಯುವುದಿಲ್ಲ .       
     
                                                                                                           ಹೆಚ್ಹಾಗಿ ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ಕೆಲಸಕ್ಕೆ ,ಕಾಲೇಜಿಗೆ  ಪಟ್ಟಣದ ಕಡೆ ಹೋಗುತ್ತಾರೆ .ಕೆಲವೊಮ್ಮೆ ಈ ಮುಗ್ಧ ಹುಡುಗಿಯರು ಗಂಡಿನ ಬಲೆಗೆ ಸಿಳುಕುವುದಿದೆ .ಮನೆಯಲ್ಲಿ ಕಿತ್ತು ತಿನ್ನುವ ಬಡತನ ,ಕುಡುಕ ಅಪ್ಪನ ಪೆಟ್ಟು  ಇದರಿಂದ ಪಾರಾಗಬೇಕೆಂದು ಕೆಲಸಕ್ಕೆ ಸೇರಿದರೆ ಅವಳಿಗರಿವಿಲ್ಲದಂತೆ ಅಪರಿಚಿತನ ಪರಿಚಯ .ಅಲ್ಲಿ ಆಕೆ ತನಗೆ ಪ್ರೀತಿ ದೊರೆಯಿತೆಂದು  ನಂಬಿ ತನ್ನನ್ನು ಆತನಿಗೆ ಅರ್ಪಿಸಿ ಬಿಡುತ್ತಾಳೆ .ಅವ ಮುಂದೆ ಎಲ್ಲಿ ಹೋದ ಎಂದು ತಿಳಿಯದಾದಾಗ ಗೊಂದಲಕ್ಕೊಳಗಾಗುತ್ತಾಳೆ. ಆದರೆ ಕಾಲ ಕಳೆದಾಗಿರುತ್ತದೆ .ಒಂದೆಡೆ ಯಾರಲ್ಲೂ ಹೇಳಲಾರದ ಪರಿಸ್ಥಿತಿ .ಆವಾಗ ಆಕೆ ಆಯ್ಕೆ ಮಾಡೋದು ಸಾವನ್ನು .ಹೀಗಾಗಲು ಕಾರಣ ನಮ್ಮ ಪುರುಷ ಪ್ರಧಾನ ಸಮಾಜ .ಒಂದು ಹೆಣ್ಣನ್ನು ಬಲೆಬೀಸಿ ಹಿಡಿಯಲು ಹುಡುಗರು ಅವಳ ದೌರ್ಬಲ್ಯವನ್ನು ಮೊದಲು ತಿಳಿಯುತ್ತಾರೆ .ಆಕೆಗೆ ಮೊಬೈಲ್ ಕೊಡಿಸೋದು ,ಅಕೆಗೆ ಇಷ್ಟವಾದ ಸೀರೆ ,ಚೂಡಿದಾರ ಕೊಡಿಸೋದು ,ಒಂದೆರಡು ಸಿನೆಮಾ ತೋರಿಸೋದು ,ಮುಂದೆ ಆಕೆ ತನ್ನತ್ತ ವಾಲುತ್ತಾಳೆ ಎಂದು ಗೊತ್ತಾದಾಗ  ತನ್ನ ಬೇಳೆ ಬೇಯಿಸಿಕೊಳ್ಳೋದು ,ಮುಂದೆ ಅವಳಿಗರಿವಿಲ್ಲದಂತೆ ಪಾನೀಯದಲ್ಲಿ ಅಮಲು ಪದಾರ್ಥ ಸೇರಿಸಿ ಆಕೆಯನ್ನು ಗಲ್ಲಿಗೊಯ್ಯುವುದು ಕಾಣಸಿಗುತ್ತದೆ .ಈ ಜಾಲ ವ್ಯವಸ್ಥಿತವಾಗಿ ನಡೆಯುತ್ತಿದ್ದರೂ ನ್ಯಾಯಾಂಗ ಕೈಕಟ್ಟಿ ಕೂತಿರೋದು ದುರದೃಷ್ಟಕರ.                                                               ಹೆಣ್ಣುಮಕ್ಕಳಿಗೆ ಪ್ರಾಥಮಿಕ ಹಾಗೂ ಪ್ರೌಡ ತರಗತಿಗಳಲ್ಲಿ ಸೆಕ್ಸ್ ನ ಬಗ್ಗೆ ,ಅದರಿಂದಾಗುವ ತೊಂದರೆಯ ಬಗ್ಗೆ ಗುರುಗಳು ಹಾಗೂ ತಂದೆ ತಾಯಂದಿರು ಶಿಕ್ಷಣ ನೀಡಬೇಕು .ಆಗ ಸ್ವಲ್ಪ ಮಟ್ಟಿಗೆ ಹೆಣ್ಣು ಮಕ್ಕಳು ಎಚ್ಚೆತ್ತುಕೊಳ್ಳುತ್ತಾರೆ .ಕೆಲಸಕ್ಕೆ ಅದರಲ್ಲೂ ಪಟ್ಟಣಕ್ಕೆ ಕೆಲಸಕ್ಕೆ ಹೋಗುವ ಹೆಣ್ಣು ಮಕ್ಕಳು ಪ್ರೀತಿಯ ನಾಟಕವಾಡುವ ಹುಡುಗರ ಬೂಟಾಟಿಕೆಯ ಬಗ್ಗೆ ತಿಳಿದಿದ್ದರೆ ಒಳ್ಳೆಯದು .ಯಾವುದೇ ಅಪರಿಚಿತ ಸಭ್ಯನಲ್ಲದ ಸಭ್ಯನಂತೆ ನಟಿಸುವ ವ್ಯಕ್ತಿಯಿಂದ ದೂರವಿರಬೇಕು .ಪದೇ ಪದೇ  ಒಬ್ಬ ವ್ಯಕ್ತಿ ತಮಗೆ ಹಿಂಸೆ ನೀಡುತ್ತಿದ್ದರೆ ಅರಕ್ಷರಿಗೆ ತಿಳಿಸಿ ಇಲ್ಲವೇ ಮಹಿಳಾ ಸಂಘಟನೆಗೆ ತಿಳಿಸಿ .ಕಾನೂನಿನಲ್ಲಿ ಎಲ್ಲರೂ ಸಮಾನರೆ .ಯಾವ ರಾಜಕೀಯ ಪುಡಾರಿಯ ಭಯವೂ ನಿಮಗೆ ಬೇಡ .ಹೆಣ್ಣು ಮಕ್ಕಳೇ ಸಮಾಜದಲ್ಲಿ ನಿಮ್ಮದೇ ಆದ ಚೌಕಟ್ಟಿನಲ್ಲಿ ಬದುಕುವ ಸ್ವಾತಂತ್ರ್ಯ ನಿಮಗಿದೆ .ನೀವು ಮೊದಲು ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ .ಪೊಳ್ಳು ಬೆದರಿಕೆಗೆ ಭಯ ಪಡಬೇಡಿ .ನೀವು ಅಂಜದೆ ಅಳುಕದೆ ದಿಟ್ಟೆಯಾಗಿ ನಿಂತರೆ ನಿಮ್ಮನ್ನು ಯಾರಿಂದಲೂ ಏನೂ ಮಾಡಲು ಸಾಧ್ಯವಿಲ್ಲ . ಇನ್ನು ಪೊಲೀಸರು  ವೇಶ್ಯಾವಾಟಿಕೆಯ ಬಲೆಗೆ ಬಿದ್ದಿರುವ ಹೆಣ್ಣು ಮಕ್ಕಳನ್ನು ರಕ್ಷಿಸುವ  ಹೊಣೆ ಹೊರಬೇಕು .ವೇಶ್ಯಾ ಗೃಹಗಳನ್ನು ,ವೇಶ್ಯಾ ವೃತ್ತಿಗೆ ಪ್ರಚೋದಿಸುವವರನ್ನು ಉಗ್ರವಾಗಿ ಶಿಕ್ಷಿಸಬೇಕು .ಕಾನೂನಿನಲ್ಲೂ ವೇಶ್ಯಾವಾಟಿಕೆಗೆ ಹೆಣ್ಣು ಮಕ್ಕಳನ್ನು ದನ ಸಾಗಿಸುವಂತೆ ಸಾಗಿಸುವವರನ್ನು ಉಗ್ರವಾಗಿ ಶಿಕ್ಷಿಸಬೇಕು. ಕರಾವಳಿಯ ಹೆಣ್ಣು ಮಕ್ಕಳು ನಿಜಕ್ಕೂ ಮುಗ್ಧೆಯರು .ಅವರನ್ನು ಇಂಥ ಸಂಧಿಗ್ಧ ಪರಿಸ್ಥಿತಿಗೆ ಹೋಗದಂತೆ  ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ .                                                                            

No comments:

Post a Comment