ದೈವಾರಾದನೆಡ್ ಗಲಸುನ ಸೊತ್ತುಲೆನ ಪುದರ್
1).ದೈವ,ಬೂತ-ದೈವ
2).ಪಾಡ್ದನ _ಜಾನಪದ ಹಾಡುಗಳು
3) ಸಂದಿ- ದೈವಗಳ ಹುಟ್ಟು,ಬೆಳವಣಿಗೆ, ಕಥನ ಕಾವ್ಯ
4) ಸಾನ - ದೈವಸ್ಥಾನ
5) ಗರಡಿ - ಕೋಟಿ ಚೆನ್ನಯರ ಆರಾದನ ಸ್ಥಳ.
6) ಮಾಡ - ಅರಸು ದೈವಗಳ ಆರಾಧನಾ ಕೇ0ದ್ರ
7) ಆಲಡೆ- ಸಿರಿ ಆರಾಧನಾ ಕೇಂದ್ರ
8) ಕೊಟ್ಯ- ನಿರ್ದಿಷ್ಟ ದೈವಗಳ ಸ್ಥಾನ
9) ಗು0ಡ - ಗುಡಿ
10) ಮಂಡಿಗೆ - ಬಬ್ಬರ್ಯ ದೈವಗಳ ಆರಾಧನ ಕೇಂದ್ರದಲ್ಲಿ ಕಂಡು ಬರುವ ಕಂಬದ ಮೇಲಿನ ಗುಂಡ
10) ಭಂಡಾರ - ಮುಗ, ಆಯುಧ ಪದ್ದೆಯಿ/ಚಿನ್ನಾಭರಣಗಳು ಮತ್ತಿತ್ತರ ದೈವಗಳ ವಸ್ತುಗಳನ್ನು ಇಡುವ ಸ್ಥಳ
11) ದಂಡಿಗೆ - ಪಲ್ಲಕ್ಕಿ.
12) ಮಣೆ ಮಂಚ - ದೈವಸ್ಥಾನದಲ್ಲಿ ದೈವಗಳ ಮುಗ ಮೂರ್ತಿ ಇಡುವ ಮರದ ಪೀಠ.
13) ಕೊಡಿ -ಧ್ವಜ.
14) ಬಲೆಕಿ ಮರ - ದೀಪ ಇಡುವ ಕ0ಬ.
15) ಪಡ್ಡೆ ಕಲ್ಲ್ - ದೈವಕ್ಕೆ ಹಾಕಿದ ಕಲ್ಲು.
16) ಅಯ್ಯಂಗಾಯಿ ಕಲ್ಲ್ - ಶಕುನ/ಸಕನ ನೋಡುವ ತೆಂಗಿನ ಕಾಯಿ ಹೊಡೆಯುವ ಕಲ್ಲು.
17) ಮುಗುಲಿ - ದೈವಸ್ಥಾನದ ಮಾಡಿನ ತುದಿಯ ಕಲಶ.
18) ಕೊಂತಾಲ - ನೇಮ ನಡೆಯುವ ಚಪ್ಪರ.
19) ಕೊಡಿಯಡಿ-ನೇಮ ನಡೆಯುವ ಜಾಗದಲ್ಲಿ ದೈವಗಳ ಭಂಡಾರ ಇಡುವ ಚಪ್ಪರ.
20) ಮತ್ತರ್ಮೆ -ನೇಮ ನಡೆಯುವ ಸ್ಥಳಕ್ಕೆ ತರಲಾದ ಭಂಡಾರವನ್ನು ಕೊಡಿಯಡಿಯಲ್ಲಿ ಒಳಗೆ ಇಡಲು ನಿರ್ಮಿಸಿದ ತಾತ್ಕಾಲಿಕ ವೇದಿಕೆ.
21) ಪಾಪೆ - ಚಪ್ಪಟೆಯಾಕಾರದ ದೈವದ ಬಗೆಗಿನ ಒಂದು ರಚನೆ
22) ಬಲಿ -ಬಾಳೆ ದಿಂಡು ಮತ್ತು ತೆಂಗಿನ ಎಳಸು ಗರಿಯಿಂದ ರಚಿಸಲಾದ ತ್ರಿಕೋನಾಕೃತಿಯ ( ಬೇರೆ ಬೇರೆ ದೈವಕ್ಕೆ ಬೇರೆ ಬೇರೆ ಅಕೃತಿ ಇದೆ ) ವಿನ್ಯಾಸ.
23) ಚರ್ವ - ಕುಚ್ಚಲಕ್ಕಿಯಿಂದ ತಯಾರಿಸಿದ ನೈವೇದ್ಯ.
24) ಮತ್ತರ್ನೆ/ಕೊಲ್ತಿರಿ - ಒಣಗಿದ ತೆಂಗಿನ ಗರಿಗಳಿಗೆ ಬಿಳಿ ಬಟ್ಟೆ ಸುತ್ತಿ ಎಣ್ಣೆಯಲ್ಲದ್ದಿ ತಯಾರಿಸಿದ ಉರಿಯುವ ಸಾಧನ.
25) ಸುತ್ಯೆ -ಕುಚಲಕ್ಕಿ ತೆಂಗಿನ ಕಾಯಿ ವೀಳ್ಯದೆಲೆ ಅಡಿಕೆ ಕಾಣಿಕೆ ಇಟ್ಟು ಬೆಮ್ಮೆರನ್ನು ಸ್ಮರಿಸಲು ಇಡುವ ಸ್ವಸ್ತಿಕ.
26) ಸಾನದಿಗೆ -ಕಾಲು ದೀಪ.
27) ತಕ್ಕನ /ಚಮಚ - ಎಣ್ಣೆ ಹಾಕಲು ಉಪಯೋಗಿಸುವ ತಾಮ್ರದ ಸೌಟು.
28) ಅಗೆಲ್ - ಬೂತಗಳಿಗೆ ಬಡಿಸುವ ಮಾಂಸಾಹಾರಿ ಅಡುಗೆ
29) ತಂಬಿಲ -ಕಾಲಾವಧಿ ಹಬ್ಬ.ಸಂಕ್ರಮಣಗಳಲ್ಲಿ ದೈವಗಳಿಗೆ ಬಡಿಸುವ ಸೇವೆ.
30) ಕೋರಿಕುಂಟ -ದೈವರಾಧನೆಯ ಆರಂಭದ ವಾರದ ಹಿಂದಿನ ಒಂದು ಕಟ್ಟು ಕಟ್ಟಳೆ
31) ಕೋಲ/ನೇಮ- ದೈವಗಳ ನರ್ತನ ಸೇವೆ
ಧರ್ಮನೇಮ ಅದರಲ್ಲಿ ದೊಡ್ಡ ನೇಮ
32) ನಡಾರಿ -ನಡಾವಳಿ.
33) ಪರ್ವ - ಸ0ಕ್ರಾ0ತಿಯಂದು ದೈವಗಳಿಗೆ ನೀಡುವ ಸೇವೆ.
34) ದಲ್ಯ-ಸಿರಿ ಅವಾಹನೆಗೊಂಡಿರುವ ಮಹಿಳೆಯರನ್ನು ಬಿಳಿ ಬಟ್ಟೆಯ ಮೇಲೆ ನಿಲ್ಲಿಸಿ ಆವೇಶ ಸೇವೆಗೆ ಬಿಡುವುದು.
35) ಮೆಚ್ಚಿ -ಉಳ್ಳಾಲ್ತಿಯಮ್ಮನ ಕಾಲವಾದಿ ಸೇವೆ.
36) ಬಂಡಿ -ದೈವಗಳು ಪ್ರಾಣಿಗಳ ಶರೀರ ರಚನೆಯ ಮರದ ಕೆತ್ತನೆಯಿಂದ ಮಾಡಿದ ಬಂಡಿಗಳಲ್ಲಿ ಮಾಡುವ ಸವಾರಿ.
37) ತುಡರ ಬಲಿ -ದೀವಟಿಗೆ ಬೆಳಕಿನಲ್ಲಿ ನಡೆಯುವ ಬಲಿ ಸೇವೆ.
38) ಪನಿಯಾರ -ದೈವಗಳಿಗೆ ಬಡಿಸುವ ಕಜ್ಜಾಯ/ಪನಿವಾರ.
39) ಪಸರ್ನೆ-ದೈವಗಳಿಗೆ ಬಡಿಸುವ ಪಂಚಾಮೃತ.
40) ಬಾರ್ನೆ -ನೇಮದ ಮಧ್ಯಭಾಗದಲ್ಲಿ ದೈವಕ್ಕೆ ಸಮರ್ಪಿಸುವ ಆಹಾರ
2) 41) ಬಲಿಬೋಗ - ದೈವ ಒಟ್ಟಿಗೆ ಇರುವ ಗಣಗಳಿಗೆ ನೀಡುವ ರಕ್ತ ಬಲಿ/ಕೋಳಿ ಕೊಯ್ದು
42) ಪೂ ನೀರ್ - ದೈವಕ್ಕೆ ಗಿಂಡೆ/ಕೂಚಿಯಲ್ಲಿ ಇಡುವ ಹೂ ನೀರು.
43) ಅವಾರ - ಆಹಾರ.
44) ಅರದಲ -ದೈವ ನರ್ತಕರು ಮುಖಕ್ಕೆ ಹಾಕುವ ಹಳದಿ ಬಣ್ಣ.
45) ಸೋಪು - ದೈವ ಸೇವಕರು ಹಣೆಗೆ ಮತ್ತು ಸೊಂಟಕ್ಕೆ ಕಟ್ಟುವ ಕೆ0ಪು ಬಟ್ಟೆ.
46) ತೂರು -ಬಣ್ಣದಲ್ಲಿ ಉಬ್ಬು ವಿನ್ಯಾಸಗೊಳಿಸುವುದು.
47) ಬೊಟ್ಟು -ಹಣೆಯಲ್ಲಿ ಬರೆಯುವ ವಿನ್ಯಾಸ.
48) ಪುಲ್ಲಿ- ಅರದಲದಲ್ಲಿ ಇಡುವ ಚುಕ್ಕೆ
49) ಪೇಚರ್ -ಹಣೆಯ ಬೊಟ್ಟಿನ ಮಧ್ಯದಲ್ಲಿ ಇಡುವ ಝರಿ.
50) ಗಗ್ಗರ- ದೈವದ ಕಾಲಿಗೆ ತೊಡುವ ಕಂಚಿನ ಕಡಗ.
51) ಕಡ್ತಲೆ -ದೈವದ ಕೈಯಲ್ಲಿ ಹಿಡಿಯುವಆಯುಧ.
52) ಬೆತ್ತ - ಬೆತ್ತದ ಆಯುಧ.
53) ಮಣಿ-ದೈವದ ಕೈಯಲ್ಲಿ ಇರುವ ಮಣಿ
54) ಅಣಿ -ಕಂಗಿನ ಹಾಳೆಯಿಂದ ರಚಿಸಲಾದ ಪ್ರಭಾವಳಿ.
55) ಜಕ್ಕೆಲಣಿ -ಕಂಗಿನ ಹಾಳೆಯಿಂದ ಮಾಡಿದ ಚಂದ್ರಾಕೃತಿಯ ಸೊಂಟದ ಪ್ರಭಾವಳಿ.
56) ಮೊಗ- ದೈವದ ಮುಖವಾಡ.
57) ಮುಗತ್ತಮುಡಿ -ಮುಗ ಕಟ್ಟುವ ಸಲಕರಣೆ.
58) ಕದ್ರ್ ಮುಡಿ -ಮುಗ ಕಟ್ಟಲೆಂದು ಮಾಡಿದ ತೆಂಗಿನ ಗರಿಯ ಸಾಧನ.
59) ಸುರ್ಯ - ಕೋಟಿ ಚೆನ್ನಯರ ಕೈಯ ಆಯುಧ.
59) ಚವಲ - ದೈವದ ಕೈಯಲ್ಲಿ ಇರುವ ಚಾಮರ.
60) ಜೀಟಿಗೆ -ದೈವಕ್ಕೆ ಹಿಡಿಯುವ ಬೆಳಕಿನ ದೀವಟಿಗೆ.
61) ಪಂಚ ಜೀಟಿಗೆ-ಒಂದು ಹಿಡಿಯಲ್ಲಿ ಐದು ಕವಲುಗಳುಳ್ಳ ದೀವಟಿಗೆ.
62) ಸೂಟೆ/ತೂಟೆ- ತೆ0ಗಿನ ಒಣ ಗರಿಗಳಿ0ದ ಸೇರಿಸಿ ಕಟ್ಟುವ ದೀವಟಿಗೆ.
63) ಸಿರಿ/ತಿರಿ -ಎಳೆ ತೆಂಗಿನ ಗರಿಗಳಿ0ದ ಸೀಳಿ ತಯಾರಿಸಲಾದ ದೈವದ ಉಡುಗೆ ತೊಡುಗೆ
64) ತಲೆಮಣಿ/ತಲೆಹೂ -ದೈವದ ತಲೆಗೆ ಧರಿಸುವ ಅಲಂಕಾರ ಸಾಧನಗಳು.
65) ಸಕ್ರ್ ಸರ - ಚಕ್ರಸರ.
66) ಕೆಬಿನ - ದೈವದ ಕಿವಿಯಾಭರಣ.
67) ಕೈಕೊರೆ -ದೈವದ ಕೈಯಲ್ಲಿರುವ ಕಡಗ.
68) ಕಾರಪಾಲೆ - ಗಗ್ಗರ ಧರಿಸುವ ಮುನ್ನ ಕಾಲಿಗೆ ಕಟ್ಟುವ ಕಂಗಿನ ಹಾಳೆಯ ಕವಚ.
69)ಇಜಾರ್ - ದೈವದ ನರ್ತಕ ಧರಿಸುವ ಕೆಂಪು ಅ0ಗಿ.
70) ದಂಡೆಕಾಜಿ -ಕೇಪುಳ ಹೂವಿನಿ0ದ ತಯಾರಿಸಿದ ಬಳೆ.
71) ಬೆರಿ ಉಡೆ- ದೈವ ನರ್ತಕರ ಬೆನ್ನಲ್ಲಿ ಧರಿಸುವ ಸಾಧನ.
72) ಬರ್ತೆ/ಗುಬ್ಯ - ತೆಂಗಿನ ಗರಿಯಿಂದ ರಚಿಸಿದ ವಿನ್ಯಾಸ ಇದನ್ನು ಅಣಿಗೆ ಸಿಕ್ಕಿಸಲಾಗುವುದು.ಬೆಳ್ಳಿಯ ಗುಬ್ಬೆಗಳನ್ನು ಅಣಿಗೆ ಸಿಕ್ಕಿಸುತ್ತಾರೆ
73) ತರತ್ರ- ದೈವ ಪಾತ್ರಿಯ ತಲೆಗೆ ಸುತ್ತುವ ಮುಂಡಾಸು/ರುಮಾಲು
74) ಹಚ್ಚಡ - ಕಚ್ಚೆ ಹಾಕುವ ವಸ್ತ್ರ.
75) ಕುರ್ಜತ್ ಮಾಲೆ -ಬಂಗಾರದ ಮಾಲೆ
76) ಸತ್ತಿಗೆ/ಬೊಲ್ಗುಡೆ- ಬೊಳ್ಗುಡೆ
77) ಇಸಮಕ್ಕಳ್ -ನೇಮ ಕಟ್ಟುವವರು.
78) ನಲಿಕೆ/ಪರವ/ಪಂಬದ -ಕೋಲ ಕಟ್ಟುವ ಸಮುದಾಯದವರು.
79) ತಾಸೆ/ದೋಲು/ಸುತಿ/ನಾಗಸರ -ನೇಮದ ಸಂದರ್ಭದಲ್ಲಿ ಉಪಯೋಗಿಸುವ ವಾದ್ಯ ಪರಿಕರಗಳು
80) ತೆಂಬರೆ -ಸ0ಧಿ ಪಾಡ್ದನ ಹೇಳುವಾಗಉಪಯೋಗಿಸುವ ಚರ್ಮದ ವಾದನ.
81) ಪಡಿಯರಿ- ನರ್ತನ ಕಲಾವಿದರಿಗೆ ನೀಡುವ ಗೌರವದ ಅಕ್ಕಿ.
82) ಅಜಲ್ -ಭೂತಾರಾಧನೆಯಲ್ಲಿ ನಿರ್ದಿಷ್ಟ ಕರ್ತವ್ಯಗಳನ್ನು ಮಾಡಲು ನಿರ್ದಿಷ್ಟ ವರ್ಗದವರನ್ನು ನಿಯುಕ್ತಿ ಮಾಡಿರುವುದು.
83) ಜೋಗ -ದೈವ ನೇಮ ಕಟ್ಟಿದವರ ಮೇಲೆ ಆವೇಶಕ್ಕೆ ಬರುವುದು.
84) ವಸಾಯ- ಆವೇಶ.
85) ಮದಿಪು- ಅಭಯ
86) ಮದು/ಪಾರಿ- ದೈವವನ್ನು ಆವೇಶಕ್ಕೆ ಕರೆಯುವಾಗ ಹೇಳುವ ನುಡಿಗಳು
87) ಮುಕ್ಕಾಲ್ ಮೂಜಿ ಗಳಿಗೆ - ದೈವ ಆವೇಶಗೊಳ್ಳುವ ಒಂದು ನಿರ್ದಿಷ್ಟ ಅವದಿ
88) ಮಾನೆಚ್ಚಿ- ಪಾತ್ರಿಯ ಮೈಯಲ್ಲಿ ದೈವದ ಆವೇಶ.
88) ಗಗ್ಗರ ದೆಚ್ಚಿ- ಗಗ್ಗರ ದರಿಸುವ ಮೊದಲು ನಡೆಯುವ ಆವೇಶ.
89) ನೇಮದೆಚ್ಚಿ-ನೇಮದ ನಡೆಯಲ್ಲಿ ದೈವದ ಅವಾಹನೆ.
90)ಎದುರು ಪಿರ ಸವಾರಿ - ದೈವ ಮೂರು ಬಾರಿ ಹಿಂದೆ ಮುಂದೆ ಹೋಗಿ ಕುಣಿಯುವ ಕುಣಿತ
91) ಚಕ್ರ ಸುತ್ತು - ಚಕ್ರದ ಆಕಾರದಲ್ಲಿ ಸತ್ತು ಬರುತ್ತಾ ದೈವ ಕುಣಿಯುವುದು.
92) ಮುಗತ್ತ ನಾಟ್ಯ - ಮುಗ ಧರಿಸಿದ ಮೇಲೆ ಮಾಡುವ ನಾಟ್ಯ.
93) ಸವರ್ ನಾಟ್ಯ -ಕಡ್ಸಲೆ ಬಗ್ಗಿಸಿ ಮಾಡುವ ನಾಟ್ಯ.
94) ಅಡ್ಡ ತಾಳ ನಲಿಕೆ - ಹೂ ಎಸೆದು ಮಾಡುವ ನಾಟ್ಯ.
95) ಕಾಜೊಲೆತ್ತಿ-ಆವೇಶದಿಂದ ದೈವ ಕರೆಯುವ ರೀತಿ.
96) ವಲಸರಿ - ದೈವಗಳು ದೈವಸ್ತಾನದ ಹೊರಭಾಗದ ಗದ್ದೆಗೆ ಸವಾರಿ ಹೋಗುವುದು.
97) ಪೂಜಾರಿ-ದೈವದ ಪಾತ್ರಿ.
98) ಅಸ್ರಣ್ಣೆರ್- ಅಸ್ರಣ್ಣರು
99) ಅರೆಮನೆ ಕರ್ತುಲು-ಅರಸು ಮನೆತನದವರು.
100) ನೂಲುಪಾಡಿ ಕರ್ತುಲು - ಬ್ರಾಹ್ಮಣ ಸಮಾಜದ ಒಬ್ಬರು
101) ಸುದ್ಧಂತ ಮಾನ್ಯೆರ್/ದಲ್ಯಂತ ಮಾನ್ಯೆರ್- ಮಡಿವಾಳರು.
102) ಗುತ್ತಿನಾರ್ - ಗುತ್ತಿನವರು
103) ಬಾರಿಕೆ/ಬಾರಿಗೆ ಕರ್ತಲು - ಬಾರಿಕೆ ಮನೆಯವರು.
104) ತಲಮಣಿ ಕರ್ತುಲು -ಜಾಗದ ಮೂಲ ಅಧಿಕಾರವುಳ್ಳವರು.
105ಮಡಸ್ತಾನದ ಕರ್ತುಲು -ಗಡಿಯಾದ ವ್ಯಕ್ತಿ.
106) ಸೇರಿಗಾರ- ವಾದ್ಯ ಊದುವವರು
107) ಇಲಂದಾಯೆ-.ಭ0ಡಾರಿ,
ಮುಕ್ಕಾಲ್ದಿ-ದೈವಸ್ಥಾನದಲ್ಲಿ ಪೂಜೆ ಮತ್ತು ಆರಾಧನೆ ಕ್ರಮಗಳನ್ನು ಮಾಡಲು ಅಧಿಕಾರ ಹೊಂದಿದವರು.
108) ಮದ್ಯಸ್ಥೆರ್- ಕುಟುಂಬ ಮತ್ತು ದೈವದ ನಡುವೆ ಸಂಬಾಷಿಸುವವರು
109) ರಾಜ್ಯದ ಕಲ- ಊರಿನ ಭಕ್ತರು.
110) ಮಾನಿ - ದೈವದ ಚಾಕರಿ ಮಾಡುವಾತ.
111) ಗಡಿ/ಗಡು- ಕೆಲವೊಂದು ನಿರ್ದಿಷ್ಟ ಮನೆತನದಲ್ಲಿ ದೈವದತ್ತ ಅಧಿಕಾರ ಪಡೆದವರು.
112) ಗಡಿ ದೆತೊನುನಿ- ದೈವ ಆವೇಶ ಬಂದ ಸಂದರ್ಭದಲ್ಲಿ ಕಡ್ತಲೆಯಿಂದ ಮುಟ್ಟಿಸಿ ಕೊಡುವ ಅಭಯ.
113) ಎಣ್ಣೆ ಬೂಳ್ಯ -ನೇಮ ಕಟ್ಟುವುದಕ್ಕೆ ಮುನ್ನ ದೈವ ನರ್ತಕನಿಗೆ ನೀಡುವ ಎಣ್ಣೆ ಮತ್ತು ವೀಳ್ಯ.
114) ಪೂವರಿ -ದೈವದೆದುರು ಪ್ರಾರ್ಥನೆ ಸಂದರ್ಭದಲ್ಲಿ ದೈವಕ್ಕೆ ಹಾಕುವ ಅಕ್ಕಿ ಮತ್ತು ಕೇಪುಳ ಹೂ.
115) ತಲ್ಪು -ಭೂತಾರಾಧನೆಯಲ್ಲಿ, ನಾನಾ ಸಂದರ್ಭದಲ್ಲಿ ಶುದ್ಧೀಕರಣಕ್ಕೆ ಮಡಿವಾಳ ಚಿಮುಕಿಸುವ ಪವಿತ್ರ ನೀರು.
116) ಗಂಧ ಬೂಲ್ಯ-ದೈವದ ಪ್ರಸಾದ.
117) ಸೂತ್ರಗಂಧ -ನಿರ್ದಿಷ್ಟ ಸಮಸ್ಯೆ ಸಂಕಟ ನಿವಾರಣೆಗೆ, ದೈವ
ನೀಡುವ ಅಭಯದ ಗ0ಧ ಪ್ರಸಾದ.
118) ಬಾಮದ ಬೂಲ್ಯ -ನಡೆಯಲ್ಲಿ ನಿಂತು ದೈವ ನೀಡುವ ಬೂಲ್ಯ ಪ್ರಸಾದ.
119) ದೈರ -ನೇಮದ ಸಂದರ್ಭದಲ್ಲಿ ಕೆಲವೊಂದು ಕೆಲಸಗಳನ್ನು ಮಾಡಲು ಮುಕ್ಕಾಲ್ದಿಗೆ ದೈವ ನೀಡುವ ಅನುಮತಿ.
120) ಪಟ್ಟಾವು - ನೇಮದ ಕೊನೆಯಲ್ಲಿ ದೈವ ಮಾಡಿಕೊಳುವ ಆತ್ಮ ನಿವೇದನೆ.
121) ಬಿರಿ ನುಡಿ -ನೇಮ ಕೊನೆಗೊಳ್ಳುವಾಗಿನ ಅಭಯ.
122) ಬಿರಿಪುನೆ - ನೇಮ ಸಂಪನ್ನಗೊಳ್ಳುವುದು.
123) ಕಂಚಡ್ಪೆ - ದೈವಕ್ಕೆ ಆಹಾರ ನೀಡುವ ರಂಧ್ರದಿಂದ ಕೂಡಿದ ಗೆರಸೆಯಾಕಾರದ ಬುಟ್ಟಿ
124) ಪೈಚಿಲ್ ನೇಮ -ಭತ್ತ ಕಟಾವಿಗೆ ಬರುವ ಸಂದರ್ಭದಲ್ಲಿ ನಡೆಯುವ ನೇಮ
125) ಮಂಡೆ ವಂತಿಗೆ. ಬಾಲೊಂತಿಗೆ.ಪತಾಕೆ.ಗಾಡಾಯಿನಿ ಶಾನಿ.ಕೂಚಿ ಗಿಂಡೆ.ದೂಪ.ತಿಬಿಲ್ಯ. ದರಿ. ಅತ್ತೋಸುದ ಇರೆ. ಮಾರಿ. ಸೂಟೆ. ಪೂಕರೆ .ಬಾರೆ ಪಾಡುನಿ. ಗಣಗಳು ಬರುವುದು. ಪೆಟ್ಟಿಗೆ. ಬಲಿ ಮುಕ್ಕರಿಗೆ. .ಗುಜ್ಜನಿಗೆ. ಪಲ್ಲೆ0ಕಿ. ಅಸುರು ಕೊಡೆ.
ಬಸವೆ. ಸೂರ್ಯ ಚ0ದ್ರೆ. ಬೆರಿಪತ್ಯ. ಪಾಂಬೋಡಿ ಕಾಯಿ.
ಪಾಂಬೋಡಿ ಕುಂಟು. ದಂಡೆ ಮಾಲೆ. ಕಡಪ ರಾಜ್ಯ. ಗಡಿಪಾರಾದ್ ಇಡಿ ತೂಕ. ಚೋರ್ಣ. ಕೈದ್ ಮನಿ.
ಅಚ್ಚಪಾತ್ರೆ .ಕೊಡಿ ಇರೆ. ನಾಲ್ ಕೈಕ್ ಬೂಲ್ಯ. ಸಿಂಗದನ. ದೊಂಪ. ಗರುಡೆ. ಕೊಡಿಮರ.
ಪಾನಕ. ಇಡಿಪನಿಯಾರ .ಗಡಿಪನಿಯಾರ. ಪಂಚಜೆ,ವಾಮಂಚಜ್ಜಾಯ ಗಂಧೊದ ಕಲ್ಲ್. ನಾಲ್ ನಡೆ. (ಮೂಡಾಯಿ, ಪಡ್ಡೇಯಿ, ತೆನ್ಕಾಯಿ, ಬಡಕಾಯಿ)
ಚಾವಡಿ. ಭಂಡಾರದ ಕೊಟ್ಯ. ಬಂಡಿದ ಕೊಟ್ಯ .ಪನೆ. ಕುರ್ದಿ. ದೊನ್ನೆ. ಚಿಲ್ಲಿ .ಮುದ್ರೆ. ಅಗೆಲ್. ಬಂಟೆ. ಅಮೂರ್ತ.ಕಟ್ಟ್ ಕಟ್ಟ್ ಕಟ್ಲೆ. ಇಡೆ ಬುಡ್ಪೆ. ಪೀಠ.ಕಂಚಿದ ಬಟ್ಟಲ್.ವನಭೋಜನ. ಕಂಬುಲದ ಕೋರಿ. ಪಟ್ಟಿ ಕೊರ್ಪುನೆ.
ಕೇಪುಳ್ದ ಪೂ.ಪಿಂಗಾರ. ಬಚ್ಚಿರೆ ಬಜ್ಜೆಯಿ. ಕೈಲ್ ಕಡ್ಪುನೆ. ಗೊಂದೋಲು. ಮಾರಿಪೂಜೆ. ಬಾಣೆ ಪಾರಾವುಣೆ. ಕೆರೆನೇಮ. ಕದಿನದ ಅಂಡೆ.ಬೂಡು. ಬಾಲಮಂಟಮೆ. ಗುತ್ತು .ಬರಿಕೆ. ಚಾವಡಿ. ಸಾನ.
ನೈ. ಪೇರ್.ಅರಿ.ತಾರಾಯಿ ಪೋರಿ.ಪಂರ್ದ್. ಕಾಯಿ ಪೂಲು. ಪೆರೆಸಿ ತಿಪ್ಪಿ. ತಿಪ್ಪಿದ ಕೈಲ್. ಮಣ್ಣಬಾಜಬ. ತಡ್ಪೆ. ಕುರ್ವೆ. ಕಾಂಟ್ಯ……
ಬಳೆ ಸರಪೊಳಿ
_ವಾಟ್ಸಾಪ್ ಕೃಪೆ
No comments:
Post a Comment