Monday, 10 December 2012

nalanda vishwa vidyalaya

ನಳಂದಾ ವಿಶ್ವವಿದ್ಯಾಲಯ...
                                                         
1205 ಡಿಸೆಂಬರ್ ತಿಂಗಳು,ಸರಿಯಾಗಿ 800 ವರ್ಷಗಳ ಹಿಂದೆ ಜಗತ್ಪ್ರಸಿದ್ದ ವಿಶ್ವವಿದ್ಯಾಲಯದಲ್ಲಿ ಇದೆ ತಿಂಗಳು 
ಭಾರತದ ಇತಿಹಾಸದಲ್ಲಿ ಮರೆಯಲಾರದಂತಹ ಒಂದು ಘಟನೆ ನಡೆದು ಹೋಯಿತು. ಇದಕ್ಕೆ ಕಾರಣ ಮತಾಂದ ಒಬ್ಬ 
ಅರಬ್ ಸ್ಥಾನದ ಮುಸ್ಲಿಂ, ಅವನ ಹೆಸರು ಭಕ್ತಿಯಾರ್ ಖಲ್ಜಿ ತ
ನ್ನ 16 ಮಂದಿ ಸಹಚರರೊಂದಿಗೆ ನಳಂದಾ ವಿಶ್ವವಿದ್ಯಾಲಯಕ್ಕೆ ದಾಳಿ ಇಟ್ಟ.ಇತ ಮತ್ತು ಈತನ ಧರ್ಮಾಂದ ಪಡೆ ಬೃಹತ್ ವಿದ್ಯಾಲಯವನ್ನು ಸರ್ವನಾಶ ಮಾಡಿದರು.
'ನ ಅಲಂ ದ ಇತಿ ನಳಂದಾ' ಎಂದಾಗುತ್ತದೆ. ಅಂದರೆ ವಿದ್ಯಾದಾನದ ವಿಷಯದಲ್ಲಿ ಅಲಂ (ಸಾಕು) ಎಂಬುವುದೇ ಗೊತ್ತಿರದಿದ್ದಂತಹ ಬೃಹತ್ ವಿಶ್ವವಿದ್ಯಾಲಯವಾಗಿತ್ತದು. ಸುಮಾರು 10,000 ಸಾವಿರ ವಿದ್ಯಾರ್ಥಿಗಳು ವ್ಯಾಸಾಂಗ ನಡೆಸುತ್ತಿದ್ದ ಆ ವಿಶ್ವವಿದ್ಯಾಲಯದಲ್ಲಿ 2,500 ಭೋಧಕೇತರ ಸಿಬ್ಬಂದಿ ವರ್ಗದವರೂ ಕಾರ್ಯನಿರತರಾಗಿದ್ದರು.
ಭಾರತೀಯ ಸಂಸ್ಕೃತಿ ವಿದ್ಯಾ ಸಂಪನ್ನತೆಗಳ ಶಿಖರ ಪ್ರಾಯವಾಗಿತ್ತು ನಳಂದಾ.ಅದಕ್ಕೆ ಆ ವಿದ್ಯಾಲಯದ ಮೇಲೆ
ಭಕ್ತಿಯಾರ್ ಖಲ್ಜಿ ಕಣ್ಣು ಹಾಕಿದ, ಅವನಿಗೆ ಬೇಕಾಗಿದ್ದದ್ದು ಅಲ್ಲಿ ಏನು ಇರಲಿಲ್ಲ ಅದರ ಅವಶ್ಯಕತೆ ಅವನಿಗೆ ಇರಲೂ ಇಲ್ಲ. ಕಾರಣ ಭಾರತೀಯ ಸಂಸ್ಕೃತಿಯನ್ನು ಅದ;ಪತನಗೊಲಿಸುವ ಹುಚ್ಚು ಕಲ್ಪನೆ ಅಷ್ಟೇ. ತನ್ನ ಸಂಗಡಿಗರನ್ನು ಗೂಳಿಗಳಂತೆ ವಿದ್ಯಾಸರಸ್ವತಿಯ ಮಂದಿರಕ್ಕೆ ನುಗ್ಗಿಸಿದ, ಸಿಕ್ಕಲೆಲ್ಲಾ ಲೂಟಿ ಮಾಡಿದ, ತಡೆದವರನ್ನು ಕೊಚ್ಚಿ ಹಾಕಿದ. ಅಷ್ಟಕ್ಕೂ ತಣ್ಣಗಾಗದ ಮತಾಂದ ಖಲ್ಜಿ ಪವಿತ್ರ ವಿದ್ಯಾಲಯಕ್ಕೆ ಬೆಂಕಿಯಿಟ್ಟ. ಆ ಬೆಂಕಿ ಹಲವು ತಿಂಗಳುಗಳ ಕಾಲ ನಂದಲೇ ಇಲ್ಲ. ವಿದ್ಯಾಸರಸ್ವತಿಯ ಕಿರೀಟದಂತಿದ್ದ ನಳಂದಾ ಬೂದಿಯಾಗುತ್ತಾ ಹೋಗುತ್ತಿತ್ತು.
ಅಷ್ಟು ಸಮಯ ಹೊತ್ತಿ ಉರಿಯಬೇಕಾದರೆ ಅಲ್ಲಿನ ಪುಸ್ತಕ ಸಂಪತ್ತು ಎಷ್ಟಿತ್ತೆ೦ಬುವುದನ್ನು ಊಹಿಸಬಹುದು.
ಅತ್ಯಮೂಲ್ಯ ಜ್ಞಾನದ ಭಂಡಾರ ವಿದೇಶಿ ದಾಳಿಕೋರನ ಪೈಶಾಚಿಕ ಕೃತ್ಯಕ್ಕೆ ಒಳಗಾಯಿತು. ಇದು ಭಾರತದ ಇತಿಹಾಸದಲ್ಲಿ ಮರೆಯಲಾಗದ ಒಂದು ಘಟನೆಯಾಗಿ ಹೋಯಿತು ಯಾವುದೇ ಪ್ರತಿಕಾರವಿಲ್ಲದೆ


mahithi-karunakar shetty

No comments:

Post a Comment