Thursday 20 December 2012

ಕಾಡು ಬಸಳೆ/ಕಾಟ್ ಬಸಳೆ

                         ಕಾಡು ಬಸಳೆ/ಕಾಟ್ ಬಸಳೆ
                  

  ಬಹಳ ಔಷದೀಯ ಗುಣವುಳ್ಳ ಸಸ್ಯ.ಹೆಚ್ಚಾಗಿ ಗುಡ್ಡ ಪ್ರದೇಶಗಳಲ್ಲಿ ಕಂಡು ಬರುತ್ತದೆ.ಹೆಚ್ಚಿನವರಿಗೆ ಇದರ ಬಗ್ಗೆ ತಿಳಿದಿರುವುದಿಲ್ಲ.ಹಿತ್ತಲ ಗಿಡ ಮದ್ದಲ್ಲ ಎಂಬ ಗಾದೆಯಂತೆ.ಆದರೆ ಈಗ ಇದರ ಔಷದೀಯ ಗುಣ ತಿಳಿದ ಮೇಲೆ ಜನರು ಮನೆಯಂಗಳದಲ್ಲೂ ಇದನ್ನು ಬೆಳೆಸುತ್ತಿದ್ದಾರೆ.ಈ ಎಲೆಯ ರುಚಿ ಹುಳಿ ಮಿಶ್ರಿತ ಒಗರು ರುಚಿಯಾಗಿರುತ್ತದೆ.ಈ ಗಿಡವನ್ನು ಗಂಡು ಕಾಳಿಂಗ ಗಿಡ,ನಾಯಿಪತ್ರೆ ಗಿಡ ಎಂದು,ತುಳುವಿನಲ್ಲಿ ಚಿಟ್ಕ ಗಿಡ ಎಂದು ಕರೆಯುತ್ತಾರೆ.ಸಣ್ಣ ಮಕ್ಕಳು ಪುಸ್ತಕದ ಎಡೆಯಲ್ಲಿ ಇಟ್ಟು ಅದರಲ್ಲಿ ಗಿಡಗಳು ಹುಟ್ಟುತ್ತಿತ್ತು.
ಇದರ ಔಷದೀಯ ಗುಣಗಳನ್ನು ತಿಳಿದುಕೊಳ್ಳೋಣ.ಮೂತ್ರಪಿಂಡದ ಕಲ್ಲು ಕರಗಲು ದಿವ್ಯ ಔಷಧಿ ಕಾಡುಬಸಳೆಯ ಎಲೆಗಳನ್ನು ಎಂಟು ದಿನಗಳವರೆಗೆ ಎರಡೆರಡು ಎಲೆಗಳನ್ನು ಜಗಿದು ಸಿಯಾಳ ಕುಡಿಯಬೇಕು ಅಥವಾ ಎರಡು ದಿನಗಳಿಗೆ ಎರೆಡೆರಡು ಎಲೆಗಳಂತೆ  ಬೆಳಗಿನ ಹೊತ್ತು ಎಲೆಗಳನ್ನು ಜಗಿದು ನುಂಗಿ ಸಿಯಾಳ ಕುಡಿದರೆ ಕಿಡ್ನಿಯಲ್ಲಿರುವ ಎಷ್ಟು ದೊಡ್ಡ ಯಾವುದೇ ಕಲ್ಲಾದರೂ ಕರಗಿ ಮೂತ್ರದ ಜೊತೆಗೆ ಹೊರಗೆ ಹೋಗುತ್ತದೆ .ಅಷ್ಟೇ ಅಲ್ಲ ಮತ್ತೊಮ್ಮೆ ಕಿಡ್ನಿ ಕಲ್ಲು ಉಂಟಾಗದಂತೆ ಮಾಡುವ ಶಕ್ತಿ ಈ ಎಲೆಗಳಿಗಿವೆ.ಈ ಎಲೆಗಳನ್ನು ಬಳಸುವಾಗ ಹಾಲು,ಮೊಸರು,ಮಜ್ಜಿಗೆ,ತುಪ್ಪ,ಬೆಣ್ಣೆ ಇವುಗಳನ್ನು ಬಳಸಬಾರದು.ನಾಟಿ ವೈದ್ಯದ ಪ್ರಕಾರ ಎಳನೀರಿನ ಅಂದರೆ ಸಿಯಾಳದ ನೀರಿನ ಜೊತೆ ಇದರ ಎರಡು ಎಲೆಗಳನ್ನು ಬೆಳಿಗ್ಗೆ ಕಾಲಿ  ಹೊಟ್ಟೆಯಲ್ಲಿ ಸೇವಿಸಿದರೆ ನೋವು ಒಂದೆರಡು ದಿನದಲ್ಲಿ ವಾಸಿಯಾಗುತ್ತದೆ.
   ಬೆಳಿಗ್ಗೆ ಎರಡು ಎಲೆಗಳನ್ನು ತಿಂದು ಬಿಸಿನೀರು ಕುಡಿದರೆ ಚರ್ಮದ ಕಾಂತಿ ಹೆಚ್ಚುತ್ತದೆ ಹಾಗೂ ಕೈ ಕಾಲಿನ ಸುಕ್ಕು ಮಾಯವಾಗುತ್ತದೆ.ಬೊಜ್ಹು ಇರುವವರು ನಿಯಮಿತವಾಗಿ ಈ ಎಲೆಗಳನ್ನು ಬಳಸಿದರೆ ಬೊಜ್ಜು ನಿವಾರಣೆಯಾಗುವುದಲ್ಲದೆ ಕಣ್ಣಿನ ದೃಷ್ಟಿ ಸೂಕ್ಷ್ಮವಾಗುತ್ತದೆ.ಈ ಎಲೆಗಳನ್ನು ಪ್ರತಿ ದಿನ ಸೇವಿಸಬಾರದು.ನಾಲ್ಕು ದಿನ ಸೇವಿಸಿ ಮತ್ತೆಎರಡು ದಿನ ಅಥವಾ ಒಂದು ವಾರ ಬಿಟ್ಟು ಸೇವಿಸಬೇಕು.ಕಾಯಿಲೆ ದೂರವಾದ ಮೇಲೆ ಈ ಎಲೆಗಳನ್ನು ತಿನ್ನುವುದನ್ನು ಬಿಡಬೇಕು.
ಈ ಎಲೆಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.ಕಾಡು ಬಸಳೆಯ ಎಲೆಗಳನ್ನು ಕುದಿಸಿ ಜ್ಯೂಸ್ ಮಾಡಿ ಕುಡಿಯುವುದರಿಂದ ಕೊಬ್ಬು/ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುತ್ತದೆ.ಇದರಿಂದಾಗಿ ಹೃದಯ ಸಂಬಂದಿ ಕಾಯಿಲೆ  ದೂರವಾಗುತ್ತದೆ.ಈ ಎಲೆಗಳನ್ನು ತಿನ್ನುವುದರಿಂದ ವಾಯು ಪ್ರಕೋಪ/ಗ್ಯಾಸ್ಟ್ರಿಕ್ ಸಮಸ್ಯೆ ದೂರವಾಗುವುದಲ್ದದೆ ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಈ ಎಲೆಗಳ ಚಟ್ನಿಯನ್ನು ಮಾಡಿ ತಿಂದರೂ ಆರೋಗ್ಯಕ್ಕೆ ಒಳ್ಳೆಯದು.
ಪಿತ್ತ ದೋಷ ಇರುವವರು ಕಾಡು ಬಸಳೆಯ ಎಲೆಗಳನ್ನು ತಿನ್ನುವುದರಿಂದ ಪಿತ್ತ ದೋಷ ನಿವಾರಣೆಯಾಗುತ್ತದೆ.ಸುಸ್ತು ಇರುವವರು ಕಾಡು ಬಸಳೆಯ ಎಲೆಗಳನ್ನು ತಿಂದು ಬಿಸಿ ನೀರನ್ನು ಕುಡಿಯುವುದರಿಂದ ಸುಸ್ತುಬಲಹೀನತೆ ದೂರವಾಗುತ್ತದೆ.
                               

No comments:

Post a Comment