ಕಾಲ ಭೈರವೆ ಬೊಕ್ಕ ಕಾಲ ಭೈರವಾಷ್ಟಕ
ತುಳು ಕನ್ನಡ ಬಾಷೆಗಳಲ್ಲಿ ಮಾಹಿತಿ
ಕಾಲ ಭೈರವೆ ಶಿವನ ಭಯಾನಕ ಸ್ವರೂಪ.ಕಾಭೈರವ ಮರಣದ ಅಂದರೆ ಕಾಲದ ಅಧಿಪತಿ.ಕಾಲ ಪನ್ಪಿ ಸವ್ದ ಶಿವನ್ ಕಾಲ ನಿಯಾಮಕ ಪಂಡ್ ದ್ ತೆರಿಪಾಂಡ ಭೈರವ ಪನ್ಪಿ ಶಬ್ದ ಶಿವನ ಭಯಾನಕ ಸ್ವರೂಪೊನು ತೋಜಾವುಂಡು.ಶಿವನ ರೂಪ ಏತ್ ಭಯಾನಕ ಆಂಡಲ ಭಕ್ತೆರೆ ಪಾಲ್ ಗ್ ಆಯೆ ಕರುಣಾ ಮೂರ್ತಿ. ನಮ್ಮ ಉಡಲ್ ದ ಪೋಡಿಗೆನ್ ದೂರ ಮಲ್ತ್ ದ್ ಧೈರ್ಯ,ಬುದ್ಧಿ,ಜ್ಞಾನ ಕೊರ್ಪುನ ದೇವೆರ್ ಕಾಲ ಭೈರವೆ.ಪ್ರಾಮಾಣಿಕ ಭಕ್ತಿ ಇತ್ತ್ ನಕ್ಲೆನ ಕೈನ್ ಕಾಲ ಭೈರವೆ ಏಪಲಾ ಬುಡಯೆ.ಕಾಲ ಭೈರವೆ ಮಾನಸಿಕ,ಮಲ್ಲ ಮಲ್ಲ ದೈಹಿಕ ಸೀಕ್ ಸಂಕಡೊನು ದೂರ ಮಲ್ಪುನ ದೇವೆರ್.ಪೊಂಜನಕ್ಲೆನ್ಲ ರಕ್ಷಣೆ ಮಲ್ಪುನ ದೇವೆರಗ ಕಾಲ ಬೈರವೆ. ನಮಕ್ ಎಡ್ಡೆ ಸರ್ರ,ಎಡ್ಡೆ ಮನಸ್ಸ್ ಕೊರ್ಪುನ ದೇವೆರ್ ಕಾಲ ಭೈರವೆ.ನಮ್ಮ ಆದ್ಯಾತ್ಮ ಸಗ್ತಿನ್ ಗಟ್ಟಿ ಮಲ್ಪುನ ದೇವೆರ್ ಕಾಲ ಭೈರವೆ.ನಮ್ಮ ಪಾಪ ಕರ್ಮೊನು ದೂರ ಮಲ್ಪುನ ದೇವೆರ್ ಕಾಲ ಭೈರವೆ.ನಮಡ ಎಡ್ಡೆ ಕೆಲಸೊನುಮಲ್ಪವುನ ದೇವೆರ್ ಕಾಲ ಬೈರವೆ.ನವಗ್ರಹ ದೋಷೊನು ದೂರ ಮಲ್ಪುನಾಯೆ ಕಾಲ ಭೈರವೆ.ಹಿಂದೂ ಧರ್ಮೊಡು ಕಾಲ ಬೈರವನ್ ದಂಡಪಾಣಿಂದ್ ಲ ಲೆಪ್ಪುವೆರ್.ವಾಹನ ನಾಯಿ ಆದುಂಡು.ಕಾಲ ಭೈರವನ್ ತಾಂತ್ರಿಕ ಸಕ್ತಿದ ದೇವೆರಾದ್ ಆರಾಧನೆ ಮಲ್ಪುವೆರ್.ಒವ್ವೇ ತಂತ್ರ ಸಾಧನೆ ಮಲ್ಪೊಡಂಡ ಕಾಲ ಭೈರವನ ಆರಾದನೆ ಬಾರೀ ಮುಖ್ಯ.ಕಾಲ ಭೈರವನ ಅನುಗ್ರಹ ಆಯಿಜಿಂಡ ಒವ್ವೇ ತಂತ್ರ ಸಿದ್ದಿ ಪರಿಪೂರ್ಣ ಆಪುಜಿ.ಕರ್ನಾಟಕ,ರಾಜಸ್ಥಾನ,ಉತ್ತರಾಕಾಂಡ,ನೇಪಾಳೊಡು ಕಾಲ ಬೈರವನ ಆರಾದನೆ ಇತ್ತ್ ದ್ ಹಿಂದೂ ಪುರಾಣೊಡು(ಶಿವಪುರಾಣ) ಪುಟ್ಟ್ಂಡಲ ಬೌದ್ದ,ಜೈನ ಧರ್ಮದಕುಲ್ಲಾ ಮಾನಿತೊನ್ನ ದೇವೆರ್ ಕಾಲ ಭೈರವೆ.ಒಟ್ಟಾದ್ 64ಭರವನಕ್ಲಿತ್ತ್ ದ್ ಮಾತಾ ದಿಕ್ಕ್ ನ್ಲಾ ಕಾತೊಂದುಲ್ಲೆರ್.ಈ 64ಭೈರವೆರ್ನ ಅಧಿನಾಯಕೆ ಕಾಲ ಭೈರವೆ.
ಕಾಲಭೈರವ ಕದ್ರಿ ಜೋಗಿ ಮಠ
ಕಾಲ ಭೈರವ ಕೊಡಚಾದ್ರಿ ಕೊಲ್ಲೂರು
ಕಾಲ ಭೈರವ ಇಲ್ಲಿ ಭೈರವ ಶಿವನ ಉಗ್ರ ರೂಪ.ಕಾಲ ಅಂದರೆ ಕಪ್ಪು,ಕಾಲ ಎಂದರೆ ಸಮಯ ಎಂದೂ ಅರ್ಥೈಸಬಹುದು.ಪ್ರತಿ ತಿಂಗಳಲ್ಲಿ ಎರಡು ಪಕ್ಷಗಳು ಬರುತ್ತವೆ.ತಿಂಗಳಲ್ಲಿ ಬರುವ ಎರಡು ಅಷ್ಟಮಿಗಳನ್ನು ಕಾಲ ಭೈರವನನ್ನು ಆರಾಧಿಸುವ ಕಾಲಾಷ್ಟಮಿ ಎಂದು ಕರೆದಿದ್ದಾರೆ.ಶಿವನ ಆರಾದನೆಗೆ ಸೋಮವಾರವಾದರೆ ಶಿವನ ಉಗ್ರ ರೂಪ ಕಾಲ ಭೈರವನ ಆರಾದನೆಗೆ ತಿಂಗಳಲ್ಲಿ ಬರುವ ಎರಡು ಅಷ್ಟಮಿಗಳು ಪ್ರಸಕ್ತ ದಿನ.ಭಗವಾನ್ ಕಾಲ ಭೈರವ ಭೂತ ಸಂಘ ಅಧಿಪತಿ ಅಂದರೆ ಭೂಮಿ,ಆಕಾಶ,ಗಾಳಿ,ನೀರು,ಅಗ್ನಿಗಳೆಂಬ ಪಂಚ ಭೂತಗಳ ನಾಯಕ.
ಕಾಲಭೈರವಾಷ್ಟಕಂ
ದೇವರಾಜ ಸೇವ್ಯಮಾನ ಪಾವನಾಂಘ್ರಿ ಪಂಕಜಂ
ವ್ಯಾಳಯಜ್ಞ ಸೂತ್ರಮಿಂದು ಶೇಖರಂ ಕೃಪಾಕರಮ್ ।
ನಾರದಾದಿ ಯೋಗಿಬೃಂದ ವಂದಿತಂ ದಿಗಂಬರಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ ॥ 1 ॥
ಭಾನುಕೋಟಿ ಭಾಸ್ವರಂ ಭವಬ್ಧಿತಾರಕಂ ಪರಂ
ನೀಲಕಂಠ ಮೀಪ್ಸಿತಾರ್ಧ ದಾಯಕಂ ತ್ರಿಲೋಚನಮ್ ।
ಕಾಲಕಾಲ ಮಂಬುಜಾಕ್ಷ ಮಸ್ತಶೂನ್ಯ ಮಕ್ಷರಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ ॥ 2 ॥
ಶೂಲಟಂಕ ಪಾಶದಂಡ ಪಾಣಿಮಾದಿ ಕಾರಣಂ
ಶ್ಯಾಮಕಾಯ ಮಾದಿದೇವ ಮಕ್ಷರಂ ನಿರಾಮಯಮ್ ।
ಭೀಮವಿಕ್ರಮಂ ಪ್ರಭುಂ ವಿಚಿತ್ರ ತಾಂಡವ ಪ್ರಿಯಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ ॥ 3 ॥
ಭುಕ್ತಿ ಮುಕ್ತಿ ದಾಯಕಂ ಪ್ರಶಸ್ತಚಾರು ವಿಗ್ರಹಂ
ಭಕ್ತವತ್ಸಲಂ ಸ್ಥಿತಂ ಸಮಸ್ತಲೋಕ ವಿಗ್ರಹಮ್ ।
ನಿಕ್ವಣನ್-ಮನೋಜ್ಞ ಹೇಮ ಕಿಂಕಿಣೀ ಲಸತ್ಕಟಿಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ ॥ 4 ॥
ಧರ್ಮಸೇತು ಪಾಲಕಂ ತ್ವಧರ್ಮಮಾರ್ಗ ನಾಶಕಂ
ಕರ್ಮಪಾಶ ಮೋಚಕಂ ಸುಶರ್ಮ ದಾಯಕಂ ವಿಭುಮ್ ।
ಸ್ವರ್ಣವರ್ಣ ಕೇಶಪಾಶ ಶೊಭಿತಾಂಗ ನಿರ್ಮಲಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ ॥ 5 ॥
ರತ್ನ ಪಾದುಕಾ ಪ್ರಭಾಭಿರಾಮ ಪಾದಯುಗ್ಮಕಂ
ನಿತ್ಯ ಮದ್ವಿತೀಯ ಮಿಷ್ಟ ದೈವತಂ ನಿರಂಜನಮ್ ।
ಮೃತ್ಯುದರ್ಪ ನಾಶನಂ ಕರಾಳದಂಷ್ಟ್ರ ಭೂಷಣಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ ॥ 6 ॥
ಅಟ್ಟಹಾಸ ಭಿನ್ನ ಪದ್ಮಜಾಂಡಕೋಶ ಸಂತತಿಂ
ದೃಷ್ಟಿಪಾತ ನಷ್ಟಪಾಪ ಜಾಲಮುಗ್ರ ಶಾಸನಮ್ ।
ಅಷ್ಟಸಿದ್ಧಿ ದಾಯಕಂ ಕಪಾಲಮಾಲಿಕಾ ಧರಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ ॥ 7 ॥
ಭೂತಸಂಘ ನಾಯಕಂ ವಿಶಾಲಕೀರ್ತಿ ದಾಯಕಂ
ಕಾಶಿವಾಸಿ ಲೋಕ ಪುಣ್ಯಪಾಪ ಶೋಧಕಂ ವಿಭುಮ್ ।
ನೀತಿಮಾರ್ಗ ಕೋವಿದಂ ಪುರಾತನಂ ಜಗತ್ಪತಿಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ ॥ 8 ॥
ಕಾಲಭೈರವಾಷ್ಟಕಂ ಪಠಂತಿ ಯೇ ಮನೋಹರಂ
ಜ್ಞಾನಮುಕ್ತಿ ಸಾಧಕಂ ವಿಚಿತ್ರ ಪುಣ್ಯ ವರ್ಧನಮ್ ।
ಶೋಕಮೋಹ ಲೋಭದೈನ್ಯ ಕೋಪತಾಪ ನಾಶನಂ
ತೇ ಪ್ರಯಾಂತಿ ಕಾಲಭೈರವಾಂಘ್ರಿ ಸನ್ನಿಧಿಂ ಧ್ರುವಮ್ ॥
ಇತಿ ಶ್ರೀಮಚ್ಚಂಕರಾಚಾರ್ಯ ವಿರಚಿತಂ ಕಾಲಭೈರವಾಷ್ಟಕಂ ಸಂಪೂರ್ಣಮ್.
ಶ್ರೀಮದ್ ಶಂಕರಾಚಾರ್ಯರು ಉಲ್ಲೇಖಸಿದ ವಿಚಾರಗಳು ಮೂಲ ಕಾಲ ಭೈರವನ ಮೂರ್ತಿಯಲ್ಲಿದೆ
ಶಂಕರಾಚಾರ್ಯರ ಕಾಲಘಟ್ಟ-ವಿದ್ವಾಂಸರು ಗುರುತಿಸಿದಂತೆ ಸುಮಾರು ಎಂಟನೆಯ ಶತಮಾನ.ಮತ್ಸ್ಯೆಂದ್ರನಾಥರ ಕಾಲ ಘಟ್ಟ ಒಂಬತ್ತನೇ ಶತಮಾನದ ಆರಂಭದ ಕಾಲ.
ಕಾಲ ಭೈರವಾಷ್ಟಕ ಸಾರಾಂಶಾತ್ಮಕ ಅರ್ಥದೊಂದಿಗೆ:-
||1|| ಇಂದ್ರನಿಂದ ಪೂಜಿಸಲ್ಪಡುವ,ಹಾವನ್ನು ಯಜ್ಙೋಪವೀತವಾಗಿ ಧರಿಸಿರುವ,ತಲೆ ಮೇಲೆ ಚಂದ್ರನನ್ನು ಧರಿಸಿರುವ,ನಾರದಾದಿ,ಮುನಿಯೋಗಿಗಳಿಂದ ವಂದ್ಯನಾಗಿರುವ,ದಿಗಂಬರನಾದ,ಆಕಾಶವನ್ನೇ ಬಟ್ಟೆಯನ್ನಾಗಿ ಧರಿಸಿದ ಕಾಶಿಯ ಅಧಿಪತಿ ಕಾಲಭೈರವನಿಗೆ ನಮನಗಳು.
||2|| ಕೋಟಿ ಸೂರ್ಯರ ತೇಜಸ್ಸು ಹೊಂದಿರುವ,ಪುನರ್ಜನ್ಮದಿಂದ ಮುಕ್ತಿ ನೀಡುವ,ನೀಲಕಂಠನಾದ,ಮುಕ್ಕಣ್ಣನಾದ,ಜಗತ್ತನ್ನು ನಿಯಮಿಸುವ ತ್ರಿಶೂಲದ ಅಮರನಾದ ಕಾಲಭೈರವನಿಗೆ ವಂದನೆಗಳು.
||3|| ತ್ರಿಶೂಲಾದಿ ಸಂಹಾರದ ಆಯುಧಗಳನ್ಬು ಹಿಡಿದಿರುವ,ಕಪ್ಪು ಮೈ ಬಣ್ಣದ,ಆದಿ ಸ್ವರೂಪನಾದ,ರೋಗರಹಿತ,ಅಮರನಾದ,ಪರಾಕ್ರಮಿ,ತಾಂಡವ ನಾಟ್ಯವಾಡುವ ಕಾಲಭೈರವನಿಗೆ ನಮಸ್ಕಾರಗಳು.
||4|| ಆಶಾಪಾಶದ ಬಂದನದಿಂದ ಮುಕ್ತಿ ಕರುಣಿಸುವ,ಸುಂದರ ನೋಟದಿಂದ ಸೆಳೆಯುವ,ಸರ್ವ ಲೋಕದ ಒಡೆಯನಾದ, ನಡೆಯುವಾಗ ಸೊಂಟಕ್ಕೆ ಕಟ್ಟಿದ ಚಿನ್ನದ ಪಟ್ಟಿಯ ಮಣಿಗಳಿಂದ ಸುಸ್ವರ ಹೊಮ್ಮಿಸುವ ಕಾಲ ಭೈರವನಿಗೆ ನಮನಗಳು.
||5|| ಸದ್ಧರ್ಮವನ್ನು ಉಳಿಸುವ,ಅಧರ್ಮವನ್ನು ನಾಶ ಮಾಡುವ,ಕರ್ಮಬಂಧನದಿಂದ ಮುಕ್ತಿಗೊಳಿಸುವ,ಮೈಯೆಲ್ಲಾ ಬಂಗಾರದ ಬಣ್ಣದ ಹಾವನ್ಬು ಸುತ್ತಿಕೊಂಡಿರುವ ಕಾಲ ಭೈರವನಿಗೆ ವಂದನೆಗಳು.
||6|| ಪಾದರತ್ನಗಳನ್ಬು ಹೊಂದಿರುವ,ಚಿನ್ನದ ಪಾದರಕ್ಷೆ ಧರಿಸಿರುವ,ಶಾಶ್ವತನಾದ,ನಮ್ಮಿಷ್ಟಗಳನ್ನು ಈಡೇರಿಸುವ ,ಯಮನ ಅಹಂಕಾರವನ್ನು ನಾಶ ಮಾಡಿರುವ,ಭಯಾನಕ ಹಲ್ಲುಗಳನ್ನು ಹೊಂದಿರುವ ಕಾಲಭೈರವನಿಗೆ ನಮನಗಳು.
||7|| ತನ್ನ ಘರ್ಜನೆಯಿಂದ ಬ್ರಹ್ಮಾಂಡದ ಸೃಷ್ಠಿಯನ್ನು ನಾಶ ಮಾಡುವ,ತನ್ನ ನೋಟದಿಂದ ನಮ್ಮ ಪಾಪಗಳನ್ನು ನಾಶ ಮಾಡುವ,ನಮಗೆ ಅಷ್ಟ ಸಿದ್ಧಿಗಳ ಸಾಧನೆಯನ್ನು ಕರುಣಿಸುವ,ತಲೆ ಬುರುಡೆಯ ಮಾಲೆಯನ್ನು ಧರಿಸಿರುವ ಕಾಲ ಭೈರವನಿಗೆ ವಂದನೆಗಳು.
||8|| ಪ್ರೇತ ಬಾದೆಗಳನ್ನು ನಾಶ ಮಾಡುವ,ಕೀರ್ತಿಯನ್ನು ದಯಪಾಲಿಸುವ,ಪಾಪಗಳನ್ನು ದೂರ ಮಾಡುವ ,ನಮ್ಮನ್ನು ಧರ್ಮದ ಸದಾಚಾರದ ದಾರಿಯಲ್ಲಿ ನಡೆಸುವ,ಬ್ರಹ್ಮಾಂಡದ ಶಾಶ್ವತನಾದ ಪ್ರಾಚೀನ ಅಧಿಪತಿಯಾದ ಕಾಲ ಭೈರವನಿಗೆ ನಮಸ್ಕಾರಗಳು.
ಸುಂದರವಾದ ಈ ಎಂಟು ಶ್ಲೋಕಗಳನ್ನು ಓದುವವರಿಗೆ ಜ್ಙಾನ ಮತ್ತು ಮುಕ್ತಿ ಲಭಿಸುತ್ತದೆ.ನಮ್ಮಲ್ಲಿ ಸದಾಚಾರವನ್ನು ಹೆಚ್ಚಿಸುತ್ತದೆ.ದುಃಖ,ಮೋಹ,ಲೋಭ,ಕ್ರೋಧ,ತಾಪ ಮತ್ತು ಬಡತನವನ್ನು ದೂರ ಮಾಡುತ್ತದೆ.
ಇಲ್ಲಿ ಶಂಕರಾಚಾರ್ಯರು ಬರೆದ ಕಾಲಬೈರವಾಷ್ಟಕದಲ್ಲಿ ಶಿವನ ಕಾಲ ಬೈರವ ರೂಪ ಬೆತ್ತಲೆಯಾಗಿದ್ದು,ಮೂರು ಕಣ್ಣುಗಳು,ಕಪ್ಪು ರೂಪ,ಕಪ್ಪು ತಲೆ ಬುರುಡೆಗಳ ಮಾಲೆ,ನಾಲ್ಕು ಕೈಗಳಲ್ಲಿ ನಾಶ ಮಾಡುವ ಆಯುದಗಳನ್ನು ಹಿಡಿದು ದೇಹ ಹಾವುಗಳಿಂದ ಸುತ್ತುವರಿಯಲ್ಪಟ್ಟಿದೆ.ಕಾಲ ಭೈರವ ಅಂದರೆ ನಿನ್ನೆಯೂ ಅಲ್ಲ,ನಾಳೆಯೂ ಅಲ್ಲ,ಇಂದೂ ,ಎಂದೆಂದೂ ಸದಾ ಇರುತ್ತಾನೆ.ಕಾಶಿಯ ಅದಿಪತಿ ಆತ.ತಂತ್ರದಲ್ಲಿ ಕಾಶಿಯನ್ನು ಆಜ್ಙಾ ಚಕ್ರ ಎಂದಿದ್ದಾರೆ.ಎರಡು ಬ್ರೂ ಮದ್ಯದಲ್ಲಿ ಇರುವ ಜಾಗ.ಭೈರವ ಸ್ಥಿತಿಯನ್ನು ಸಮಾಧಿ ಸ್ಥಿತಿಯೆಂದೂ ಕರೆಯುತ್ತಾರೆ.ಇಲ್ಲಿ ಇರುವುದು ಯಾವುದೂ ಶಾಸ್ವತವಲ್ಲ,ನಾಶವಾಗುವಂಥದ್ದು.ಇದನ್ನೇ ಕಾಲಭೈರವ ಸೂಚಿಸುತ್ತಾನೆ.ಎಲ್ಲಾ ದೇವತೆಗಳು,ದೈವೀ ಶಕ್ತಿಗಳು ಕಾಲ ಭೈರವನ ಪಾದಗಳಿಗೆ ನಮಿಸಿ ಆನಂದ ಮತ್ತು ಸಮಾಧಿ ಸ್ಥಿತಿಯನ್ನು ಪಡೆಯುತ್ತಾರೆಂದು ಶಂಕರಾಚಾರ್ಯರು ತಿಳಿಸಿದ್ದಾರೆ.
ಕಾಲಭೈರವ ಕದ್ರಿ ಜೋಗಿ ಮಠ
ಎಂಕ್ಲೆಗ್ ನನ ದುಂಬುಗು ಎಡ್ಡೆ ಮಲ್ಪುಲೆ ಕಾಲಭೈರವ ದೇವೆರೆಂದ್ ಸಂಕಲ್ಪ ಮಲ್ತ್ ದ್ ಸೂರ್ಯ ದೇವೆರ್ ಉದಿಪುನ ದುಂಬು ಮೀದ್ ಸುದ್ದೊಡಿತ್ತ್ ದ್ ಕಾಲಿ ಜಾಗೆಡ್ ಕುಲ್ಲುದು ಮನಸ್ ದ ಉಲಯಿಡೆ ತಿರ್ತ್ ತೆರಿಪಾಯಿನ ಕಾಲ ಭೈರವ ಮಂತ್ರೊನು21ಸರ್ತಿಯಾ,108 ಸರ್ತಿಯಾ ಪಂಡರ್ಡ ನಮ ಎನ್ನಿನ ಪೂರಲಾ ನಡಪುಂಡು.ಮಂತ್ರ-"ಓಂ ಕಾಲಕಾಲಾಯ ವಿದ್ಮಹೇ ಕಾಲಾತೀತಾಯ ಧೀಮಹೀ ತನ್ನೋ ಕಾಲಭೈರವ ಪ್ರಚೋದಯಾತ್"
ಕಾಲ ಭೈರವೆ ಮಣೇಲ ಜೋಗಿ ಮಠ
No comments:
Post a Comment