Sunday, 5 February 2012

ಅಸ್ತಿತ್ವ ಇದ್ದರೂ ಇಲ್ಲದಂತಿರುವ ಸಾಲೆತ್ತೂರು




      ರಾಜಕೀಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಅತ್ಯಂತ ದೊಡ್ಡ ಕ್ಷೇತ್ರವೆಂದೇ ಗುರಿತಿಸಲ್ಪತ್ತಿದ್ದರೂ ಕೊಲನಾಡು ಗ್ರಾಮ ಪಂಚಾಯತಿಯ ಕೊಲನಾಡು ಎಂಬ ಊರು ಎಲ್ಲಿಯೂ ನಮ್ಮಲ್ಲಿ ಕಾಣಸಿಗುವುದಿಲ್ಲ .ಎಲ್ಲರೂ ಸಾಲೆತ್ತೂರನ್ನು ಗುರುತಿಸುತ್ತಾರೆ ವಿನಃ ಕೊಲನಾಡು ಎಂದರೆ ಯಾರಿಗೂ ಗೊತ್ತಿರುವುದಿಲ್ಲ .೨ ಪಂಚಯತುಗಳನ್ನು ಒಂದೇ ಸೂರಿನಡಿಯಲ್ಲಿ ಹೊಂದಿರುವ ಸಾಲೆತ್ತೂರಿನ ಜನ ಹೆಮ್ಮೆ ಪಡಬೇಕು .ಆದರೆ ಕೊಲ್ನದು ಪಂಚಯತ್ತಿನ ಅಸ್ತಿತ್ವದ ನಡುವೆ ಸಾಲೆತ್ತೂರು ಪಂಚಾಯತ್ನ ಹೆಸರು ಪ್ರಚಲಿತದಲ್ಲಿಲ್ಲದಿರುವುದು ಬೇಸರದ ಸಂಗತಿ .                                                                      ಯಾವುದೇ ಊರನ್ನು ಗುರುತಿಸುವಾಗಲೂ ಆ ಊರಿನ ಕೆನ್ದ್ರಭಾಗವನ್ನು,ದೊಡ್ದರ್ಥದಲ್ಲಿ ಹೇಳುವುದಾದರೆ ರಾಜಧಾನಿಯನ್ನು ಗುರ್ತಿಸುವುದು ಕ್ರಮ,ರೂಡ್ಡಿ.ಆದರೆ ನಮ್ಮಲ್ಲಿ ಇದು ವ್ಯತಿರಿಕ್ತವಾಗಿದೆ .ಇಲ್ಲಿ ಊರಿನ ರಾಜಧಾನಿ ಸಲೆತ್ತೂರಾಗಿದ್ದರೂ ಕೊಲನಾಡು ಎಂದೇ ಗುರ್ತಿಸುತ್ತಾರೆ.ಇದು ಯಾಕೆ ಹೀಗೆ?
ಒಂದೇ ಸೂರಿನದಿಯ ೨ ಗ್ರಾಮ ಪಂಚಾಯತ್ಗಳಲ್ಲಿ ಒಂದರ ಹೆಸರು ದೊಡ್ಡ ನಾಮಫಲಕದಲ್ಲಿ ಬರೆದು ಇನ್ನೊಂದನ್ನು ಗೌಣ ಮಾಡಿರುವುದು ಸರಿಯೇ? ಪತ್ರಿಕೆಗಳಲ್ಲಿ ಉಲ್ಲೇಖಿಸುವಾಗಲು ಕೊಲನಾಡು ಎಂದೇ ಉಲ್ಲೇಖಿಸಿದರೆ ಸಾಲೆತ್ತೂರು ರಾಮ ಪಂಚಾಯತ್ಗೆ ,ಸಾಲೆತ್ತೂರು ಊರಿಗೆ ಸ್ವಂತ ಅಸ್ತಿತ್ವ ಇಲ್ಲದಂತಾಗುವುದಿಲ್ಲವೇ?.ಇದನ್ನು ಯಾಕೆ ಯಾರೂ ಪ್ರಶ್ನಿಸುತ್ತಿಲ್ಲ? .ಪ್ರಾದೇಶಿಕ ವ್ಯಾಪ್ತಿಯಲ್ಲಿ ವಿಸ್ತಾರದಲ್ಲಿ ಸಾಲೆತ್ತೂರು ಗ್ರಮಕ್ಕಿಂತ ಕೊಲನಾಡು ದೊಡ್ಡ ಗ್ರಾಮವಾಗಿದ್ದರೂ ಎಲ್ಲ ಜನರೂ ಗುರ್ತಿಸುವುದು ಸಾಲೆತ್ತೂರನ್ನು ವಿನಃ ಕೊಲ್ನಾದನ್ನಲ್ಲ .ಬಿ .ಯಸ್ .ಸಾಲೆತೊರೆ  ಯವರಂಥಹ  ಮಹಾನ್ ಇತಿಹಾಜ್ನರನ್ನು ಜಗತ್ತಿಗೆ ಪರಿಚಯಿಸಿದ ಸಾಲೆತ್ತೂರಿನ  ಸಾಲೆತ್ತೂರು ಗ್ರಾಮದ ಹೆಸರು  ಪಂಚಾಯತ್ನ ನಾಮ ಫಲಕದಲ್ಲೇ ಗೌಣವಾಗಿದೆ ಎಂದರೆ ತುಂಬಾ ನೋವಾಗುತ್ತದೆ .ಪ್ರತಿಯೊಬ್ಬ ಸಾಹಿತಿಯೂ ಬರೆಯುವಾಗ ತಮ್ಮ ಹೆಸರ ಜೊತೆಸಾಲೆತ್ತೂರನ್ನೇ ಸೇರಿಸುತ್ತಾರೆ ವಿನಃ ಕೊಲ್ನಾದನ್ನಲ್ಲ 

.ಉದಾಹರಿಸಬೇಕೆಂದರೆ ವಿಜಯ ಶೆಟ್ಟಿ -ಸಾಲೆತ್ತೂರು ಎಂದೇ ಬರೆಯುತ್ತಾರೆ .ಅವರ ಸ್ಥಳ ಸಾಲೆತ್ತೂರು 

ಗ್ರಾಮಕ್ಕೆ ಒಳಪತ್ತಿರುವುದರಿಂದ ಮುಖ್ಯ ಕೊಂಡಿಯಿಂದಲೇ ಗುರುತಿಸಿಕೊಳ್ಳುತ್ತಾರೆ . ಯಾಕೆಂದರೆ ಸಾಲೆತ್ತೂರು ಜಗತ್ತಿಗೆ ಚಿರಪರಿಚಿತ .ಮೂಲಭೂತ ಸವ್ಕರ್ಯವನ್ನೋದಗಿಸುವ ಅಂಚೆ ಕಚೇರಿ ಬ್ಯಾಂಕು ,ಶಾಲೆ ,ಜನರ ಆರಾಧ್ಯ ಕೇಂದ್ರಗಳಾದ ದೇವಸ್ಥಾನ ,ಮಸೀದಿ ,ಇಗರ್ಜಿ ಇರುವುದು ಸಾಲೆತ್ತೂರಲ್ಲೇ ..ಈ ಎಲ್ಲಾ ಕಾರ್ಯಕ್ಷೇತ್ರಗಳು ಸಾಲೆತ್ತೂರನ್ನೇ ಪ್ರತಿನಿಧಿಸುವಾಗ ಯಾಕೆ ನಮ್ಮ ಪಂಚಾಯತ್ ಇದರ ಕಡೆಗೆ ಗಮನ ಹರಿಸಿಲ್ಲ ? .ಇಲ್ಲಿ ಊರಿನ ,ಗ್ರಾಮದ ಪ್ರಶ್ನೆ ಬಂದಾಗ ಯಾವುದೇ ರಾಜಕೀಯ ಗೊಂದಲಕ್ಕೆ ಅವಕಾಶ ಇರುವುದೀಲ .ಇಲ್ಲಿ ಎಲ್ಲರೂ ಊರಿನ ಪ್ರಾಧಾನ್ಯತೆಯನ್ನೇ ಎತ್ತಿ ಹಿಡಿಯಬೇಕು .ಕೇರಳ ಗಡಿಭಾಗದಿಂದ ಸಾಲೆತ್ತೊರಿಗೆ ಆಗಮಿಸುವಾಗ ಸಾಲೆತ್ತೂರು ಗ್ರಾಮವನ್ನು ರಸ್ತೆ ಹಾಡು ಹೋದರು ಕೊಲನಾಡು ಗ್ರಾಮ ಪಂಚಾಯತ್ಗೆ ಸ್ವಾಗತ ಎಂದಿದೆ .ಹಾಗಿದ್ದರೆ ಸಾಲೆತ್ತೂರಿಗೆ ಬೆಲೆನೇ ಇಲ್ಲವ? .ಇದರ ಬಗ್ಗೆ ಚರ್ಚೆ ನಡೆದು ಇದನ್ನು ಜಿಲ್ಲಾ ಪಂಚಾಯತ್ ತಾಲೂಕ್ ಪಂಚಾಯತ್ಗಳ ಗಮನಕ್ಕೂ ತರಬೇಕಾಗಿದೆ .                                                                                                                                                                 ಈ ಕೆಲ ವರ್ಷಗಳ ಹಿಂದೆ ಸಾಲೆತ್ತೂರು ಗ್ರಾಮ ಪಂಚಾಯತು ಹೂಹಾಕುವಕಲ್ಲು ಬಾಳೆಪುಣಿ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯವೆಸಗುತ್ತಿತ್ತು .ಇದರಿಂದ ಜನಸಾಮಾನ್ಯರಿಗೆ ಅನನುಕೂಳವಾಗುತ್ತದೆಂದು ನಮ್ಮ ಕೊಲನಾಡು ಗ್ರಾಮ ಪಂಚಾಯತ್ ನ ವ್ಯಾಪ್ತಿಗೆ ತರಲಾಯಿತು .ಆದರೆ ಕೊಲನಾಡು ಪಂಚಾಯತ್ ವ್ಯಾಪ್ತಿಯಲ್ಲಿ ಹಿರಿದಾಗಿದ್ದರೂ,ಸಾಲೆತ್ತೂರು ಪಂಚಾಯತ್ ಕಿರಿದಾಗಿದ್ದರೂ ಸಾಲೆತ್ತೂರನ್ನು ಗೌಣ ಮಾಡಿರುವುದು ಸರಿಯೇ? .ಸಾಲೆತ್ತೂರು ಎಂದು ಗುರುತಿಸಲ್ಪಡುವ ಕೆಲವು ಸ್ಥಳಗಳು ಕೊಲನಾಡು ಪಂಚಾತ್ ವ್ಯಾಪ್ತಿಯಲ್ಲಿವೆ .ಇಲ್ಲೇನಮಗೆ ದ್ವಂದ್ವ ಕಾಡುವುದು .ಪ್ರತಿಯೊಂದು ಊರಿಗೂ ನಿರ್ದಿಷ್ಟ ಕೆನ್ದ್ರಬಿನ್ಧು ಇರುವಂತೆ ನಮ್ಮ ಸುತ್ತ ಮುತ್ತಲ ಊರುಗಲಿಗೆಸಾಲೆತ್ತೂರೆ ಕೆನ್ದ್ರಬಿನ್ಧು ,ಕೊಲನಾಡು ಅಲ್ಲ.ಕೊಲನಾಡು ಸಾಲೆತ್ತೂರು ಗ್ರಾಮ ಪಂಚಾಯತಿನಷ್ಟೇ ಒಂದು ಗ್ರಾಮ ಪಂಚಾಯತ್ .೨ ಗ್ರಾಮ ಪಂಚಯತುಗಳು ಒಂದೇ ಸೂರಿನದಿಯಲ್ಲಿದ್ದರೂ ಕೊಲನಾಡು ಗ್ರಾಮ ಪಂಚಾಯತ್ ಉಲ್ಲೇಖ ಮಾತ್ರ ನಮಫಳಕದಲ್ಲಿದೆ,ಸಾಲೆತ್ತೂರು ಗ್ರಮಪಂಚಯತ್ನ ಹೆಸರೇ ಇಲ್ಲದಂತಾಗಿದೆ.ಅಂಚೆ ಸಾಲೆತ್ತೂರು,ಶಾಲೆ ಸಾಲೆತ್ತೂರು,ಬ್ಯಾಂಕು ಸಾಲೆತ್ತೂರು ಎಂಬ ಮೂಲ ಸವ್ಕರ್ಯವನ್ನು ಒದಗಿಸುವ ವ್ಯವಸ್ತೆಗಳೇ ಸಾಲೆತ್ತೂರನ್ನು ಒಪ್ಪಿಕೊಂಡಿರುವಾಗ ಪಂಚಾಯತ್ ಯಾಕೆ ಈ ಕಡೆ ಗಮನ ಹರಿಸಿಲ್ಲ ?.ಊರಿಗೊಂದು ಹೆಸರು ಆಓರಿಗೊನ್ದುಗ್ರಾಮ ,ಆ ಗ್ರಾಮಕ್ಕೊಂದು ಗ್ರಾಮ ಪಂಚಾಯತು ಇರುತ್ತದೆ .ಆದರೆ ಸಾಲೆತ್ತೂರು ಎಂಬ ಒಂದೇ ಊರಿಗೆ ೨ ಗ್ರಾಮ ಪಂಚಾಯತುಗಳು ಕಾಣಸಿಗುತ್ತವೆ .ಸಾಲೆತ್ತೂರಿನ ಹೆಚ್ಹಿನ ಭಾಗಕ್ಕೆ ಕೊಲನಾಡು ಗ್ರಾಮ ಪಂಚಾಯತ್,ಸ್ವಲ್ಪ ಭಾಗಕ್ಕೆ ಸಾಲೆತ್ತೋರು ಗ್ರಾಮ ಪಂಚಾಯತ್ ಎಂದಿರುವುದು ನಮಗೆ ಗೋಜಳುನ್ತುಮಾಡಿದೆ.
              ಜನರ ಆಶೋತ್ತರಗಳಿಗೆ ಸ್ಪಂದಿಸುವ ಬ್ಯಾಂಕು ,ಸರಕಾರೀ ಹಿರಿಯ,ಪ್ರವ್ದ ಶ್ಲೆಗಳು,ಅನ್ಚೆಕಚೆರಿಗಲೆಂಬ ಸರಕಾರೀ ಸಾಮ್ಯದ ಕಚೇರಿಗಳೇ ಸಾಲೆತ್ತೊರಿನ ಹೆಸರಲ್ಲಿರುವಾಗ ಸಾಲೆತ್ತೂರನ್ನು ಪಂಚಾಯತ್ ಯಾಕೆ ನಗಣ್ಯ ಮಾಡಿದೆ?.ನಮ್ಮ ಸಾಲೆತ್ತೂರು ಸ್ವತಂತ್ರ ಶಿರೋನಾಮೆಯನ್ನು ಪಡೆಯುವ ಹಕ್ಕಿಂದ ವಂಚಿತವಾಗಿದೆ ಅನಿಸೋಲ್ವೆ?.ಪ್ರತಿಯೊಬ್ಬ ಪತ್ರ ಬರೆಯುವಾಗ ಆತನ /ಆಕೆಯ ಹೆಸರಿನೊಂದಿಗೆ,ಸ್ಥಳ ,ಊರು,ಗ್ರಾಮ,ಅಂಚೆ,ತಾಲೂಕು ,ಜಿಲ್ಲೆ,ಅಂಚೆ ಸಂಖ್ಯೆ ಬರೆಯುವುದು ರೂಡ್ಡಿ .ವಿಳಾಸದಲ್ಲಿ ಪ್ರಾಧಾನ್ಯತೆ ಇರುವುದು ಊರಿಗೆ ,ಅಂಚೆ ಸಂಖ್ಯೆಗೆ .ನಮ್ಮಲ್ಲಿ ಊರ ಹೆಸರು ಬರೆಯುವಾಗ ಸಾಲೆತ್ತೊರಿಗೆಯೇ ಪ್ರಾಧಾನ್ಯತೆ ವಿನಃ ಕೊಲ್ನಾದಿಗಲ್ಲ .ಕೊಲ್ನದು ಗ್ರಾಮ ಪಂಚಾಯತು ಎಂದಿರುವಂತೆ -ಸಾಲೆತ್ತೂರು -ಕೊಲನಾಡು ಗ್ರಾಮ ಪಂಚಾಯತು ಅಥವಾ ಜಂಟಿ ಪಂಚಾಯತು ಎಂದು ನಮೂದಿಸಿದರೆ ತುಂಬಾ ಚೆನ್ನಾಗಿರುತ್ತೆ .ನಮ್ಮಲ್ಲಿ ವಿಶೇಷವೆಂದರೆ ಅಧ್ಯಕ್ಷರು ,ಉಪಾಧ್ಯಕ್ಷರು ಎರಡೂ ಪಂಚಾಯಟ್ಗಲಿಗೂ ಒಬ್ಬೊಬ್ಬರೇ .ಪ್ರತಿನಿಧಿಗಳು ೨ ಪಂಚಾಯತಿನಿಂದಲೂ ಇದ್ದಾರೆ .ಇಲ್ಲಿ ೨ ಗ್ರಾಮ ಪಂಚಾಯತುಗಳನ್ನು ಏಕರೀತಿಯಿಂದ ನೋಡಿಕೊಳ್ಳುವ ಅನಿವಾರ್ಯತೆ ಆಡಳಿತಕ್ಕಿದೆ.ಕೊಲನಾಡು ಎಂಬುದು ನಮ್ಮಲ್ಲಿನ ಹಾಲಿನ ಡೈರಿಯ ಡಬ್ಬಗಳಲ್ಲಿ ಕಾಣ       ಸಿಗುತ್ತದೆ .ಆದರೆ ಕೊಲ್ನಾಡು ಎಂಬ ನಿರ್ದಿಷ್ಟ ಭಾಗ ಎಲ್ಲಿದೆ ?. ಕೊಲನಾಡು  ಗ್ರಾಮದ ವಿಸ್ತಾರ ಎಲ್ಲಿಂದ ಎಲ್ಲಿಯವರೆಗೆ ಎಂದು ನನಗೆ ತಿಲಿದ್ದಿದ್ದರು ಕೊಲ್ನಾಡು ಎಂಬ ನಿರ್ದಿಷ್ಟ ಸ್ಥಳ ಎಲ್ಲಿದೆ ಎಂದು ನನಗೆ ಗೊತ್ತಿಲ್ಲ .ಆದರೆ ಸಾಲೆತ್ತೂರು ಎಲ್ಲಿ ಎಂದು ಕೇಳಿದರೆ ಅದರ ಕೇಂದ್ರ ಸ್ಥಾನ ನನಗೆ ಗೊತ್ತಿದೆ .ಇದರ ಗೊಂದಲ ನಿವಾರಣೆ ಆಗಬೇಕಾಗಿದೆ .
               ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಸ್ ಸ್ತನ್ಡ್ನಲ್ಲಿ ಸಲೆತ್ತೋರು ಕಡೆಗೆ ಬಸ್ ಹೋಗುವ ಸ್ಥಳ ಎಂಬ ಫಲಕ ಇದೆ .ಆದರೆ ಕೊಲ್ನದಿಗೆ ಎಂಬ ಫಲಕ ಇಲ್ಲ.ನಾವು ಯಾವುದೇ ಊರಿಗೆ ಹೋದರು ನಾವು  ಸಾಲೆತ್ತೂರಿನವರೆಂದೆ ಪರಿಚಯ ಮಾಡಿಕೊಳ್ಳುತ್ತೇವೆ .ಸಾಲೆತ್ತೂರು ಎಲ್ಲರಿಗೂ ಗೊತ್ತು .ಮನ್ಚಿಯಿಂದ ಈಚೆ , ಮೆದುವಿನಿಂದ ಈಚೆ , ಕಾಡು ಮಟ್ಟದಿಂದ ಈಚೆ ಬಸ್ಸಿನಲ್ಲಿ ಟಿಕೆಟ್ ತೆಗೆಯುವಾಗ ಸಾಲೆತ್ತೂರಿಗೆನ್ದೆ ಟಿಕೆಟ್ ತೆಗೆಯುತ್ತೇವೆ ವಿನಃ ಕೊಲ್ನಾದಿಗೆಂದು ತೆಗೆಯುವುದಿಲ್ಲ . ಅಂತರ್ಜಾಲದಲ್ಲೂ ಸಾಲೆತ್ತೂರನ್ನು ಜಾಲಾಡಿದರೆ ಅದರ ಬಗ್ಗೆ ಮಾಹಿತಿ ಸಿಗುತ್ತದೆ . ಆದರೆ ಯಾಕೆ ಪಂಚಾಯತ್ ಇದರ ಕಡೆ ಗಮನ ಹರಿಸಿಲ್ಲ? . ರಾಷ್ಟ್ರ ಮಟ್ಟದ , ರಾಜ್ಯ ಮಟ್ಟದ , ಜಿಲ್ಲಾ ಮಟ್ಟದ , ತಾಲೂಕು ಮಟ್ಟದ ಯಾವುದೇ ಸ್ಪರ್ದೆಗಳಲ್ಲಿ ಭಾಗವಹಿಸುವ ಶಾಲಾ ವಿಧ್ಯರ್ಥಿಗಳಗಲಿ , ಯುವಕ ಯುವತಿ ಮಂದಳಗಳಗಲಿ ಊರ ಹೆಸರನ್ನು  ಪರಿಚಯಿಸುವಾಗ ಸಾಲೆತ್ತೂರಿನ ತಂದಗಲೆನ್ನ್ದೆ ಪರಿಚಯಿಸುತ್ತಾರೆ ವಿನಃ ಕೊಲ್ನದಿಗರೆಂದಲ್ಲ .ಪ್ರತಿಯೊಂದು ಊರಿಗೂ ಒಂದು ನಿರ್ದಿಷ್ಟ ಹೆಸರಿರುತ್ತದೆ, ಅಂತೆಯೇ ಗ್ರಾಮ ಪಂಚಯತಿಗೂ . ಆದರೆ ಜನ ಗುರುತಿಸುವುದು ಊರ ಹೆಸರನ್ನೇ ವಿನಃ ಗ್ರಾಮದ ಹೆಸರನ್ನು ಅಲ್ಲ .ಆದರೆ ನಮ್ಮ ಸಾಲೆತ್ತೂರು ಇದಕ್ಕೆ ಲೋಪದಂತಾಗಿದೆ .ಇಲ್ಲಿ ಸಾಲೆತ್ತೂರಿಗಿಂತ ಕೊಲ್ನಾದೆ ಮಾನ್ಯತೆಯಲ್ಲಿದೆ .ಆದರೆ ಇಷ್ಟೆಲ್ಲಾ ಸಂಸ್ಥೆಗಳು ,ಖಾಸಗಿ ,ಜನಸಾಮಾನ್ಯರು ಹೋಗುವ ವಾಹನಗಲ್ಲಿನ ನಾಮಫಲಕಗಳಲ್ಲಿ ಸಾಲೆತ್ತೂರೆ ರಾರಾಜಿಸುತ್ತಿದೆ .                                                                                                                                            ಕೊಲನಾಡು ಗ್ರಾಮ ಪಂಚಾಯತ್ನ ಬಲಭಾಗದಲ್ಲಿ ಗ್ರಾಮದ ಅಭಿವ್ರಿದ್ದಿಯ ನಾಮಫಲಕವಿದೆ.ಅಂತೆಯೇ ಪಂಚಾಯತ್ನ ನಾಮ ಫಲಕದಲ್ಲಿ ಪುಟ್ಟದಾಗಿ ಗಾಂಧೀ ಗ್ರಾಮ ಎಂಬ ಉಲ್ಲೇಖವಿದೆ .ಆದರೆ ಅಭಿವ್ರಿದ್ದಿ ಫಲಕದಲ್ಲಿ ಸಲೆತ್ತೂರಿನ ಗ್ರಾಮ ಪಂಚಾಯತ್ ಹೆಸರನ್ನು ನಗಣ್ಯ ಮಾಡಲಾಗಿದೆ .ಎರಡೂ ಗ್ರಾಮ ಪಂಚಯತಗಳಿಗೂ ಒಬ್ಬರೇ ಅಧ್ಯಕ್ಷರಿರುವುದರಿಂದ ಸಮಾನವಾಗಿ ಸರಕಾರದಿಂದ ಬಂದ ಅನುದಾನವನ್ನು ಹಂಚುವ ಕಾರ್ಯವನ್ನು ಮಾಡಬೇಕು .ಪ್ರತಿಯೊಬ್ಬ ಪಂಚಾಯತ್ ಸದಸ್ಯನೂ ಸರಕಾರದಿಂದ ಬಂದ ಅನುದಾನವನ್ನು ಆಯಾ ಫಲಾನುಭಾವಿಯ ಮನೆಗೆ ತಿಳಿಸುವುದು ಅವನ ಆಧ್ಯ ಕರ್ತವ್ಯ .
                      ಪ್ರಧಾನ ಊರನ್ನು ಇಟ್ಟುಕೊಂಡು ಊರ ಹೆಸರನ್ನು ಹೀಗೆ ಕರೆಯುವುದು ವಾಡಿಕೆ .ಕಂಕನಾಡಿ- ಮಂಗಳೂರು  , ಯೆಯ್ಯಡಿ- ಮಂಗಳೂರು , ಅದ್ಯಾರು - ಮಂಗಳೂರು  ಎಂಬಲ್ಲಿ ಮಂಗಳೂರು ಪ್ರಧಾನ ಕೇಂದ್ರ ಬಿಂದುವಾಗಿ ಗುರುತಿಸಲ್ಪಡುತ್ತದೆ .ದರ್ಬೆ- ಪುತ್ತೂರು , ಕಲಲಾರೆ - ಪುತ್ತೂರು , ಬೊಳುವಾರು - ಪುತ್ತೂರು , ಎಂಬಲ್ಲಿ ಪುತ್ತೂರು ಪ್ರಾಧಾನ್ಯತೆ ಪಡೆಯುತ್ತದೆ . ಅಂತೆಯೇ ಚನ್ದಳಿಕೆ - ವಿಟ್ಲ , ಮಂಗಿಲ ಪದವ್ - ವಿಟ್ಲ , ನೆತ್ತೆರ್ ಕೆರೆ - ವಿಟ್ಲ ಎಂಬಲ್ಲಿ ವಿಟ್ಲ ಮಾನ್ಯತೆಯನ್ನು ಪಡೆಯುತ್ತದೆ . ಆದರೆ ಸಾಲೆತ್ತೂರು ತನ್ನ ಸುತ್ತಮುತ್ತ ಹಲವಾರು ಊರುಗಳನ್ನು   ಹೊಂದಿದ್ದರೂ  ಪ್ರಾಧಾನ್ಯತೆ ಪಡೆಯದಿರುವುದು ಬೇಸರದ ಸಂಗತಿ . ನಮ್ಮ ಊರಿನ ಸುತ್ತಮುತ್ತಲ ಪ್ರದೇಶಗಳನ್ನು ನಮ್ಮೂರಿನ ಜೊತೆ ಹೀಗೆ ಗುರುತಿಸಿದರೆ ಚೆನ್ನಾಗಿರುತ್ತದೆಯಲ್ಲವೇ?.ಮೆದು -ಸಾಲೆತ್ತೂರು ,ಪಾಲ್ತಾಜೆ -ಸಾಲೆತ್ತೂರು ,ತಿರುವಾಜೆ -ಸಾಲೆತ್ತೂರು ,ಅಗರಿ -ಸಾಲೆತ್ತೂರು ,ಕಟ್ಟತ್ತಿಲ-ಸಾಲೆತ್ತೂರು ,ಪುದ್ದೊಟ್ಟು-ಸಾಲೆತ್ತೂರು ,ಕೋಕಳ -ಸಾಲೆತ್ತೂರು ,ಕಾಡುಮಟ-ಸಾಲೆತ್ತೂರು ,ಕುಲಾಳು -ಸಾಲೆತ್ತೂರು --ಹೀಗೆ ಹೆಸರಿಸಿದರೆ ನಮ್ಮ ಸಾಲೆತ್ತೂರಿಗೆ ಪ್ರಾಧಾನ್ಯತೆ ಬರುತ್ತದೆಯಲ್ಲವೇ?.ಜನಪ್ರತಿನಿಧಿಗಳು ಸ್ವಲ್ಪ ಗಮನ ಇತ್ತ ಹರಿಸಿದರೆ ಒಳ್ಳೆಯದು .ಪತ್ರಿಕೆಗಳಲ್ಲಿ ಪ್ರಕಟಿಸುವಾಗ ಪತ್ರಿಕೋದ್ಯಮ ಬಂಧುಗಳೂ ಈ ಕಡೆ ಗಮಿನಿಸಿದರೆ ಒಳಿತು .ಯಾವುದೇ ರಾಜಕೀಯರಹಿತವಾಗಿ ಬರೆದ ಈ ವೈಚಾರಿಕ ಲೇಖನಕ್ಕೆ ನಮ್ಮ ಊರನ್ನು ಗುರುತಿಸಿದರೆ ಅದೇ ಸಲ್ಲುವ ದೊಡ್ಡ ಗವ್ರವ .ನಮ್ಮ ಸಾಲೆತ್ತೂರಿನ ಅನನ್ಯತೆಯನ್ನು ನಾವು ಇನ್ನಾದರೂ ಉಳಿಸಿಕೊಳ್ಳಬೇಕಾಗಿದೆ .ನಮ್ಮ ಚಾರಿತ್ರಿಕ,ಸಾಂಸ್ಕೃತಿಕ ಪರಿಧಿಯ ,ಆಧ್ಯಾತ್ಮಿಕ ಸರ್ವಧರ್ಮ ಸೆಲೆಯ ಸಾಲೆತ್ತ್ತೂರನ್ನು ಪಂಚಾಯತ್ ಆಮೂಲಕ ಎಲ್ಲರೂ ಮಾನ್ಯತೆ ನೀಡುವಂತಾಗಲಿ ಎಂಬುದೇ ಈ ಪುಟ್ಟ ಹೃದಯದ ಆಸೆ .



No comments:

Post a Comment