ಪಾದೂರು ಗುರುರಾಜ ಭಟ್
ತುಳುನಾಡಿನ ದೇಗುಲಗಳಲ್ಲಿ ಸ್ಥಾನಿಕ ಬ್ರಾಹ್ಮಣರು ಮೊದಲಿನಿಂದಲೂ ಪೂಜೆ ಮಾಡಿಕೊಂಡು ಬಂದವರು.ಮುಂದೆ ಅವರಿಗೆ ದೇಗುಲಗಳಲ್ಲಿ ಅವಕಾಶ ಸಿಗದೆ ಅಲ್ಲಿಗೆ ದೇವರ ಪೂಜೆಗೆ ಶಿವಳ್ಳಿ ಬ್ರಾಹ್ಮಣರು ದೇವರ ಪೂಜೆಗೆ ಸೇರಿಕೊಂಡರು.ಈ ವಿಚಾರವನ್ನು ಅವರು ತನ್ನ ಕೃತಿಯಲ್ಲಿ ಬರೆದುದರಿಂದ ಅವರಿಗೆ ಸಂಕಟ ಎದುರಾಗಿರಬಹುದು.ಅವರ ಸಾವು ಇನ್ನೂ ನಿಗೂಢ ! ಅದು ಆತ್ಮಹತ್ಯೆಯೋ ಅಥವಾ ಕೊಲೆಯೋ ?! ಒಟ್ಟಾರೆ ಆರ್ಥಿಕ ಮುಗ್ಗಟ್ಟಿಗೆ ತುತ್ತಾಗಿ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು ಎಂದು ಪೊಲೀಸರು ಅಂತಿಮ ಷರಾ ಬರೆದರು !! ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಕೂಡಾ ಬರೆದಿಟ್ಟಿದ್ದರು ಎಂದು ಪತ್ರಿಕಾ ವರದಿ ಬಂದಿತ್ತು !! ವಿಧಿವಶರಾಗುವಾಗ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾಗಿದ್ದರು . Studies in Tuluva History and Culture ಎಂಬ ಪ್ರಸಿದ್ಧ ಗ್ರಂಥವನ್ನು ಬರೆಯಲು ಬೇಕಾದ ಕ್ಷೇತ್ರಾಧ್ಯಯನ ಹಾಗೂ ಗ್ರಂಥ ಪ್ರಕಟಣೆಯ ವೆಚ್ಚಗಳನ್ನು ಸ್ವಂತ ಕಿಸೆಯಿಂದ ಭರಿಸಲು ಸಾಲವನ್ನು ಮಾಡಿದ್ದರು . ಆ ಕಾಲದಲ್ಲಿ (1975 ರ ಇಸವಿ) ಸುಮಾರು ಒಂದು ಲಕ್ಷ ರೂಪಾಯಿಯಷ್ಟು ಸಾಲದ ಹೊರೆ ಇತ್ತಂತೆ. ಮರ್ಯಾದೆ ಉಳಿಸಿಕೊಳ್ಳಲು ಕೊನೆಕ್ಷಣದಲ್ಲಿ ಆರ್ಥಿಕ ಸಹಾಯಕ್ಕಾಗಿ ಅಷ್ಟ ಮಠಗಳನ್ನು ಹಾಗೂ ಮಣಿಪಾಲದ ಪೈಗಳ ಮೊರೆ ಹೋದರೂ ಸೂಕ್ತ ಸ್ಪಂದನೆ ಸಿಕ್ಕಿರಲಿಲ್ಲವಂತೆ . ಸ್ವಂತ ಕಿಸೆಯಿಂದ ಕ್ಷೇತ್ರಾಧ್ಯಯನ ಹಾಗೂ ಪ್ರಕಟನೆಯ ವೆಚ್ಚ ಭರಿಸಿ ಅವರು ಬರೆದು ಪ್ರಕಟಿಸಿದ ಅವರ ಆಕರ ಗ್ರಂಥ Studies in Tuluva History and Culture ತುಳುನಾಡಿನ ಚರಿತ್ರೆಯಲ್ಲಿ ಅವರ ಹೆಸರನ್ನು ಅಜರಾಮರವನ್ನಾಗಿಸಿದರೂ ಅದಕ್ಕಾಗಿ ಅವರು ತಮ್ಮ ಬದುಕನ್ನೇ ಬಲಿಕೊಡ ಬೇಕಾಗಿ ಬಂದಿದ್ದು ಒಂದು ಮಹಾ ದುರ್ದೈವ ಹಾಗೂ ದುರಂತ !
ಮಾಹಿತಿ - ಶಶಿಕಾಂತ ಶೆಟ್ಟಿ ಕಟಪಾಡಿ
No comments:
Post a Comment