Friday, 16 November 2012

ಹನುಮಂತ ದೈವ


ಮರಹತ್ತುವ ’ಆಂಜನೇಯ ಸ್ವಾಮಿ’-ನೇಮ ನಡಾವಳಿ..
ದಕ್ಷಿಣ ಭಾರತದಲ್ಲೆಲ್ಲೂ ಕಾಣದ ಅಪರೂಪದ ನೇಮಾ ನಡಾವಳಿ ಇದು. ತುಳುನಾಡು ಭೂತರಾಧನೆಗೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ದೈವರಾಧನೆಯನ್ನು ತುಳುವರು ಅನಾಧಿ ಕಾಲದಿಂದಲೂ ನಂಬಿ ಕೊಂಡು ಬಂದಿದ್ದಾರೆ. ಕಷ್ಟ ಬಂದಾಗ ದೈವಕ್ಕೆ ಕೈಮುಗಿದು ಕಾಪಾಡು ಅಂತ ಮೊರೆ ಇಡುತ್ತಾರೆ.ಅದು ಕಲ್ಲುರ್ಟಿ ಆಗಿರಬಹುದು, ಪಂಜುರ್ಲಿ, ಧೂಮಾವತಿ, ರಕ್ತೇಶ್ವರಿ, ಗುಳಿಗ, ರುದ್ರಾಂಡಿ, ಜಾವತೆ, ಅಬ್ಬಜಲಾಯ, ಪೂಮಾಣಿ, ಕಿನ್ನಿ ಮಾಣಿ, ಹುಲಿ ಭೂತ, ಕುಲೆ ಭೂತ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಇಲ್ಲಿ ಬಹಳಷ್ಟು ಭೂತಗಳು ಅರ್ಥಾತ್ ದೈವಗಳು ನಮ್ಮ ಕಣ್ಣ ಮುಂದೆ ತೆರೆದುಕೊಳ್ಳುತ್ತವೆ. ಆದರೆ ನೀವು ಎಲ್ಲಾದರೂ ’ಆಂಜನೇಯ’ ಅರ್ಥಾತ್ ’ಹನುಮಂತ’ ಭೂತ ಇದೆಯಾ? ಆಂಜನೇಯನಿಗೂ ನೇಮಾ ನಡಾವಳಿ ನಡೆಯುತ್ತದಾ ಎಂದು ಕೇಳಿದರೆ ಗೊತ್ತಿಲ್ಲ ಅಂತ ಹೇಳುತ್ತೀರಿ…! ಬಹಳ ಭಕ್ತಿಯಿಂದ ಶ್ರದ್ಧೆಯಿಂದ ಆಂಜನೇಯ ಸ್ವಾಮಿಗೂ ಇಲ್ಲಿ ಕೋಲ ನಡೆಯುತ್ತದೆ. ದಕ್ಷಿಣ ಭಾರತದಲ್ಲೆಲ್ಲೂ ಕಾಣಸಿಗದ ಅಪರೂಪದ ಈ ನೇಮಾ ನಡಾವಳಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಇಳಂತಾಜೆ ಎಂಬಲ್ಲಿ ನಡೆಯುತ್ತದೆ..
chitra-suddi bidugade dainika puttur
chitra mahithi-sachin shetty -tulunada nenapu

No comments:

Post a Comment