Monday, 16 January 2012

ಶಾಲಾ ಸಾಂಸ್ಕೃತಿಕದಲ್ಲಿ ರಾಜಕೀಯ ಅನಿವಾರ್ಯವೇ ?


ಶಾಲೆ ಅದು ವಿಧ್ಯಾರ್ಥಿಗಳ ಪಾಲಿನ ದೇಗುಲವಿದ್ದಂತೆ .ಅಲ್ಲಿ ಮಕ್ಕಳ ಕಾರ್ಯಕ್ರಮಕ್ಕೆ ಒತ್ತಿರಬೇಕೆ ವಿನಃ ರಾಜಕೀಯಕ್ಕಲ್ಲ .ಅದು ಶೈಕ್ಷಣಿಕ , ಸಾಹಿತ್ತಿಕ  ವೇದಿಕೆ .ಬದುಕಿನ ಮೌಲ್ಯಗಳನ್ನು ಕಲಿಸುವ ,ವಿದ್ಯೆಯಿಂದ ಬೌದ್ದಿಕ  ಸ್ಥರಕ್ಕೆರಿಸುವ ದೇಗುಲವದು . ವರ್ಷವಿಡೀ ವಿಧ್ಯಾರ್ಥಿಗಳು ಪಾಠ ಪ್ರವಚನಗಳಲ್ಲಿ ತೊಡಗಿ ವರ್ಷದ ಕೊನೆಗೆ ಶಾಲೆಯ ವಾರ್ಷಿಕೋತ್ಸವದಲ್ಲಿ ಭಾಗವಹಿಸುತ್ತಾರೆ .ಬೆಳಗ್ಗಿನಿಂದ ತೊಡಗಿ ಸಂಜೆತನಕ ಸ್ಪರ್ಧಿಗಳಿಗೆ ಬಹುಮಾನ ವಿತರಣೆ ಇನ್ನಿತರ ಸಣ್ಣ ಪುಟ್ಟ ಸಾಂಸ್ಕೃತಿಕ ಕಾರ್ಯ ಕ್ರಮಗಳು  ನಡೆಯುತ್ತಿರುತ್ತವೆ.ಬಹುಮಾನವೇ ಬದುಕಿನ ಮಾನದಂಡವಲ್ಲ .ಅದು ಕೇವಲ ವಿಧ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಕೊಡುವ ಒಂದು ಪರಿಕರ ಅಷ್ಟೇ .ಬಹುಮಾನ ಪಡೆದವರೆಲ್ಲ ಪಂಡಿತರೂ ಅಲ್ಲ ,ಪಡೆಯದವರು ದದ್ದರೂ ಅಲ್ಲ .ಬಹುಮಾನ ಪಡೆಯುವುದನ್ನು ಶಾಲೆ ಕಲಿಸುವುದಿಲ್ಲ .ಶಾಲೆ ಸಮಾಜಕ್ಕೆ ಯೋಗ್ಯ ವ್ಯಕ್ತಿಗಳನ್ನು ಒದಗಿಸುತ್ತದೆ .ಅಂತ ಶಾಲೆಗಳಲ್ಲಿ ವಿಧ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಜರಗುವಾಗ ರಾಜಕೀಯದ ಅಧಿಕಪ್ರಸಂಗೀತನ ಅನಿವಾರ್ಯವೆಂದು ನನಗನಿಸುವುದಿಲ್ಲ  .
                  ವಿದ್ಯೆಯಲ್ಲಿ ಮುಂದಿಲ್ಲದವ ಇನ್ನಿತರ ಕ್ಷೇತ್ರವಾದ ಆಟೋಟಗಳಲ್ಲಿ,ಸಾಹಿತ್ತಿಕ ಸ್ಪರ್ಧೆಗಳಲ್ಲಿ ಮುಂದಿರಬಲ್ಲ .ವಿದ್ಯಾರ್ಥಿಗಳನ್ನು ನಿನಗೆ ಏನು ಗೊತ್ತಿಲ್ಲ ನೀನು ದಡ್ಡ ಎಂದು ಯಾವ ಗುರುವೂ ನಿಂದಿಸಬಾರದು .ಯಾಕೆಂದರೆ ಆ ವಿಧ್ಯಾರ್ಥಿಗೆ ಶೂನ್ಯತನ ಮನಸ್ಸಲ್ಲಿ ಉಂಟಾಗುತ್ತದೆ .ಹಾಗಾಗದಂತೆ ಗುರುಗಳು ನೋಡಿಕೊಳ್ಳಬೇಕು .ಶಾಲೆ ನಾಯಕತ್ವವನ್ನು ಕಲಿಸುತ್ತದೆ .ಆದರೆ ಅದೇ ನಾಯಕರು ಮುಂದೆ ಸಮಾಜದಲ್ಲಿ ಒಳ್ಳೆ ನಾಯಕರಾಗಬಲ್ಲರು .ಆದರೆ ಕೆಲವೊಮ್ಮೆ ಅದೇ ನಾಯಕರೆ ಬೊಗಳೆ ಬಿಡುವುದೂ ಇದೆ . ಅದು ಅವರವರಿಗೆ ಬಿಟ್ಟದ್ದು .ಆದರೆ ತಾನು ಬಗವಹಿಸುವ ಕಾರ್ಯಕ್ರಮದ ಸಮಯ ಸಂಧರ್ಭವನ್ನು ನೋಡದೆ ಒಬ್ಬನನ್ನು ಒಬ್ಬ ಹೊಗಳುತ್ತಾ ,ಒಬ್ಬನನ್ನು ಒಬ್ಬ ಮೂದಲಿಸುತ್ತಾ ಸಮಯ ವ್ಯರ್ಥ ಮಾಡುವುದು ಎಷ್ಟರ ಮಟ್ಟಿಗೆ ಸರಿ ? . 
                 ಯಾವುದೇ ಕಾರ್ಯಕ್ರಮಗಳೇ ಆಗಲಿ ಅಲ್ಲಿ ಒಬ್ಬ ಅಧ್ಯಕ್ಷ ,ಒಬ್ಬ ಉದ್ಘಾಟಕ ,ಒಬ್ಬಿಬ್ಬರು ಅತಿಥಿಗಲಿರುವುದು ಸಹಜ . ಆದರೆ ಕೆಲವೊಂದು ಶಾಲಾ ಕಾರ್ಯಕ್ರಮಗಳಲ್ಲಿ ನಾನು ನೋಡಿದಂತೆ ಪಂಚಾಯತ್ ಸದಸ್ಯರು ಮೂರ್ನಾಲ್ಕು ಜನ ,ರಾಜಕೀಯ ನೇತಾರರು ಮೂರ್ನಾಲ್ಕು ಜನ ಶಾಲಾಭಿವ್ರಿದ್ದಿ ಸಮಿತಿಯವರು ,ಶಿಕ್ಷಕ ರಕ್ಷಕ ಸಂಘದವರು ಇವರೆಲ್ಲ ಸೇರಿ ೧೦-೨೦ ಜನ ವೇದಿಕೆಯಲ್ಲಿ ಇರುತ್ತಾರೆ .ಕೆಲವರು ಭಾಷಣ ಸುರು ಮಾಡಿದರೆ ಹಿಂದಿಂದ ಚೀಟಿ ಕೊಟ್ಟರೂ ,ಅಂಗಿ ಹಿಡಿದೆಳೆದರೂ ನಿಲ್ಲಿಸುವುದಿಲ್ಲ .೪ ಘಂಟೆಗೆ ಸಭಾ ಕಾರ್ಯಕ್ರಮ ಎಂದಿದ್ದಾರೆ ಇವರು ಬರುವಾಗಲೇ ೬ ಘಂಟೆ .ಕೊರೆಯಲು ಶುರುಮಾಡಿ ಮುಗಿಸುವಾಗ ೯ ಘಂಟೆ .ಪಾಪ ಸಣ್ಣ ಮಕ್ಕಳು ೫ ಗಂಟೆಗೆ ವೇಷ ಹಾಕಿ ಕುಳಿತು ನಿದ್ದೆ ತೂಗುತ್ತಿರುತ್ತಾರೆ .ಆ ಮಕ್ಕಳು ಮತ್ತೆ ಒಟ್ಟಾರೆ ರಂಗದಲ್ಲಿ ಕುಣಿಯುತ್ತಾರೆ .ಇದ್ಯಾಕೆ ರಾಜಕೀಯ ನಾಯಕರಿಗೆ ಹೊಳೆಯುವುದಿಲ್ಲ? 
ಶಲ ಕಾರ್ಯಕ್ರಮದಲ್ಲಿ ಭಾಗವಹಿಸುವಾಗ ಶಾಲೆಯ ಸಂಬಂದಪಟ್ಟ ವಿಚಾರದ ಬಗ್ಗೆ ಬೇಕಿದ್ದರೆ ಮಾತಾಡಲಿ .ಅದು ಬಿಟ್ಟು ನಾವು ಅಲ್ಲಿ ದಾಮಾರು ಮಾಡಿದೆವು ,ಇಲ್ಲಿ ಆಣೆಕಟ್ಟು ಮಾಡಿದೆವೆಂದು ವಿವರಿಸತೊದಗಿದರೆ ಮಕ್ಕಳಿಗೆ ಅದು ಅರ್ಥವಗುತ್ತದೆಯೇ ? ಅದನ್ನು ನಾಯಕರು ಅರ್ಥ ಮಾಡಿಕೊಳ್ಳಬೇಕು .ಶಿಕ್ಷಕರನ್ನು ಹಿಗ್ಗಾ ಮುಗ್ಗ ಹೆದರಿಸುವ ರಾಜಕೀಯ ನಾಯಕರು ಇದ್ದಾರೆ ೫ ವರ್ಷ ಇದ್ದಾರು .ಶಾಲೆಯ ಗುರುಗಳು ಸ್ಟಂಪ್ ಪೇಪರ್ ಮೇಲೆ ಸೈನ್ ಮಡಿ ಸಂಬಳ ಪಡೆಯುವವರು,ನಿವೃತ್ತಿ ತನಕ ದುಡಿಯುತ್ತಾರೆ .ಕೊಲಾಜ್ ಗುರುಗಳಿಗೆ ಸಂಬಳ ಕೊಡುವ ಕಾಲು ಪಟ್ಟಾದರೂ ಪ್ರಾಥಮಿಕ ,ಪ್ರೌಡ ಶಾಲೆಯ ಗುರುಗಳಿಗೆ ಸಿಗುತ್ತದೆಯೇ ? ಇಲ್ಲ .ಆದರೆ ಅವರ ಕಷ್ಟ ಮಾತ್ರ ದೇವರೇ ನೋಡಬೇಕು .ಮತದಾನ ಪ್ರಕ್ರಿಯೆಯಿಂದ ಹಿಡಿದು ,ಬಿಸಿಯೂಟ ,ನಲಿ ಕಲಿ ,ಅಕ್ಷರ ದಾಸೋಹ ಪರಿಹಾರ ಭೋದನೆ ಒಂದೇ ಎರಡೆ .ಹಿರಿಯ ಪ್ರಾಥಮಿಕ ಶಾಲೆಯ ಗುರುಗಳನ್ನು ಎಷ್ಟು ಹಿಂದಿ ಹಿಪ್ಪೆ ಮಾಡಬೇಕೋ ಅಷ್ಟು ಹಿಂದಿ ಹಿಪ್ಪೆ ಮಾಡುತದೆ ಸರಕಾರ .ಅಷ್ಟೇ ಅಲ್ಲ ಎಲ್ಲಿಗೆ ಹೋಗಬೇಕಿದ್ದರೂ ಶಾಲಾ ಅಭಿವ್ರಿದ್ದಿ ಸಮಿತಿಯ ಅಧ್ಯಕ್ಷರ ಅಪ್ಪಣೆ ಪಡೆದೆ ಹೋಗ ಬೇಕು .ಪಾಪ ,ಬದುಕಿನ ಅನಿವಾರ್ಯತೆಗಾಗಿ ದುಡಿಯುವ ಅದರಲ್ಲೂ ಮಾಸ್ತ್ರುಗಲಿಗಿಂಥ ಹೆಚ್ಹು ತೊಂದರೆ ಅನುಭವಿಸುವವರು ಶಿಕ್ಷಕಿಯರು .ದೂರದ ಊರುಗಳಿಂದ ಬಂದಿರ್ತಾರೆ .ಸಣ್ಣ ಮಗುವನ್ನು ಮನೆಯಲ್ಲಿ ಬಿಟ್ಟು ಬಂದಿರ್ತಾರೆ .ಇದೆಲ್ಲ ಯಾಕೆ ಯಾರ ಕಣ್ಣಿಗೂ ಕಾಣಿಸುವುದಿಲ್ಲ ? ತಮ್ಮ ರಾಜಕೀಯದ ಬಗ್ಗೆ ಮಾತನಾಡುವ ಧುರೀಣರು ಒಮ್ಮೆ ಶಿಕ್ಷಕರಾಗಿ ನೋಡಿ .ಆಗ ಅವರ ಯಾತನೆ ನಿಮಗೆ ಅರಿವಾಗುತ್ತದೆ.ಅಷ್ತಿದ್ದೂ ಗುರುಗಳು ಸರಿಯಾದ ಸಮಯದಲ್ಲಿ ಪಾಠ ಮುಗಿಸಿ ಪರೀಕ್ಷೆಗೆ ತಯಾರಾಗಬೇಕು .ಸಕ್ರೆ ಕಾಯಿಲೆ ಇರುವವರು,ಗಂಟು ನೋವಿರುವವರು ಹೇಗೆ ಕುಣಿದು ಪಾಠ ಮಾಡಬಲ್ಲರು? .ಇದೆಲ್ಲ ಯಾಕೆ ಯಾರಿಗೂ ಅರ್ಥವಾಗುವುದಿಲ್ಲ? .ಇನಾದರೂ ರಾಜಕೀಯ ಧುರೀನರೆ ಗುರುಗಳನ್ನು ಮನುಷ್ಯರಾಗಿ ನೋಡಿ .ಶಾಲಾ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ದನಿವಾಗದಂತೆ ಭಾಷಣ ಮಾಡಿ .ನೀವು ಮಕ್ಕಳಿಂದ ವನ್ದ್ಯರಾಗಿ.

Saturday, 14 January 2012

ಎಲ್ಲ ಯಾತನೆಗಳನ್ನು ಅನುಭವಿಸುವವಳು ಹೆಣ್ಣು

     
                    ಹೆಣ್ಣು ಸಮಾಜದ ಕಣ್ಣು ನಿಜ .ಆದರೆ ಆ ಹೆಣ್ಣು  ಪುರುಷಪ್ರಧಾನ ಸಂಕಲೆಯೊಳಗೆ ಸಿಳುಕಿಕೊಂಡಿರುವುದು ನಿತ್ಯ ಸತ್ಯ .ಪೇಟೆ ಪಟ್ಟಣಗಳಲ್ಲಿನ ಹೆಣ್ಣುಮಕ್ಕಳಿಗೆ ಅಲ್ಪ ಸ್ವಲ್ಪ ಸ್ವಾತಂತ್ರ್ಯ ಸಿಕ್ಕಿದರೂ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ಎಲ್ಲ ನೋವಿಗೂ ತನ್ನನ್ನು ಇನ್ನೂ ಒಡ್ಡಿಕೊಂಡು ಬದುಕುತ್ತಿದ್ದಾರೆ.ಹೆಣ್ಣಿಗೆ ಸ್ವಾತಂತ್ರ್ಯವಿದೆ ಎಂದು ಹೇಳುವ ಪುರುಷ ಪ್ರಧಾನ ವ್ಯವಸ್ಥೆ ಆಕೆಯನ್ನು ಇನ್ನೂ ಅಬಲೆಯಾಗಿ ನೋಡುತ್ತಿದೆ.ಅವಳಿಗೆ ಏಕಾಂಗಿಯಾಗಿ ಕತ್ತಲ್ಲಲ್ಲಿ ಇನ್ನೂ ನಡೆದಾಡಲು ಸಾಧ್ಯವಾಗಿಲ್ಲ ಎಂದಾದರೆ ಎಲ್ಲಿ ಆಕೆಗೆ ಸ್ವಾತಂತ್ರ್ಯ ಲಭಿಸಿದಂತಾಯಿತು ?.ಕೆಲಸದ ವೇತನದಲ್ಲೂ ತಾರತಮ್ಯ.ಗ್ರಾಮಿಣ ಭಾಗಗಳಲ್ಲಿ ಗಂಡಸರ ಸರಿ ಸಮಾನರಾಗಿ ಹೆಂಗಸರು ಗದ್ದೆ ತೋಟಗಳಲ್ಲಿ ದುಡಿದರೂ ಸಂಬಳದಲ್ಲಿ ತುಂಬಾ ವ್ಯತ್ಯಾಸವಿದೆ.ಆಕೆ ಎಲ್ಲಿಯಾದರೂ ಧ್ವನಿಯೆತ್ತಿ ಮಾತನಾಡಿದರೆ ಗಂಡುಬೀರಿಯೆಂಬ ಪಟ್ಟ.ಆಕೆ ಗಂಡು ಮಕ್ಕಳ ಜೊತೆ ತನ್ನ ತರಗತಿಯ ವಿದ್ಯಾರ್ಥಿಯಾದರೂ ಹೋಗಲು ಬಿಡುವುದಿಲ್ಲ.ಹೆಚ್ಚು ಮಾತಾಡಿದರೆ ವಾಚಾಳಿಯೆಂಬ ಪಟ್ಟ ಬೇರೆ.ಶಾಲೆಗಳಲ್ಲಿ ಗಂಡಿಗೆ ಸರಿಸಮಾನವಾಗಿ ಹೆಣ್ಣುಮಕ್ಕಳನ್ನು ಕೂರಿಸುವುದು ಬಹಳ ಕಡಿಮೆ.ಅದು ಹಾಗಿರಲಿ,ಮನೆಯಲ್ಲಿ ತಂದೆ ತಾಯಂದಿರು ತನ್ನ ಮಕ್ಕಳಲ್ಲೇ ಗಂಡು ಹೆಣ್ಣೆಂಬ ತಾರತಮ್ಯ ಮಾಡುತ್ತಾರೆ.ನೀನು ಎಷ್ಟು ಓದಿದರೆನು ಮನೆಯಡುಗೆ ಕೋಣೆ ನಿನಗೆ ಶಾಶ್ವತವಲ್ಲವೇ  ಎನ್ನುವವರೂ ಇದ್ದಾರೆ.ಆದರೆ ಇಂದು ಹೆಣ್ಣು ಮಕ್ಕಳಿಗೆ ಹೆಚ್ಚಿನವರು ವಿದ್ಯಾಭ್ಯಾಸವನ್ನು ಕೊಡುತ್ತಿದ್ದಾರೆ.ಒಂದು ಕಾಲವಿತ್ತು,ಹೆಣ್ಣು ಮಕ್ಕಳನ್ನು ಹತ್ತನೇ ತರಗತಿಯವರೆಗೆ ಓದಿಸಿ ಮತ್ತೆ ಮನೆಯ ಅಡುಗೆ ಕೆಲಸಕ್ಕೆ ಹಚ್ಚುತ್ತಿದ್ದರು .ಹುಟ್ಟಿನಿಂದ ಹಿಡಿದು ಚಟ್ಟವೇರುವ ತನಕ ಹೆಣ್ಣನ್ನು ಭಾವುಕ ಜೀವಿಯಾಗಿಸಿದ ಕ್ಷಮಯಾ ಧರಿತ್ರಿಯೆಂದು ಉಬ್ಬಿಸಿದ ಪುರುಷ ಪ್ರಧಾನ ಸಮಾಜ ಪ್ರತಿಯೊಂದರಲ್ಲೂ ಆಕೆಯ ಸ್ವಾತಂತ್ರ್ಯಕ್ಕೆ ಧಕ್ಕೆಯನ್ನು ತಂದಿದೆ.
ಸರಕಾರಿ ಕಛೇರಿಗಳಲ್ಲಿ,ಶಾಲಾ ಕಾಲೇಜುಗಳಲ್ಲಿ ಕೆಲವು ಕಡೆ  ಲೈಂಗಿಕ ಕಿರುಕುಳ ಅನುಭವಿಸಿ ಹೊರಗೆ ಹೇಳಲಾರದೆ ದುಡಿಯುವ ಅದೆಷ್ಟೋ ಹೆಣ್ಣು ಮಕ್ಕಳಿದ್ದಾರೆ.ಯಾವುದಾದರೂ ಸಿನೆಮಾ ರಂಗದಲ್ಲಿ ಮುಂದೆ ಬರೋಣಬೆಂದರೆ ಅಲ್ಲೂ ಲೈಂಗಿಕ ದೌರ್ಜನ್ಯಕ್ಕೆ ಆಕೆ ಮೈಯೊಡ್ಡುವ ಪರಿಸ್ಥಿತಿ.ಅವಳನ್ನು ತಮ್ಮ ಕಾಮ ತೃಷೆಗೆ ಬಳಸಿ ಆಕೆಗೆ ಕೊಡುವ ಹೆಸರು ವ್ಯಭಿಚಾರಿಯೆಂದು.ಇರುಳಲ್ಲಿ ಹೆಣ್ಣನ್ನು ಅನುಭವಿಸಿ ಹಗಲಲ್ಲಿ ಆಕೆಯನ್ನು ವ್ಯಭಿಚಾರಿ ಎನ್ನುವ ವ್ಯಸ್ಥೆಯಡಿ ಎಲ್ಲಿ ಆಕೆಗೆ ಸ್ವಾತಂತ್ರ್ಯ ಸಿಕ್ಕಿದೆ?.ದೈಹಿಕವಾಗಿ ಹೆಣ್ಣು ಗಂಡುಗಳಲ್ಲಿ ವ್ತ್ಯತ್ಯಾಸವಿರಬಹುದು ವಿನಃ ಮಿಕ್ಕೆಲ್ಲ ವಿಚಾರಗಳಲ್ಲಿ ಗಂಡಿನಷ್ಟೇ ಆಕೆ ಸಬಳಲಾದರೂ ಆಕೆಯನ್ನು ಅಬಲೆಯಾಗಿ ನೋಡುವ ದೃಷ್ಟಿಕೋನ ಇನ್ನೂ ಕಡಿಮೆಯಾಗಿಲ್ಲ. 
ಮದುವೆಯಾದ ಹೊಸದರಲ್ಲಿ ಯಾವುದೊ ಕಾಯಿಲೆಯಿಂದ ಗಂಡ ತೀರಿಕೊಂಡರೆ ಆಕೆಯೇ ಅದಕ್ಕೆ ಕೊರಳೊಡ್ಡಬೆಕು .ಅವಳು ಮನೆಗೆ ಕಾಲಿಟ್ಟ ಘಳಿಗೆ ಸರಿಯಿಲ್ಲವೆಂದು ಆಕೆಯ ಮೇಲೆ ಆರೋಪ ಹೊರಿಸುಯ್ತಾರೆ. ಇನ್ನೆಲ್ಲಿಯಾದರೂ ದಾಂಪತ್ಯದಿಂದ ಒಂದು ಸಣ್ಣ ಮಗುವಾಗಿ ಗಂಡ ಆಕಸ್ಮಿಕವಾಗಿ ತೀರಿ ಹೋದರೆ ಆಕೆಯನ್ನು ತಲೆಯೆತ್ತಿ ನೋಡುವವರಿಲ್ಲ. ಆಕೆ ಮಾಡಿದ ತಪ್ಪಾದರೂ ಏನು ?.ಅಪಘಾತದಲ್ಲಿ ಗಂಡ ತೀರಿಕೊಂದರಂತೂ ಅವಳೇ ನನ್ನ ಮಗನನ್ನು ಕೊಂದಳು ಎಂದು ಆಕೆಗೆ ನಿತ್ಯ ಶಾಪವಿಟ್ಟು ಅವಳನ್ನು ಮಾನಸಿಕವಾಗಿ ಕುಗ್ಗಿಸಿ ಬಿಡುತ್ತಾರೆ .ಆದರೆ ಹೆಣ್ಣೊಬ್ಬಳು ಗಂಡನಿರುವಾಗಲೇ ತೀರಿಕೊಂಡರೆ ಆಕೆಯದು ಮುತ್ತೈದೆ ಸಾವೆಂದು ಆಕೆಯನ್ನು ವರ್ಣಿಸುತ್ತಾರೆ.ಗಂಡಿಗೊಂದು ನ್ಯಾಯ,ಹೆಣ್ಣಿಗೊಂದು ನ್ಯಾಯ. ಹೆಣ್ಣಿಗೆ ತಂದೆ ತಾಯಿ ಇದ್ದರೆ ಅವರೇ ಆಕೆಯನ್ನು ಸಲಹಬೇಕಷ್ಟೆ .ಇಲ್ಲಿ ತಾನು ಮಾಡದ ತಪ್ಪಿಗೆ ಯಾತನೆ ಅನುಭವಿಸುವವಳು ಹೆಣ್ಣು.ಗಂಡು ತನಗೊಬ್ಬಳು ಮಡದಿಯಿದ್ದರೂ ಪರಸ್ತ್ರೀ ಸಂಗ ಬಯಸಿದರೆ ಅಲ್ಲೂ ಹೆಂಡತಿಯಲ್ಲಿ ಏನೋ ಕೊರತೆಯಿದೆ ಎಂದು ಮಾಡದ ತಪ್ಪಿಗೆ ಆರೋಪ.ಆದರೆ ಮದುವೆಯಾದ ಹೆಣ್ಣೊಬ್ವಳು ಪರಿಚಯಸ್ಥ ಗಂಡಿನೊಡನೆ ಮಾತನಾಡಿದರೆ ಅವಳ ಮೇಲೆ ಇಲ್ಲ ಸಲ್ಲದ ಆರೋಗಳು ಕೇಳಿ ಬರುತ್ತವೆ..ಸಂತಾನ ಪ್ರಾಪ್ತಿಯ ಸಂದರ್ಭದಲ್ಲಿ ಗಂಡಿನಲ್ಲಿ ನ್ಯೂನತೆಯಿದ್ದರೂ ಆರೋಪ ಬರುವುದು ಹೆಣ್ಣಿನ ಮೇಲೇನೆ.ಇದು ದುರಂತ.
          ಮದುವೆಯಾಗಿ ಗಂಡ ಸತ್ತರೆ ಆಕೆ ಸಣ್ಣ ವಯಸ್ಸಿನವಳಾದರೂ ಆಕೆಗೆ ವಿಧವೆಯ  ಪಟ್ಟ .ಆದರೆ ಹೆಂಡತಿ ಸತ್ತರೆ ಗಂಡನ್ನು ಯಾರೂ ಯಾಕೆ ವಿದುರ ಎನ್ನುವುದಿಲ್ಲ? .ಎಲ್ಲ ಸೂಕ್ಷ್ಮ ವಿಚಾರಗಳು  ಪುರುಷ ಪ್ರಧಾನ ವ್ಯವಸ್ಥೆಯ ಯೋಚನಾ ಲಹರಿಯಿದು.ದೈವದ ಸ್ಥಾನಗಳಲ್ಲೂ ಕೆಲವೊಂದು ಉಲ್ಲಾಲ್ದಿ ಸ್ಥಾನಗಳಲ್ಲಿ ದೈವವನ್ನು ಹೆಣ್ಣು ಮಕ್ಕಳು ನೋಡುವ ಹಾಗಿಲ್ಲ.ಸಿರಿಯಾಗಲೀ,ಉಲ್ಲಾಲ್ದಿಯಾಗಲೀ ಪುರುಷ ವ್ಯವಸ್ಥೆಯ ಚೌಕಟ್ಟನ್ನು ಮೀರಿದ ಕಾರಣ ಹೆಣ್ಣು ಮಕ್ಕಳು ಉಲ್ಲಾಲ್ದಿಯನ್ನು ಕೆಲವು ಕಡೆ ನೋಡುವಂತಿಲ್ಲ.ಹೆಣ್ಣೊಬ್ಬಳು ಯಾತನೆಯನ್ನು ಅನುಭವಿಸಿ ಗಂಡಿನ ವಿರುದ್ಧ ತಿರುಗಿ ಬಿದ್ದರೆ ಅವಳ ಮೈಯಲ್ಲಿ ಸಿರಿ ಬಂದಿದೆಯೆಂದು ಹೆದರುತ್ತಾರೆ. ಮದುವೆ ಎಂಬ ಬಂದನದಲ್ಲಿ ಗಂಡು ಹೆಣ್ಣಿಗೆ ತಾಳಿ ಕಟ್ಟುತ್ತಾನೆ.ಗಂಡ ತೀರಿ ಹೋದರೆ ಅದನ್ನು ತೆಗೆಯಬೇಕು.ಆದರೆ ಹಾಗೆ ತೆಗೆದರೂ ಕಷ್ಟ.ಕರಿಮಣಿ ತಾಳಿಯಿಲ್ಲದ ಹೆಣ್ಣನ್ನು ನೋಡುವ ಪುರುಷರ ದೃಷ್ಠಿಯೇ ಬೇರೆ.ಅದಕ್ಕಾಗಿ ಗಂಡ ಸತ್ತರೂ ಅವನ ನೆನಪಿಗಾಗಿ,ತನ್ನ ರಕ್ಷಣೆಗಾಗಿ ಅಕೆ ಕರಿಮಣಿಯನ್ನು ಧರಿಸುತ್ತಾಳೆ.ಉಳಿದಂತೆ ಆಕೆಯ ಶೃಂಗಾರ ಸಾಧನಗಳು ಎಳವೆಯಿಂದಲೇ ಆಕೆಯ ಜೊತೆಗಿರುತ್ತವೆ.ಅದನ್ನು ತೆಗೆಯಬೇಕೆಂದಿಲ್ಲ.ಪಾಶ್ಚಾತ್ಯ ಸಂಸ್ಕೃತಿ ನಮ್ಮ ಹೆಣ್ಣು ಮಕ್ಕಳನ್ನು ಹಾಳುಗೆಡಹುತ್ತಿದೆ.ಯಾಕೆಂದರೆ ಪಾಶ್ಚಾತ್ಯರ ತುಂಡುಡುಗೆ ನಮ್ಮ ಹೆಣ್ಣು ಮಕ್ಕಳನ್ನು ಆಕರ್ಶಿಸಿ  ಹೆಣ್ಣಿನ ಬಾಹ್ಯ ಸೌಂದರ್ಯವನ್ನು ನೋಡಿ ಗಂಡು ಆಶೆ ಪಡುವಂತಾಗಿದೆ .ಇದರಿಂದ ಹೆಣ್ಣಿನ ಮಾನದ ಮೇಲೆ ಗಂಡಿನ ಹದ್ದಿನ ಕಣ್ಣು ಬೀಳುವುದು ಸಹಜ .ಹೀಗಾಗದಂತೆ ಹೆಣ್ಣಿಗೆ ತಂದೆ ತಾಯಂದಿರೆ ಬುದ್ದಿ ಹೇಳಬೇಕು .ಅಂತೆಯೇ ಹೆಣ್ಣುಮಕ್ಕಳಿಗೆ ಚಿಕ್ಕ ಪ್ರಾಯದಲ್ಲೇ ಲೈಂಗಿಕ ಶಿಕ್ಷಣವನ್ನು ನೀಡುವುದು ತಾಯಿಯ ಜವಾಬ್ದಾರಿ .ಪ್ರೌಡ ಶಿಕ್ಷಣ ಹಂತದಲ್ಲಿ ಹೆಣ್ಣು ಮಕ್ಕಳು ಎಡವದಂತೆ ತಂದೆ ತಾಯಂದಿರು,ಗುರುಗಳು ಅವರನ್ನು ತಿದ್ದಲು ಪ್ರಯತ್ನಿಸಬೇಕು .ಯಾಕೆಂದರೆ ಹೆಣ್ಣು ಒಮ್ಮೆ ಗಂಡಿನ ಬಲೆಗೆ ಬಿದ್ದರೆ ಆಕೆಯ ಕತೆ ಮುಗಿದಂತೆಯೇ .ಪ್ರೀತಿಯ ನಾಟಕವಾಡಿ,ತಾನೂ ಅನುಭವಸಿ,ಇತರ ತನ್ನ ಗೆಳೆಯರಿಗೂ ಹೆಣ್ಣನ್ನು ಹೆಂಡದಂತೆ ನೀಡಿ ಕೇರಳದ ಮುಖಾಂತರ ಹೊರದೇಶಗಳಿಗೆ ಸಾಗಿಸುವ ವ್ಯವಸ್ಥಿತ ಜಾಲವಿದೆ .ಹಾಗಾಗದಂತೆ ಮಖ್ಯವಾಗಿ ಹೆಣ್ಣು ಮಕ್ಕಳೇ ಜಾಗೃತರಾಗಿರಬೇಕು.
            ಭವ್ಯ ಸಾಂಸ್ಕೃತಿಕ ವಲಯದಲ್ಲಿ ಪ್ರಾಮಾಣಿಕವಾಗಿ ಬದುಕುತ್ತಿರುವ ಹೆಣ್ಣು ಮಕ್ಕಳು ಬಹಳ ಸುಲಭವಾಗಿ ಕಾಮುಕರ ಬಲೆಗೆ ಬೀಳುತ್ತಿರುವುದು ವಿಪರ್ಯಾಸ .ಯಾವುದೇ ಸ್ತ್ರೀ ವಾದಿಗಲಾಗಲಿ,ಮಹಿಳಾ ಸಂಘಟನೆಗಳಾಗಲೀ ಬರುವುದು ಹೆಣ್ಣೊಬ್ಬಳು ನರಕಕ್ಕೆ ಬಿದ್ದ ಮೇಲೆ .ಅದಕ್ಕಿಂತ ಮೊದಲು ಅವರು ಸರಿಯಾದ ಮಾರ್ಗ ದರ್ಶನ ನೀಡಿದರೆ ಇನ್ನು ಮುಂದಾದರೂ ಹೆಣ್ಣು ಮಗಳೊಬ್ಬಳಿಗೆ ಬದುಕು ಸಿಕ್ಕೀತು .
         ಕೆಲವೊಂದು ಸಂಪ್ರದಾಯದಲ್ಲಿ ಗಂಡ ಸತ್ತರೆ
 ಹೆಣ್ಣು ತಲೆ ಬೋಳಿಸುವ ಕ್ರಮವಿದೆ .ಅದು ತಪ್ಪಲ್ಲವೇ ? ಎಳೆಯ ಪ್ರಾಯದಲ್ಲಿ ಗಂಡನನ್ನು ಕಳೆದುಕೊಂಡ ಹೆಣ್ಣಿಗೆ ಬದುಕುವ ಹಕ್ಕಿಲ್ಲವೇ ?.ಅಂತೆಯೇ ನಿಶ್ಚಿತಾರ್ತ ನಡೆದು ಹುಡುಗ ತೀರಿಕೊಂಡರೂ ಅದಕ್ಕೆ ಹೆಣ್ಣನ್ನೇ ದೂಷಿಸುತ್ತಾರೆ .ಮದುವೆಯಾದ ಮೇಲೂ ಇನ್ನೊಬ್ಬಳ ಜೊತೆ ಸಂಪರ್ಕವಿರಿಸಿದ ಗಂಡು ಹೆಂಡತಿಯ ಆಶೋತ್ತರಗಳನ್ನು ಈಡೇರಿಸದೇ ಸತಾಯಿಸುವುದೂ ಇದೆ .ಇದು ತಪ್ಪಲ್ಲವೇ? .ಆ ಹೆಣ್ಣು ಮಗಳು ಮಾಡಿದ ತಪ್ಪಾದರೂ ಏನು ?.ಇದನ್ಯಾಕೆ ನಾವು ಅಷ್ಟು ಹಗುರವಾಗಿ ತೆಗೆದುಕೊಳ್ಳಬೇಕು? .ಗಂಡಿನ ಬಲಾತ್ಕಾರದಿಂದ ಹೆಣ್ಣೊಬ್ಬಳು ಆತನ ಬಲೆಗೆ ಬಿದ್ದು ಸಮಾಜಕ್ಕೂ ಹೇಳಲಾರದೆ ಮನೆಯವರಿಗೂ ಹೇಳಲಾರದೆ ,ಗೆಳತಿಯರಿಗೂ ಹೇಳಲಾರದೆ ಮನದಲ್ಲೇ  ನೋಯುತ್ತಾ ಕೊನೆಗೊಮ್ಮೆ ಆತ್ಮ ಹತ್ಯೆ ಮಾಡಿಕೊಳ್ಳುತ್ತಾಳೆ .ಕಾಲೇಜುಗಳಲ್ಲಿ ನಡೆಯುತ್ತಿರುವುದು ಇದೇನೇ .ಟ್ಯೂಷನ್ ಹೇಳಿಕೊಡುವ ನೆಪದಲ್ಲಿ ಕಲಿಕೆಯಲ್ಲಿ ಹಿಂದಿರುವ ಹೆಣ್ಣು ಮಕ್ಕಳನ್ನು ಗುರುತಿಸಿ ಅವರನ್ನು ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಳ್ಳುತ್ತಿರುವ ಅದೆಷ್ಟೋ ಶಿಕ್ಷಕರಿದ್ದಾರೆ .ಕೆಲವೊಮ್ಮೆ ಗೊತ್ತಾಗುತ್ತದೆ,ಕೆಲವೊಮ್ಮೆ ಅಲ್ಲೇ ಮುಚ್ಚಿ ಹೋಗುತ್ತದೆ ಹೆಚ್ಚಿನ ಹೆಣ್ಣು ಮಕ್ಕಳು ಹೆದರಿ ಮನೆಯಲ್ಲಿ ಹೇಳದೆ ಸುಮ್ಮನಿರುತ್ತಾರೆ .ಇದು ನಮ್ಮ ಪುರುಷ ಪ್ರಧಾನ ಸಮಾಜ ಹೆಣ್ಣೊಬ್ಬಳನ್ನು ಬಳಸಿಕೊಳ್ಳುತ್ತಿರುವ ರೀತಿ .ಇನ್ನು ಮುಂದಾದರೂ ನಾವು ಹೆಣ್ಣನ್ನು ಗಂಡಿನಂತೆ ಗೌರವಿಸೋಣ .