Friday, 30 December 2011

ಲಂಚ ನಿವಾರಣೆಯಲ್ಲಿ ವಿಧ್ಯಾರ್ಥಿಗಳ ಪತ್ರ -ಲೇಖನ

        ಲಂಚ ನಿವಾರಣೆಯಲ್ಲಿ ವಿಧ್ಯಾರ್ಥಿಗಳ ಪಾತ್ರ
     


                            ಎಲ್ಲೆಂದರಲ್ಲಿ ಲಂಚ  ತನ್ನ ಹರಹನ್ನು ಚಾಚಿಕೊಂಡಿದೆ .ಎಷ್ಟೇ ಲಂಚ ಕೊಟ್ಟರೂ  ಮುಗಿಯದ ದಾಹ .ಎಷ್ಟೇ ಲಂಚವನ್ನು ತಡೆಗಟ್ಟಲು ಪ್ರಯತ್ನಿಸಿದರೂ ಕ್ಯಾನ್ಸರ್ನಂತೆ  ಅದು ನಮಗರಿವಾಗದಂತೆ ಬೆಳೆಯುತ್ತಿದೆ .ಲಂಚ ಯಾವ ಕ್ಷೇತ್ರವನ್ನು ಬಿಟ್ಟಿದೆ ಹೇಳಿ? ಎಲ್ಲ ಕ್ಷೇತ್ರಗಳಂತೆ ನ್ಯಾಯ ,ಕಾನೂನು ಕ್ಷೇತ್ರದಲ್ಲೂ ಲಂಚ ಮೂಗು ತೋರಿಸಿರುವುದು ವಿಪರ್ಯಾಸ .                                                                              ಎಲ್ಲ ಕ್ಷೇತ್ರಗಳಂತೆ ಶಿಕ್ಷಣ ಕ್ಷೇತ್ರವನ್ನೂ ಲಂಚ ಬಿಟ್ಟಿಲ್ಲ .ಪರೀಕ್ಷೆಯ ಪ್ರಷ್ಣಪತ್ರಿಕೆಯ ಮೂಲ ತಿಳಿಯಲು ಲಂಚ ,ತರಗತಿಯಲ್ಲಿ ಮೊದಲ ಸ್ಥಾನ ಗಿಟ್ಟಿಸಲು ಲಂಚ ಶಾಲಾ ನಾಯಕತ್ವದ  ಬಗ್ಗೆ ಲಂಚ,ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಮೊದಲೇ ತಿಳಿಯಲು ಲಂಚ ಪರೀಕ್ಷೆಯಲ್ಲಿ ಒಬ್ಬನ ಪರವಾಗಿ ಇನ್ನೊಬ್ಬ ಪ್ರಶ್ನೆ ಪತ್ರಿಕೆ ಬರೆಯಲು ಲಂಚ -ಹೀಗೆ ಲಂಚ ಶಿಕ್ಷಣ ಕ್ಷೇತ್ರವನ್ನೂ ಬಿಟ್ಟಿಲ್ಲ.ಮಕ್ಕಳ ರೀತಿ ಹೀಗಾದರೆ ,ವರ್ಗಾವಣೆಗೆ ಬೇಕಾಗಿ ಲಂಚ,ಬಿ .ಓ. ಗಳನ್ನು ಒಲಿಸಿಕೊಳ್ಳಲು ಲಂಚ -ಇದೊಂದು ರೀತಿ.                                                                                                                    ಯೋಗ್ಯ ಶಿಕ್ಷಕರು ಶಾಲೆಯಲ್ಲಿ ಇದ್ದರೆ ಇದಕ್ಕೆ ಅವಕಾಶವನ್ನು  ನೀಡಲಾರರು .ತನಗೆ ಬಂದ ಸಂಬಳದಲ್ಲಿ ತ್ರಿಪ್ತರಾಗಿ ಆರಕ್ಕೇರದೆ ಮೂರಕ್ಕಿಳಿಯದೆ ಲಂಚದಿಂದ ದೂರವಿರುತ್ತಾರೆ .ವಿಧ್ಯಾರ್ಥಿಗಳು ಯಾವುದೇ ಭಯ ಪಡದೆ ಲಂಚದ ಬಗ್ಗೆ ಗುರುಗಳಲ್ಲಿ ಕೇಳಿ ತಿಳಿದುಕೊಳ್ಳಬೇಕು .ಶಿಕ್ಷಕರು ಕೂಡಾ ತರಗತಿಗಳಲ್ಲಿ ಲಂಚದ ದುಷ್ಪರಿನಮದ ಬಗ್ಗೆ ವಿಧ್ಯಾರ್ಥಿಗಳಿಗೆ ವಿವರಿಸಿ ಹೇಳಬೇಕು.ಒಬ್ಬ ಲಂಚ ಕೊಟ್ಟವ ಇನ್ನೊಬ್ಬನಿಂದ ಲಂಚ ಪಡೆಯುವುದು ಶತಸ್ಸಿದ್ದ .ಲಂಚ ಕೊಟ್ಟು ಪಾಸಾದ ವಿಧ್ಯಾರ್ಥಿಗಳು ಸಮಾಜದಲ್ಲಿ ಅನಾಹುತವನ್ನೇ ಮಾಡುತ್ತಾರೆ .ಅವರಿಂದ ಅಭಿವ್ರಿದ್ದಿ ಸಾಧ್ಯವಿಲ್ಲ .ಲಂಚದಿಂದ ಪಾಸಾದ ಒಬ್ಬ ಇನ್ಜಿನಿಅರ್ ,ಒಬ್ಬ ಡಾಕ್ಟರ್ ,ಒಬ್ಬ ವಕೀಲ ಯಾವ ರೀತಿಯ ಸಮಾಜ ಸೃಷ್ಟಿ ಮಾಡಬಲ್ಲರು ನೀವೇ ಊಹಿಸಿ .ಅಂಥವರು ಪಾಸಾಗಲು ಕೊಟ್ಟ ಲಂಚವನ್ನು ಸಮಾಜದ ಬಡ ವರ್ಗದಿಂದ ಕಸಿಯುತ್ತಾರೆ .ಇದರ ಬಗ್ಗೆ ವಿಧ್ಯಾರ್ಥಿಗಳಿಗೆ ಯೆಚರವಿದ್ದರೆ ಒಳಿತು .                                                     ಶಾಲೆಯಲ್ಲಿ ನಡೆಯುವ ಲಂಚದ,ಅವ್ಯವಹಾರದ ಬಗ್ಗೆ ವಿಧ್ಯಾರ್ಥಿಗಳಿಗೆ ಅರಿವಾದರೆ ಅವರು ಉನ್ನತ ಅಧಿಕಾರಿಗಳಿಗೆ ದೂರನ್ನು ನೀಡಬಹುದು .ಅವರು ನಿಮ್ಮ ಹೆಸರನ್ನು ಗೌಪ್ಯವಾಗಿಡುತ್ತಾರೆ.ಲಂಚ ಪಡೆದವರನ್ನು ಅಮಾನತುಗೊಲಿಸುತ್ತಾರೆ .ವೈಯಕ್ತಿಕವಾಗಿ ಲಂಚಕೋರರನ್ನು ಸದೆಬಡಿಯುವುದು ಕಷ್ಟ .ಸಾಮೂಹಿಕವಾಗಿ ಲಂಚಕೋರರನ್ನು ಎದುರಿಸಬೇಕು .ಆಗ ಸ್ವಲ್ಪವಾದರೂ ಲಂಚದ ಮಾರಿ ದೂರ ಸರಿದೀತು .ಯಾವುದೇ ಶಿಕ್ಷಣ ಸಂಸ್ಥೆ ಲಂಚ ತೆಗೆದುಕೊಳ್ಳುತ್ತಿದ್ದಾರೆ ಆಯಾ ಕ್ಷೇತ್ರದ ಸಂಪನ್ಮೂಲ ಅಧಿಕಾರಿಗಳಿಗೆ ತಿಳಿಸಬಹುದು .ಶಾಲೆಯಲ್ಲಿ ಲಂಚ ಸ್ವೀಕರಿಸುತ್ತಿದ್ದಾರೆ ಅದನ್ನು ಪ್ರಶ್ನಿಸುವ ನೈತಿಕ ಹಕ್ಕು ವಿಧ್ಯಾರ್ಥಿಗಲಿಗಿದೆ .ಒಬ್ಬ ವಿದ್ಯಾರ್ಥಿ ಇಂಥ ಗುಣವನ್ನು ಮಿಗೂಡಿಸಿದರೆ ಇತರ ವಿಧ್ಯಾರ್ಥಿಗಳು ನಿಮ್ಮನ್ನು ಹಿಂಬಾಲಿಸುತ್ತಾರೆ .                                ವರದಕ್ಷಿನೆಯೂ ಒಂದು ರೀತಿಯ ಲಂಚದ ಮೂಲ ಸೆಲೆ .ಮೈಗಳ್ಳತನ ಹುಡುಗರಲ್ಲಿ ಇದರಿಂದಾಗಿಯೇ ಮೈಗೂಡಿಕೊಳ್ಳುತ್ತದೆ.ಇದನ್ನು ಪ್ರಶ್ನಿಸುವ ಹಕ್ಕು ವಿಧ್ಯಾರ್ಥಿಗಲಿಗಿದೆ .ಒಬ್ಬ ಪಂಚಾಯತ್ ಉಗ್ರಾಣಿ ,ಪೇದೆಯಿಂದ ಹಿಡಿದು ಎಲ್ಲ ಸರಕಾರೀ,ಸರಕಾರೇತರ  ಅಭ್ಯರ್ಥಿಗಳಿಂದ ಹಿಡಿದು ಯಾರು ಲಂಚ ಪಡೆದರೂ ಅವರಿಂದ ಉನ್ನತ ಅಧಿಕಾರಿಗಳಿಗೆ ದೂರನ್ನು ನೀಡಬಹುದು .ಇದರಿಂದ ನೀವು ಒಳ್ಳೆಯ ಸಮಾಜದ ನಿರಮಾತ್ರ್ಗಲಾಗುತ್ತೀರಿ.                                                                                                             ಒಬ್ಬ ಲಂಚ ತೆಗೆದುಕೊಲ್ಲುವವನಿಗೆ ಎಷ್ಟು ಪಾಪವಿದೆಯೋ ಕೊತ್ತವನಿಗೂ ಅಷ್ಟೇ ಪಾಪವಿದೆ .ಅಂತೆಯೇ ಲಂಚಕೊಡುವ ,ಪದೆಯುವವರನ್ನು ನೋಡಿ ವಿಧ್ಯಾರ್ಥಿಗಳು ಸುಮ್ಮನಿದ್ದರೂ ಅದರ ಪಾಪದ ಫಲ ನಿಮ್ಮ ಮೈಗೂ ಅಂಟಿಕೊಳ್ಳುತ್ತದೆ .ಭವ್ಯ ಭಾರತದ ಕನಸ ಹೋತ ವಿಧ್ಯಾರ್ಥಿಗಳು ಲಂಚದ ಬಗ್ಗೆ ಜಾಗ್ರಿತರಾಗಬೇಕು .ಪ್ರಾಥಮಿಕ ಶಿಕ್ಷನದಿಂದಲೇ ವಿಧ್ಯಾರ್ಥಿಗಳಿಗೆ ಲಂಚದ ಬಗ್ಗೆ ,ಅದರ ಅನಾಹುತದ ಬಗ್ಗೆ ಗುರುಗಳು,ತಂದೆ ತಾಯಂದಿರು  ಮನವರಿಕೆ ಮಾಡಬೇಕು .ಶಾಲೆಗಳಲ್ಲಿ ಮಧ್ಯಪಾನ ಮಾಡಿ ಬರುವ ,ಬೀದಿ ಸಿಗರೇಟ್ ಸೇದುವ ,ಪಾನ್ಪರಾಗ್ ತಿನ್ನುವ ಗುರುಗಳನ್ನು ಹೇಗೆ ನೀವು ವಿರೋಧಿಸುತ್ತೀರೋ ಅಂತೆಯೇ ಲಂಚ ತೆಗೆಯುವ ಶಿಕ್ಷಕರನ್ನು ,ಸಂಸ್ಥೆಗಳನ್ನು ವಿರೋಧಿಸಬೇಕು .ಮಾನಸಿಕ ,ದೈಹಿಕ ,ಲೈಂಗಿಕ ಹಿಂಸೆ ಕೊಡುವ ಗುರುಗಳನ್ನು ಹೆದರದೆ ,ನಾಚಿಕೆ ಪಡದೆ ಹಿರಿಯ ಅಧಿಕಾರಿಗಳಿಗೆ ಒಪ್ಪಿಸಿ .ಲಂಚದಿಂದಾಗಿ ಯೋಗ್ಯರಿಗೆ ಬೆಲೆಸಿಗದೆ ಅಪಾತ್ರರು ಮೆರೆಯುವಂತಾಗಿದೆ ,ಇದು ನಮ್ಮ ದೇಶದ ದುರಂತ.ಲಂಚನಿವರನೆಯಲ್ಲಿ,ಭಾರತದ ಏಳ್ಗೆಯಲ್ಲಿ ವಿಧ್ಯಾರ್ಥಿಗಳೇ ಸಿಂಹಪಾಲು ಪಡೆಯಿರಿ .